ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ದೇಶದ ಜನಪ್ರಿಯ ಕ್ಲಾಸಿಕ್ ಬೈಕ್ ಉತ್ಪಾದನಾ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಮೊದಲ ಬಾರಿಗೆ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲು ಸಿದ್ದವಾಗಿದ್ದು, ದಕ್ಷಿಣ ಅಮೆರಿಕದ ಅರ್ಜೆಂಟೀನಾದಲ್ಲಿ ಹೊಸ ಬೈಕ್ ಉತ್ಪಾದನಾ ಘಟಕ ತೆರೆಯುವ ಯೋಜನೆಯಲ್ಲಿದೆ.

ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ವಿವಿಧ ಕ್ಲಾಸಿಕ್ ಮತ್ತು ಅಡ್ವೆಂಚರ್ ಬೈಕ್ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಬೇಡಿಕೆ ಆಧಾರದ ಮೇಲೆ ಮಾರುಕಟ್ಟೆ ವಿಸ್ತರಣೆ ಮಾಡುತ್ತಿದೆ. ಸದ್ಯ ಭಾರತದಿಂದಲೇ ಹಲವು ರಾಷ್ಟ್ರಗಳಿಗೆ ಬೈಕ್ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಅರ್ಜೆಂಟೀನಾದಲ್ಲಿ ತೆರೆಯಲು ಉದ್ದೇಶಿರುವ ಹೊಸ ಬೈಕ್ ಉತ್ಪಾದನಾ ಘಟಕದಿಂದ ಅಮೆರಿಕ ಮತ್ತು ಯುರೋಪಿನ್ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸಲು ಸಜ್ಜುಗೊಳ್ಳುತ್ತಿದೆ.

ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ಬೇಡಿಕೆ ಹೆಚ್ಚುತ್ತಿರುವುದರಿಂದ ಚೆನ್ನೈ ಹೊರವಲಯದಲ್ಲಿರುವ ಘಟಕವನ್ನೇ ವಿಸ್ತರಣೆ ಮಾಡಲು ಮುಂದಾಗಿದ್ದ ರಾಯಲ್ ಎನ್‌ಫೀಲ್ಡ್ ಕಂಪನಿಯು ಇದೀಗ ಮತ್ತೊಂದು ಹೊಸ ಘಟಕವನ್ನು ತೆರೆಯಲು ಸಿದ್ದವಾಗುತ್ತಿದ್ದು, ಭಾರತದಲ್ಲಿ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುವ ಯೋಜನೆಯಲ್ಲಿದೆ.

ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ಇನ್ನು ಲಾಕ್‌ಡೌನ್ ಪರಿಣಾಮ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ವೈರಸ್ ಭೀತಿಯಿಂದಾಗಿ ಸ್ವಂತ ವಾಹನಗಳ ಬಳಕೆ ಆದ್ಯತೆ ನೀಡಲಾಗುತ್ತಿದ್ದು, ಕಾರು ಮಾರಾಟ ಪ್ರಮಾಣಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳ ಬೇಡಿಕೆಯು ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ಲಾಕ್‌ಡೌನ್ ಸಡಿಲಿಕೆಯ ನಂತರ ಬಹುತೇಕ ವಾಹನ ಮಾದರಿಗಳ ಬೇಡಿಕೆ ಪ್ರಮಾಣವು ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಸಹ ಗಣನೀಯವಾಗಿ ಹೆಚ್ಚಳವಾಗುವ ನೀರಿಕ್ಷೆಯಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ಈ ನಿಟ್ಟಿನಲ್ಲಿ ಮಾರುಕಟ್ಟೆ ಅಧ್ಯಯನ ನಡೆಸಿರುವ ರಾಯಲ್ ಎನ್‌ಫೀಲ್ಡ್ ಮಾತೃಸಂಸ್ಥೆಯಾದ ಐರಿಷ್ ಮೋಟಾರ್ಸ್ ಕಂಪನಿಯು ದ್ವಿಚಕ್ರ ವಾಹನ ಮಾರಾಟ ವ್ಯಾಪ್ತಿ ಹೆಚ್ಚಿಸಲು ಮುಂದಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಉತ್ಸುಕವಾಗಿದೆ.

ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ಬಿಎಸ್-6 ಎಮಿಷನ್ ಜಾರಿ ನಂತರ ಹೊಸ ಬೈಕ್ ಮಾದರಿಗಳ ಮಾರಾಟ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಕೆಲವು ಬೈಕ್ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದರೆ ಇನ್ನು ಕೆಲವು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಮೊದಲ ಸಾಗರೋತ್ತರ ಬೈಕ್ ಉತ್ಪಾದನಾ ಘಟಕ ತೆರೆಯಲಿದೆ ರಾಯಲ್ ಎನ್‌ಫೀಲ್ಡ್

ಥಂಡರ್‌ಬರ್ಡ್ ಬದಲಾಗಿ ಪರಿಚಯಿಸಲಾಗುತ್ತಿರುವ ಮೊಟೊರ್ 350 ಕ್ಲಾಸಿಕ್ ಬೈಕ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಸ್ಥಗಿತಗೊಂಡಿರುವ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಹಲವು ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದೆ.

Most Read Articles

Kannada
English summary
Royal Enfield opens first assembling plant out of India. Read in Kannada.
Story first published: Thursday, September 10, 2020, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X