ಮಾಡಿಫೈಗೊಂಡು ರಗಡ್ ಲುಕ್‍ನಲ್ಲಿ ಮಿಂಚಿದ ಆರ್‌ಇ ಹಿಮಾಲಯನ್ ಅಡ್ವೆಂಚರ್ ಬೈಕ್
ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕುಗಳ ವಿಭಾಗವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ, ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕುಗಳ ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳಿವೆ. ಆದರೆ ಕೈಗೆಟುಕುವ ಬೆಲೆಯಲ್ಲಿ ಹೀರೋ ಎಕ್ಸ್‌ಪಲ್ಸ್ 200 ಮತ್ತು ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಮಾದರಿಗಳು ಅತ್ಯಂತ ಜನಪ್ರಿಯ ಆಯ್ಕೆಗಳಾಗಿವೆ.

ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಯುವಕರ ಕನಸಿನ ಬೈಕುಗಳಲ್ಲಿ ಒಂದಾಗಿದೆ. ಈ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕ್ ಅನ್ನು ಹೆವಿ ಡ್ಯೂಟಿ ಅಡ್ವೆಂಚರ್ ಗಾಗಿ ಮಾಡಿಫೈಗೊಳಿಸಿದ್ದಾರೆ. ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕನ್ನು ಸಖತ್ ಅಗ್ರೇಸಿವ್ ಆಗಿ ಮಾಡಿಫೈಗೊಳಿಸಿದ್ದಾರೆ. ಅಕ್ಷಯ್ ಪಿ.ಎ ಅವರು ಈ ರೀತಿ ಮಾಡಿಫೈಗೊಳಿಸಿದ್ದಾರೆ. ಈ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ನಾವು ಹಾಲಿವುಡ್ ಸಿನಿಮಾಗಳಲ್ಲಿ ಕಾಣುವ ರೀತಿ ತುಂಭಾ ರಗಡ್ ಲುಕ್ ನಲ್ಲಿ ಮಾಡಿಫೈಗೊಂಡಿದೆ.

ಸ್ಟ್ಯಾಂಡರ್ಡ್ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಮಾದರಿಗೂ ಈ ಮಾಡಿಫೈಗೊಂಡ ಮಾದರಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆಗಳಿವೆ. ಮಾಡಿಫೈಗೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಸ್ಟಾಕ್ ಹೆಡ್‌ಲ್ಯಾಂಪ್ ಅನ್ನು ಟ್ವಿನ್ ಪ್ರೊಜೆಕ್ಟರ್ ಸೆಟಪ್ ಮೂಲಕ ಬದಲಾಯಿಸಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅವುಗಳ ಮೇಲೆ ರಕ್ಷಣಾತ್ಮಕ ಮೆಷ್ ಅಳವಡಿಸಲಾಗಿದೆ. ಇದರೊಂದಿಗೆ ಉದ್ದದ ವಿಂಡ್‌ಸ್ಕ್ರೀನ್ ಅನ್ನು ಜೋಡಿಸಲಾಗಿದೆ. ಟರ್ನ್ ಇಂಡಿಕೇಟರ್ ಅನ್ನು ಹೊಸದಾಗಿ ಅಳವಡಿಸಲಾಗಿದೆ. ಬೈಕ್‌ನಲ್ಲಿ ಎರಡು ಜೆರ್ರಿ ಕ್ಯಾನ್‌ಗಳನ್ನು ಅಳವಡಿಸಲಾಗಿದೆ, ಇವುಗಳು ಫ್ಯೂಯಲ್ ಟ್ಯಾಂಕ್ ಮೇಲೆ ಮತು ಬೈಕಿನ ಬದಿಯಲ್ಲಿ ಕಾಣವಹುದು.

ಮಾಡಿಫೈಗೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನಲ್ಲಿ ಹೆವಿ ಡ್ಯೂಟಿ ಕ್ರ್ಯಾಶ್ ಬಾರ್‌ಗಳನ್ನು ಸಹ ಸ್ಥಾಪಿಸಲಾಗಿದೆ, ಇನ್ನು ರೇರ್ ವ್ಯೂ ಮಿರರ್ ಅನ್ನು ಸಹ ಹೊಸದಾಗಿ ಅಳವಡಿಸಲಾಗಿದೆ.
MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಇನ್ನು ಈ ಮಾಡಿಫೈ ಬೈಕಿನ ಟಯರುಗಳು ಸ್ಪೋರ್ಟಿ-ಕಾಣುವ ಕೆಂಪು ಮತ್ತು ಬಿಳಿ ಟ್ಯಾಪಿಂಗ್ ಅನ್ನು ನೀಡಿದೆ. ಸೀಟುಗಳು ಹೆಚ್ಚುವರಿ ಪ್ಯಾಡಿಂಗ್ ಹೊಂದಿದೆಯೆಂದು ತೋರುತ್ತದೆ, ಒಟ್ಟಾರೆಯಾಗಿ ಡಿಫೈಗೊಂಡ ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕ್ ಅಗ್ರೇಸಿವ್ ಲುಕ್ ನೊಂದಿಗೆ ಆಕರ್ಷಕವಾಗಿದೆ.

ವಿನ್ಯಾಸವನ್ನು ಹೊರತುಪಡಿಸಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕಿನಲ್ಲಿ 411 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಈ ಎಂಜಿನ್ 23.9 ಬಿಹೆಚ್‍ಪಿ ಪವರ್ ಮತ್ತು 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಸ್ಟ್ಯಾಂಡರ್ಡ್ ಹಿಮಾಲಯನ್ ಬೈಕಿನಲ್ಲಿ ಸ್ಪೋಕ್ ವ್ಹೀಲ್, ಎಂಆರ್‍ಎಫ್ ಡ್ಯುಯಲ್ ಪರ್ಪಸ್ ಟಯರ್‍ಗಳನ್ನು ಹೊಂದಿದೆ. ಫ್ಯೂಯಲ್ ಟ್ಯಾಂಕ್, ರೇರ್ ಲಗೇಜ್ ರ್‍ಯಾಕ್‍ನ ಮೇಲಿರುವ ರಾಕ್ ರೆಡ್ ಅಸೆಂಟ್‍ನೊಂದಿಗಿರುವ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇದರ ಜೊತೆಗೆ ಬ್ಲೂ ಹಾಗೂ ವೈಟ್ ಬಣ್ಣವನ್ನು ಹೊಂದಿರುವ ಮಾದರಿಗಳಿವೆ. ಬಾಡಿ ಪ್ಯಾನೆಲ್‍ಗಳು ಗ್ರಾವೆಲ್ ಗ್ರೇ ಬ್ಲಾಕ್ ಬಣ್ಣವನ್ನು ಹೊಂದಿವೆ. ಹೊಸ ಹಿಮಾಲಯನ್ ಬೈಕಿನಲ್ಲಿ ಸ್ವಿಚ್ಎಬಲ್ ಎಬಿಎಸ್ ಮತ್ತು ಹಾರ್ಜಾರ್ಡ್ ಲೈಟ್‍ಗಳನ್ನು ಹೊಂದಿವೆ.

ಈ ಫೀಚರ್ ಅನ್ನು ಹೊಂದಿರುವುದರಿಂದ ಹೆಚ್ಚಿನ ಆಫ್ ರೋಡ್ ಪ್ರಿಯರನ್ನು ಸೆಳೆಯುತ್ತದೆ. ಈ ಸ್ವಿಚ್‍ಬಲ್ ಮಾಡಬಹುದಾದ ಎಬಿಎಸ್ ಆಯ್ಕೆಯ ಸಹಾಯದಿಂದ ಸವಾರನಿಗೆ ಬೈಕಿನ ಮೇಲೆ ಹೆಚ್ಚು ಕಂಟ್ರೋಲ್ ಅನ್ನು ಹೊಂದಬಹುದು.

ಇನ್ನು ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‍ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್‍ಗಳಿವೆ. ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300, ಕೆಟಿಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








