Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೀವ್ರ ಪೈಪೋಟಿಯ ನಡುವೆಯೂ ನಂಬರ್ 1 ಸ್ಥಾನದಲ್ಲಿ ಮುಂದುವರೆದ ರಾಯಲ್ ಎನ್‌ಫೀಲ್ಡ್
ಕ್ಲಾಸಿಕ್-ರೆಟ್ರೊ ಶೈಲಿಯ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಹೋಂಡಾ, ಮಹೀಂದ್ರಾ, ಟಿವಿಎಸ್, ಯಮಹಾ, ಬಜಾಜ್, ಕೆಟಿಎಂ, ಜಾವಾ ಹಾಗೂ ಕವಾಸಕಿ ಸೇರಿದಂತೆ ಹಲವು ಕಂಪನಿಗಳು 251 ಸಿಸಿ - 500 ಸಿಸಿ ಸೆಗ್'ಮೆಂಟಿನಲ್ಲಿ ಬೈಕುಗಳನ್ನು ಮಾರಾಟ ಮಾಡುತ್ತಿವೆ.

ಈ ಕಂಪನಿಗಳ ಪೈಪೋಟಿಯ ನಡುವೆಯೂ ರಾಯಲ್ ಎನ್‌ಫೀಲ್ಡ್ ಕಂಪನಿಯು 251 ಸಿಸಿ - 500 ಸಿಸಿ ಸೆಗ್ ಮೆಂಟಿನಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಈ ವರ್ಷದ ಏಪ್ರಿಲ್ - ನವೆಂಬರ್ ತಿಂಗಳ ಅವಧಿಯ ಮಾರಾಟದ ಅಂಕಿ ಅಂಶಗಳಿಂದ ರಾಯಲ್ ಎನ್‌ಫೀಲ್ಡ್ ಬೈಕುಗಳು ಈ ಸೆಗ್'ಮೆಂಟಿನಲ್ಲಿ ಪ್ರಾಬಲ್ಯ ಹೊಂದಿರುವುದು ಕಂಡುಬಂದಿದೆ.

ಈ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಒಟ್ಟು 3,11,388 ಯುನಿಟ್ ಬೈಕ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಪೈಕಿ ಕ್ಲಾಸಿಕ್ 350 ಬೈಕಿನ ಬೈಕುಗಳು 70%ನಷ್ಟು ಮಾರಾಟವಾಗಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಸೆಗ್ ಮೆಂಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ ಹತ್ತಿರದ ಪ್ರತಿಸ್ಪರ್ಧಿಗಳಾದ ಬಜಾಜ್ ಹಾಗೂ ಕೆಟಿಎಂಕಂಪನಿಗಳು ಈ ಅವಧಿಯಲ್ಲಿ 9,870 ಯುನಿಟ್ ಬೈಕುಗಳನ್ನು ಮಾರಾಟ ಮಾಡಿವೆ.

ರಾಯಲ್ ಎನ್‌ಫೀಲ್ಡ್ ಮಾರಾಟಕ್ಕೆ ಹೋಲಿಸಿದರೆ ಬಜಾಜ್ ಹಾಗೂ ಕೆಟಿಎಂ ಬೈಕುಗಳ ಮಾರಾಟವು ಕೇವಲ 3%ನಷ್ಟಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಗೆ ಟಾಂಗ್ ನೀಡಲು ಬಜಾಜ್ ಕಂಪನಿಯು ಹಾಥಿ ಮತ್ ಪಾಲೊ ಎಂಬ ಜಾಹೀರಾತನ್ನು ಆರಂಭಿಸಿತ್ತು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆದರೆ ಈ ಜಾಹೀರಾತಿನಿಂದ ಬಜಾಜ್ ಕಂಪನಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಈ ಅವಧಿಯಲ್ಲಿ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ಕೇವಲ 5,357 ಯುನಿಟ್ ಬೈಕುಗಳನ್ನು ಮಾರಾಟ ಮಾಡಿದೆ.

ಟಿವಿಎಸ್ ಹಾಗೂ ಬಿಎಂಡಬ್ಲ್ಯು ಕಂಪನಿಗಳು ಈ ಅವಧಿಯಲ್ಲಿ 2,189 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿವೆ. ಇದೇ ವೇಳೆ ಮಹೀಂದ್ರಾ ಕಂಪನಿಯು ಕೇವಲ 179 ಯೂನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

2020ರ ಏಪ್ರಿಲ್ - ನವೆಂಬರ್ ನಡುವೆ 251 ಸಿಸಿ - 500 ಸಿಸಿ ಸೆಗ್ ಮೆಂಟಿನಲ್ಲಿ ಒಟ್ಟು 3,28,983 ಯುನಿಟ್ ಬೈಕುಗಳನ್ನು ಮಾರಾಟ ಮಾಡಲಾಗಿದೆ. ಈ ಪೈಕಿ ರಾಯಲ್ ಎನ್‌ಫೀಲ್ಡ್ ಕಂಪನಿಯೇ 3,11,388 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸುಮಾರು 95%ನಷ್ಟು ಪಾಲನ್ನು ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ 650 ಸಿಸಿ ಮಾದರಿಯನ್ನು ಮೊದಲ ಬಾರಿಗೆ ಪರೀಕ್ಷಿಸುತ್ತಿದೆ. ಈ ಪರೀಕ್ಷಾ ಮಾದರಿಯಲ್ಲಿರುವ ಟೇಲ್ ಲ್ಯಾಂಪ್ ಹಾಗೂ ಸ್ಕ್ವೇರ್ ಟರ್ನ್ ಇಂಡಿಕೇಟರ್ ಗಳು ಇಂಟರ್ ಸೆಪ್ಟರ್ 650ಯನ್ನು ಹೋಲುತ್ತವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇದರ ಜೊತೆಗೆ ಫುಟ್‌ಪೆಗ್, ರೇರ್ ಫೆಂಡರ್ ಹಾಗೂ ರೇರ್ ಸಸ್ಪೆಂಷನ್ ಗಳು ಈ ಹೊಸ 650 ಸಿಸಿ ಮಾದರಿಯಲ್ಲಿ ಕಂಡು ಬಂದಿವೆ. ಈ ಪರೀಕ್ಷಾ ಮಾದರಿಯು ಕಪ್ಪು ಬಣ್ಣದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಈ ಬೈಕಿನಲ್ಲಿ 349 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ ಎಂದು ಹೇಳಲಾಗಿದೆ.

ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕುಗಳಿಗೆ ಆಕರ್ಷಕ ಲುಕ್ ನೀಡಲು ಕಂಪನಿಯು ಆ ಬೈಕುಗಳನ್ನು ಅಲಾಯ್ ವ್ಹೀಲ್‌ಗಳೊಂದಿಗೆ ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಹೊಸ ಟ್ವಿನ್ ಬೈಕುಗಳ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.