ಬೈಕ್ ಖರೀದಿ ಸುಲಭವಾಗಿಸಲು ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಬೈಕ್ ಕಸ್ಟಮೈಜ್ಡ್ ಸೌಲಭ್ಯಕ್ಕೆ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹರಿದುಬರುತ್ತಿದ್ದು, ಕ್ಲಾಸಿಕ್ ಬೈಕ್ ಮಾರಾಟ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಪ್ರಮುಖ ಬೈಕ್ ಮಾದರಿಗಳಿಗಾಗಿ ಕಸ್ಟಮೈಜ್ಡ್ ಸೌಲಭ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದೆ.

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಹೊಸ ವಾಹನಗಳ ಖರೀದಿ ನಂತರ ಬಹುತೇಕ ಗ್ರಾಹಕರು ತಮ್ಮ ಇಷ್ಟದಂತೆ ಹೊಸ ವಾಹನಗಳನ್ನು ಮತ್ತಷ್ಟು ಆಕರ್ಷಣೆಗೊಳಿಸಲು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಕ್ಲಾಸಿಕ್ ಬೈಕ್ ಮಾದರಿಯಾಗಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಖರೀದಿ ನಂತರ ಕಸ್ಟಮೈಜ್ಡ್‌ಗೆ ಹೆಚ್ಚು ಬೇಡಿಕೆಯಿದ್ದು, ಕಂಪನಿಯೇ ಇದೀಗ ಅಧಿಕೃತವಾಗಿ ಮಾಡಿಫೈ ಸೌಲಭ್ಯಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆದಿದೆ.

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತೆರೆದಿರುವ ಎಂಐವೈ(ಮೇಕ್ ಇಟ್ ಯುವರ್ಸ್) ಪ್ಲ್ಯಾಟ್‌ಫಾರ್ಮ್ ಅಡಿ ಹೊಸ ಬೈಕ್ ಖರೀದಿ ವೇಳೆಯೇ ಆನ್‌ಲೈನ್ ಕಸ್ಟಮೈಜ್ಡ್ ಮಾಡಬಹುದಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯೇ ಹೊಸ ಬೈಕಿನ ಮಾಡಿಫೈ ಸೌಲಭ್ಯಗಳನ್ನು ಸಿದ್ದಪಡಿಸಲಿದೆ.

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಮೇಕ್ ಇಟ್ ಯುವರ್ಸ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರು ಬೈಕ್ ಖರೀದಿಗೆ ಬುಕ್ಕಿಂಗ್ ಸಲ್ಲಿಸಿದ ನಂತರ ಆಫ್ಟರ್ ಮಾರ್ಕೆಟ್ ಮಾಡಿಫೈ ಸೌಲಭ್ಯಗಳನ್ನು ಆನ್‌ಲೈನ್ ಮೂಲಕವೇ ನಿಮ್ಮ ನೆಚ್ಚಿನ ಬೈಕಿಗೆ ಜೋಡಿಸುವ ಮೂಲಕ 3ಡಿ ವ್ಯೂ ಮಾಡಬಹುದಾಗಿದ್ದು, ಕಂಪನಿಯ ಮಾಡಿಫೈ ಸೌಲಭ್ಯಗಳು ಇಷ್ಟವಾದಲ್ಲಿ ಮುಂದುವರಿಸಬಹುದು.

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಕಸ್ಟಮೈಜ್ಡ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಗ್ರಾಹಕರು ತಮ್ಮ ವಾಹನಗಳಿಗೆ ವಿವಿಧ ಬಣ್ಣಗಳ ಆಯ್ಕೆ, ಎಂಜಿನ್ ಗಾರ್ಡ್ ಆಯ್ಕೆಗೆ ಅವಕಾಶ ನೀಡಲಾಗಿದ್ದು, ಕಸ್ಟಮೈಜ್ಡ್ ಸೌಲಭ್ಯಗಳಿಗೆ ಬೆಲೆ ಕೂಡಾ ಆಫ್ಟರ್ ಮಾರ್ಕೆಟ್ ಬೆಲೆಗಳಿಂತಲೂ ಆಕರ್ಷಕವಾಗಿವೆ.

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಇದಲ್ಲದೆ ಗ್ರಾಹಕ ಸೇವೆಗಳನ್ನು ಒಂದೇ ಸೂರಿನಡಿ ಸರಳಗೊಳಿಸಲು ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಹೊಸ ಆ್ಯಪ್‌ ಮೂಲಕ ಆರ್‌ಇ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಆರ್‌ಇ ಬಿಡುಗಡೆ ಮಾಡಿರುವ ಎಕ್ಸ್‌ಪ್ಲೊರ್ ಆ್ಯಂಡ್ ಪ್ಲ್ಯಾನ್ ರೈಡರ್ ಆ್ಯಪ್ ಐಎಸ್ಒ ಮತ್ತು ಅಂಡ್ರಾಯಿಡ್ ಎರಡು ಮಾದರಿಯಲ್ಲೂ ಲಭ್ಯವಿದ್ದು, ಆ್ಯಪ್ ಮೂಲಕವೇ ಹೊಸ ದ್ವಿಚಕ್ರ ವಾಹನಗಳಿಗೆ ಬುಕ್ಕಿಂಗ್ ಸಲ್ಲಿಕೆ ಮಾಡುವುದಲ್ಲದೆ ಸರ್ವಿಸ್ ಸ್ಟೆಟಸ್ ಅನ್ನು ಸಹ ತಿಳಿಯಬಹುದಾಗಿದೆ. ಈ ಮೂಲಕ ಗ್ರಾಹಕರ ಸೇವೆಗಳನ್ನು ಸರಳಗೊಳಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಕಮ್ಯುನಿಟಿ ರೈಡಿಂಗ್ ಸಹ ಹೆಚ್ಚಿಸುವ ಯೋಜನೆ ಹೊಂದಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಹೊಸ ಆ್ಯಪ್‌ನಲ್ಲಿ ಲಾಗಿನ್ ಆಗುವ ಮೂಲಕ ಗ್ರಾಹಕರು ಕಂಪನಿಯ ಮಾಹಿತಿ ಜೊತೆಗೆ ಗ್ರಾಹಕರ ಸೇವೆಗಳ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದ್ದು, ಗ್ರಾಹಕರ ಸೇವೆಗಳ ಜೊತೆಗೆ ಹೊಸ ವಾಹನ ಬಿಡುಗಡೆ ಮಾಹಿತಿಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳ ಬೆಲೆ ಮತ್ತು ಬುಕ್ಕಿಂಗ್ ಮಾಹಿತಿ ನೀಡಲಿದೆ.

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಹಾಗೆಯೇ ಗ್ರಾಹಕರಿಗೆ ಕಾಲಕಾಲಕ್ಕೆ ತಕ್ಕಂತೆ ವಾಹನ ನಿರ್ವಹಣೆ ಮತ್ತು ರೈಡಿಂಗ್ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳ ಬಗೆಗೆ ಆಟೋ ತಜ್ಞರ ಸಲಹೆಗಳನ್ನು ಸಹ ನೀಡಲಿದ್ದು, ಇದಲ್ಲದೆ ಬೈಕ್ ಸರ್ವಿಸ್ ಸ್ಟೆಟಸ್ ತಿಳಿಯಲು ಇದು ಸಾಕಷ್ಟು ಸಹಕಾರಿಯಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಆನ್‌ಲೈನ್ ಕಸ್ಟಮೈಜ್ಡ್ ಸೌಲಭ್ಯ ತೆರೆದ ರಾಯಲ್ ಎನ್‌ಫೀಲ್ಡ್

ಬೈಕ್ ಸರ್ವಿಸ್‌ಗೆ ನೀಡಿದ ತಕ್ಷಣವೇ ಸರ್ವಿಸ್ ಐಡಿ ನೀಡಲಿರುವ ಕಂಪನಿಯು ಅದನ್ನು ಆ್ಯಪ್‌ನಲ್ಲೂ ಅಪ್‌ಡೆಟ್ ಮಾಡುತ್ತದೆ. ತದನಂತರ ಸರ್ವಿಸ್ ವಾಹನದ ಸಂಪೂರ್ಣ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‌ಡೆಟ್ ನೀಡಲಿರುವ ಕಂಪನಿಯು ಸರ್ವಿಸ್ ಹಂತ-ಹಂತವಾಗಿ ಗ್ರಾಹಕರ ಬೇಡಿಕೆ ಅನ್ವಯ ಸರ್ವಿಸ್ ಬೈಕ್ ಅನ್ನು ಅಪ್‌ಗ್ರೆಡ್‌ಗೊಳಿಸಲಿದೆ.

Most Read Articles

Kannada
English summary
Royal Enfield ‘Make-It-Yours’ Launched In India: A Unique Motorcycle Personalization Platform. Read in Kannada.
Story first published: Saturday, October 17, 2020, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X