ಯುಕೆನಲ್ಲಿ ಬೆಸ್ಟ್ ಸೆಲ್ಲಿಂಗ್ ಬೈಕ್ ಮಾದರಿಯಾಗಿ ಹೊರಹೊಮ್ಮಿದ ಇಂಟರ್‍ಸೆಪ್ಟರ್ 650
ಕ್ಲಾಸಿಕ್ ಬೈಕ್‌ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬೈಕ್ ಮಾರಾಟ ಜಾಲವನ್ನು ಹೊಂದಿದ್ದು, ಭಾರತದ ನಂತರ ಯುಕೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ.

ಆರ್‌ಇ ಕಂಪನಿಯು ಗ್ರಾಹಕರ ಬೇಡಿಕೆ ತಕ್ಕಂತೆ ಹಲವಾರು ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟವನ್ನು ಹೊಂದಿದ್ದು, ಕಳೆದ ವರ್ಷ ಬಿಡುಗಡೆಗೊಂಡಿದ್ದಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ದೇಶಿಯ ಮಾರುಕಟ್ಟೆಗಿಂತಲೂ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಭಾರತದಲ್ಲಿ ಆರ್‌ಇ ಕಂಪನಿ ನಿರ್ಮಾಣದ 350 ಕ್ಲಾಸಿಕ್ ಬೈಕ್‌ಗಳಿಗೆ ಹೆಚ್ಚು ಬೇಡಿಕೆಯಿದ್ದಲ್ಲಿ ಯುಕೆನಲ್ಲಿ ಇಂಟರ್‌ಸೆಪ್ಟರ್ 650 ಬೈಕ್ ಮಾದರಿಯು ಭರ್ಜರಿಯಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಭಾರತದಿಂದಲೇ ರಫ್ತುಗೊಳ್ಳುವ ಇಂಟರ್‌ಸೆಪ್ಟರ್ 650 ಬೈಕ್ ಮಾದರಿಯು ಅತ್ಯತ್ತಮ ಕ್ಲಾಸಿಕ್ ಸೂಪರ್ ಬೈಕ್ ಮಾದರಿಯಾಗಿದ್ದು, ಭಾರತದಲ್ಲಿ ಮಾರಾಟವಾದ ಪ್ರಮಾಣಕ್ಕಿಂತಲೂ 5 ಪಟ್ಟು ಹೆಚ್ಚು ಇಂಟರ್‌ಸೆಪ್ಟರ್ 650 ಬೈಕ್‌ಗಳು ಯುಕೆನಲ್ಲಿ ಮಾರಾಟಗೊಂಡಿವೆ.

ಯುಕೆನಲ್ಲಿ 2019ರ ಜೂನ್‌ನಿಂದ 2020ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 5 ಬೆಸ್ಟ್ ಸೆಲ್ಲಿಂಗ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಇಂಟರ್‌ಸೆಪ್ಟರ್ 650 ಬೈಕ್ ಮಾದರಿಯು ಮಾರ್ಡನ್ ಕ್ಲಾಸಿಕ್ ವಿನ್ಯಾಸದೊಂದಿಗೆ ಮೋಟಾರ್‌ಸೈಕಲ್ ಪ್ರಿಯರ ಮೆಚ್ಚುಗೆ ಕಾರಣವಾಗಿದೆ.

ಇಂಟರ್ಸೆಪ್ಟರ್ 650 ಬೈಕ್ ಸದ್ಯ ಬಿಎಸ್-6 ಎಂಜಿನ್ ಉನ್ನತೀಕರಣದೊಂದಿಗೆ 649-ಸಿಸಿ ಏರ್ ಕೂಲ್ಡ್ ಪ್ಯಾರಲೆಲ್ ಟ್ವಿನ್ ಎಂಜಿನ್ ಪಡೆದುಕೊಂಡಿದ್ದು, 47-ಬಿಎಚ್‌ಪಿ, 52-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಮಾದರಿಯು 2.65 ಲಕ್ಷ ಬೆಲೆ ಹೊಂದಿದ್ದು, ಬಿಎಸ್-4 ಮಾದರಿಗಿಂತ ಹೊಸ ಎಂಜಿನ್ ಮಾದರಿಯು ರೂ. 10 ಸಾವಿರದಷ್ಟು ದುಬಾರಿಯಾಗಿದೆ.

ಇನ್ನು ಕರೋನಾ ವೈರಸ್‌ನಿಂದ ತಗ್ಗಿದ್ದ ವಾಹನ ಮಾರಾಟವು ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಬಹುತೇಕರು ಸ್ವಂತ ಬಳಕೆಯ ವಾಹನಗಳಿಗೆ ಆದ್ಯತೆ ನೀಡುತ್ತಿರುವುದು ಹೊಸ ವಾಹನಗಳಿಗೆ ಭರ್ಜರಿ ಬೇಡಿಕೆ ಉಂಟಾಗಬಹುದು ಎಂದು ನೀರಿಕ್ಷಿಸಲಾಗಿದೆ.
MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಸದ್ಯದ ಪರಿಸ್ಥಿತಿಯಲ್ಲಿ ವಾಹನ ಮಾರಾಟವು ಇಳಿಕೆಯಲ್ಲಿದ್ದರೂ ಮುಂಬರುವ ದಿನಗಳಲ್ಲಿ ಚೇತರಿಕೆ ಕಾಣುವ ವಿಶ್ವಾಸದಲ್ಲಿರುವ ಆಟೋ ಕಂಪನಿಗಳು ವಿವಿಧ ಮಾದರಿಯ ಮತ್ತಷ್ಟು ಹೊಸ ವಾಹನಗಳ ಬಿಡುಗಡೆಗೆ ಸಿದ್ದತೆ ನಡೆಸುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕಂಪನಿಯು ಕೂಡಾ ವಾಹನ ಮಾರಾಟ ಮಳಿಗೆಗಳನ್ನು ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ 2ನೇ ಮತ್ತು 3ನೇ ಹಂತಗಳಲ್ಲೂ ಹೆಚ್ಚಿಸುತ್ತಿದೆ.

ಲಾಕ್‌ಡೌನ್ ಸಡಿಲಿಕೆಯ ನಂತರ ಬಹುತೇಕ ವಾಹನ ಮಾದರಿಗಳ ಬೇಡಿಕೆ ಪ್ರಮಾಣವು ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗುವ ನೀರಿಕ್ಷೆಯಿದೆ.
MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಈ ನಿಟ್ಟಿನಲ್ಲಿ ಮಾರುಕಟ್ಟೆ ಅಧ್ಯಯನ ನಡೆಸಿರುವ ರಾಯಲ್ ಎನ್‌ಫೀಲ್ಡ್ ಮಾತೃಸಂಸ್ಥೆಯಾದ ಐರಿಷ್ ಮೋಟಾರ್ಸ್ ಕಂಪನಿಯು ದ್ವಿಚಕ್ರ ವಾಹನ ಮಾರಾಟ ವ್ಯಾಪ್ತಿ ಹೆಚ್ಚಿಸಲು ಮುಂದಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಉತ್ಸುಕವಾಗಿದೆ.


Click it and Unblock the Notifications