ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಗ್ರಾಹಕ ಸೇವೆಗಳನ್ನು ಒಂದೇ ಸೂರಿನಡಿ ಸರಳಗೊಳಿಸಲು ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಹೊಸ ಆ್ಯಪ್‌ ಮೂಲಕ ಆರ್‌ಇ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ.

ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಿರುವ ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಐಎಸ್ಒ ಮತ್ತು ಅಂಡ್ರಾಯಿಡ್ ಎರಡು ಮಾದರಿಯಲ್ಲೂ ಲಭ್ಯವಿದ್ದು, ಆ್ಯಪ್ ಮೂಲಕವೇ ಹೊಸ ದ್ವಿಚಕ್ರ ವಾಹನಗಳಿಗೆ ಬುಕ್ಕಿಂಗ್ ಸಲ್ಲಿಕೆ ಮಾಡುವುದಲ್ಲದೆ ಸರ್ವಿಸ್ ಸ್ಟೆಟಸ್ ಅನ್ನು ಸಹ ತಿಳಿಯಬಹುದಾಗಿದೆ. ಈ ಮೂಲಕ ಗ್ರಾಹಕರ ಸೇವೆಗಳನ್ನು ಸರಳಗೊಳಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಕಮ್ಯುನಿಟಿ ರೈಡಿಂಗ್ ಸಹ ಹೆಚ್ಚಿಸುವ ಯೋಜನೆ ಹೊಂದಿದೆ.

ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಆರ್‌ಇ ಹೊಸ ಆ್ಯಪ್‌ನಲ್ಲಿ ಲಾಗಿನ್ ಆಗುವ ಮೂಲಕ ಗ್ರಾಹಕರು ಕಂಪನಿಯ ಮಾಹಿತಿಯ ಜೊತೆಗೆ ಗ್ರಾಹಕರ ಸೇವೆಗಳ ಮಾಹಿತಿಯನ್ನು ಸಂಪೂರ್ಣವಾಗಿ ನೀಡಲಿದ್ದು, ಗ್ರಾಹಕರ ಸೇವೆಗಳ ಜೊತೆಗೆ ಹೊಸ ವಾಹನ ಬಿಡುಗಡೆ ಮಾಹಿತಿಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳ ಬೆಲೆ ಮತ್ತು ಬುಕ್ಕಿಂಗ್ ಮಾಹಿತಿ ನೀಡಲಿದೆ.

ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಹಾಗೆಯೇ ಗ್ರಾಹಕರಿಗೆ ಕಾಲಕಾಲಕ್ಕೆ ತಕ್ಕಂತೆ ವಾಹನ ನಿರ್ವಹಣೆ ಮತ್ತು ರೈಡಿಂಗ್ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗೆಗೆ ಆಟೋ ತಜ್ಞರ ಸಲಹೆಗಳನ್ನು ಸಹ ನೀಡಲಿದ್ದು, ಇದಲ್ಲದೆ ಬೈಕ್ ಸರ್ವಿಸ್ ಸ್ಟೆಟಸ್ ತಿಳಿಯಲು ಇದು ಸಾಕಷ್ಟು ಸಹಕಾರಿಯಾಗಿದೆ.

ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಬೈಕ್ ಸರ್ವಿಸ್‌ಗೆ ನೀಡಿದ ತಕ್ಷಣವೇ ಸರ್ವಿಸ್ ಐಡಿ ನೀಡಲಿರುವ ಕಂಪನಿಯು ಅದನ್ನು ಆ್ಯಪ್‌ನಲ್ಲೂ ಅಪ್‌ಡೆಟ್ ಮಾಡುತ್ತದೆ. ತದನಂತರ ಸರ್ವಿಸ್ ವಾಹನದ ಸಂಪೂರ್ಣ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‌ಡೆಟ್ ನೀಡಲಿರುವ ಕಂಪನಿಯು ಸರ್ವಿಸ್ ಹಂತ-ಹಂತವಾಗಿ ಗ್ರಾಹಕರ ಬೇಡಿಕೆ ಅನ್ವಯ ಸರ್ವಿಸ್ ಬೈಕ್ ಅನ್ನು ಅಪ್‌ಗ್ರೆಡ್‌ಗೊಳಿಸಲಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಸರ್ವಿಸ್ ಮುಗಿದ ನಂತರ ಯೂಸರ್ ಮೊಬೈಲ್‌ಗೆ ಮಾಹಿತಿ ನೀಡಲಿರುವ ಕಂಪನಿಯು ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಗೆ ಅವಕಾಶ ನೀಡಿದ್ದು, ಬೇಡಿಕೆಯ ಆಧಾರದ ಮೇಲೆ ಗ್ರಾಹಕರ ಮನೆಬಾಗಿಲಿಗೆ ಸೇವೆಗಳನ್ನು ಒದಗಿಸಲಿದೆ.

ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಸದ್ಯ ಕರೋನಾ ವೈರಸ್ ಪರಿಣಾಮ ಬಹುತೇಕ ಆಟೋ ಕಂಪನಿಗಳು ಕಂಟ್ಯಾಕ್ಟ್ ಲೆಸ್ ಗ್ರಾಹಕ ಸೇವೆಗಳಿಗೆ ಒತ್ತು ನೀಡುತ್ತಿದ್ದು, ರಾಯಲ್ ಎನ್‌ಫೀಲ್ಡ್ ಕೂಡಾ ಸರ್ವಿಸ್ ಆನ್ ವೀಲ್ಹ್ ಮೂಲಕ ವೈರಸ್ ಭೀತಿ ಹೊಗಲಾಡಿಸಲು ಗ್ರಾಹಕರಿಗೆ ಹೊಸ ಆಯ್ಕೆ ನೀಡಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಗ್ರಾಹಕ ಸೇವೆಗಳನ್ನು ಸರಳಗೊಳಿಸಲು ಹೊಸ ಆ್ಯಪ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಆ್ಯಪ್‌ ಮೂಲಕ ಕಮ್ಯುನಿಟಿ ರೈಡಿಂಗ್‌ಗೆ ಹೆಚ್ಚು ಒತ್ತು ನೀಡುತ್ತಿದ್ದು, ಈ ಮೂಲಕ ಅಡ್ವೆಂಚರ್ ವಾಹನಗಳ ಮಾರಾಟವನ್ನು ಹೆಚ್ಚಿಸುವ ನೀರಿಕ್ಷೆಯಲ್ಲಿದೆ ಎನ್ನಬಹುದು.

More from DriveSpark

Article Published On: Friday, August 21, 2020, 12:37 [IST]
English summary
Royal Enfield Launches New Mobile App For Online Purchase, Service Bookings & More. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+