ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಟಿವಿಎಸ್ ಮೋಟಾರ್ ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಕ್ರೂಸರ್ ಕಾನ್ಸೆಪ್ಟ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಬೈಕ್ ಮಾದರಿಯು ಬಜಾಜ್ ಅವೆಂಜರ್ ಕ್ರೂಸರ್ ಬೈಕ್ ಆವೃತ್ತಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಝೆಪ್ಲಿನ್ ಹೆಸರಿನೊಂದಿಗೆ ಅನಾವರಣಗೊಂಡಿದ್ದ ಕ್ರೂಸರ್ ಬೈಕ್‌ನ್ನು ಇದೀಗ ಬಿಡುಗಡೆ ಮಾಡುತ್ತಿರುವ ಟಿವಿಎಸ್ ಕಂಪನಿಯು ರೊನಿನ್ ಹೆಸರನ್ನು ಅಧಿಕೃತವಾಗಿ ಕರೆಯುವ ಸಾಧ್ಯತೆಗಳಿದ್ದು, ಕೇಂದ್ರ ಸಾರಿಗೆ ಇಲಾಖೆಯಲ್ಲಿ ಸಲ್ಲಿಕೆ ಮಾಡಲಾಗಿರುವ ಟ್ರೆಡ್‌ಮಾರ್ಕ್ ಅರ್ಜಿಯಲ್ಲಿ ಹೊಸ ಬೈಕ್ ಮಾದರಿಯ ಹೆಸರು ಬಹಿರಂಗವಾಗಿದೆ. ಆದರೆ ಹೊಸ ಬೈಕಿಗಾಗಿ ಪಡೆದುಕೊಳ್ಳಲಾಗಿರುವ ಅಧಿಕೃತ ಹೆಸರು ಕ್ರೂಸರ್ ಮಾದರಿಗಾಗಿ ಪೆಡೆದಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲವಾದರೂ ಬಿಡುಗಡೆಯ ಪಟ್ಟಿಯಲ್ಲಿ ಕಾನ್ಸಪ್ಟ್ ಬೈಕ್ ಮೊದಲ ಹಂತದಲ್ಲಿದೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಹೀಗಾಗಿ ಹೊಸ ರೊನಿನ್ ಹೆಸರು ಹೊಸ ಕ್ರೂಸರ್ ಬೈಕಿಗೆ ಬಳಕೆ ಮಾಡಬಹುದು ಅಥವಾ ಬಿಎಂಡಬ್ಲ್ಯು ಮೊಟೊರಾಡ್ ಜೊತೆಗೂಡಿ ಅಭಿವೃದ್ದಿಗೊಳಿಸುತ್ತಿರುವ ಹೊಸ ಅಡ್ವೆಂಚರ್ ಬೈಕ್ ಮಾದರಿಗಾದರೂ ಬಳಕೆ ಮಾಡಬಹುದಾದ ಸಾಧ್ಯತೆಗಳಿವೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಆದರೆ ಸದ್ಯಕ್ಕೆ ಬಿಡುಗಡೆಯ ಹಂತದಲ್ಲಿರುವ ಕ್ರೂಸರ್ ಬೈಕ್ ಮಾದರಿಗಾಗಿಯೇ ಈ ಹೆಸರು ಬಳಕೆ ಮಾಡಬಹುದಾದ ಸಾಧ್ಯತೆ ಹೆಚ್ಚಿದ್ದು, ಸದ್ಯದಲ್ಲೇ ರೊನಿನ್ ಹೆಸರು ಯಾವ ಬೈಕ್ ಮಾದರಿಗಾಗಿ ಎನ್ನುವುದು ಸ್ಪಷ್ಟವಾಗಲಿದೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಇನ್ನು ಮೆಟ್ರೋ ನಗರ ಪ್ರದೇಶಗಳಲ್ಲಿ ಕ್ರೂಸರ್ ಬೈಕ್‌ಗಳಿಗೆ ಯುವ ಸಮುದಾಯವು ವಿಶೇಷ ಆಸಕ್ತಿ ತೋರುತ್ತಿದ್ದು, ಈ ಹಿನ್ನೆಲೆ ಬಜಾಜ್ ಅವೆಂಜರ್‌ಗಿಂತಲೂ ಉತ್ತಮವಾದ ಹೈ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಥಂಡರ್‌ಬರ್ಡ್ 350 ಆವೃತ್ತಿಗಿಂತಲೂ ಕಡಿಮೆ ಬೆಲೆಯಲ್ಲಿ ಝೆಪ್ಲಿನ್ ಕ್ರೂಸರ್ ಕಾನ್ಸೆಪ್ಟ್ ಬೈಕ್ ಅನ್ನು ನಿರ್ಮಾಣ ಮಾಡಿದೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

2018ರ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನವಾಗಿದ್ದ ಈ ಹೊಸ ಬೈಕ್ ಇದೇ ವರ್ಷದ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಅತ್ಯಾಧುನಿಕ ರೈಡಿಂಗ್ ಸೌಲಭ್ಯದ ಜೊತೆ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿದೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಝೆಪ್ಲಿನ್ ಬೈಕ್ ಮಾದರಿಯು ಇನ್‌ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್‌ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಅರಾಮದಾಯಕ ರೈಡಿಂಗ್ ಸೌಲಭ್ಯವನ್ನು ಒದಗಿಸುವುದ ಜೊತೆಗೆ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಗೂ ಹೆಚ್ಚು ಸಹಕಾರಿಯಾಗಲಿದೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಎಂಜಿನ್ ಸಾಮರ್ಥ್ಯ

ಬಿಎಸ್-6 ವೈಶಿಷ್ಟ್ಯತೆಯ 212 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಮಾದರಿಯನ್ನು ಹೊಂದಿರುವ ಝೆಪ್ಲಿನ್ ಬೈಕ್‌ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 20-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಅವೆಂಜರ್ 220 ಬೈಕಿಗಿಂತೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಜೊತೆಗೆ ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿರುವ ಝೆಪ್ಲಿನ್ ಬೈಕಿನಲ್ಲಿ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ, ಸ್ಮಾರ್ಟ್ ಬಯೋ ಕೀ, ಎಲೆಕ್ಟ್ರಾನಿಕ್ ಸ್ಪಿಡೋ ಮೀಟರ್ ಮತ್ತು ಅಡ್ವೆಂಚರ್ ಬೈಕ್ ರೈಡ್ ಕ್ಷಣಗಳನ್ನು ಸೆರೆಹಿಡಿಯಲು ಹೆಚ್‌ಡಿ ಕ್ಯಾಮೆರಾ ಕೂಡಾ ಪಡೆದುಕೊಂಡಿರಲಿದೆ.

Most Read Articles

Kannada
English summary
TVS Zeppelin Based Ronin Cruiser Likely To Rival Bajaj Avenger. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X