ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ರಾಯಲ್ ಎನ್‌ಫೀಲ್ಡ್
ರಾಯಲ್ ಎನ್‌ಫೀಲ್ಡ್ ಕಂಪನಿಯ ಮಾರಾಟವು ನಿಧಾನವಾಗಿ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 60,000 ಯುನಿಟ್‍ಗಳನ್ನು ಮಾರಾಟ ಮಾಡಿದೆ.

ಕರೋನಾ ಸೋಂಕಿನಿಂದ ರಾಯಲ್ ಎನ್‌ಫೀಲ್ಡ್ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಮಾರಟದಲ್ಲಿ ಉತ್ತಮ ಚೇತರಿಕೆಯನ್ನು ಕಂಡಿದೆ. 2020ರ ಮೇ ತಿಂಗಳಲ್ಲಿ 20,000 ಕ್ಕಿಂತ ಕಡಿಮೆ ಯುನಿಟ್‍ಗಳು ಮಾರಾಟವಾಗಿತ್ತು. ಇನ್ನು 2020ರ ಆಗಸ್ಟ್ ತಿಂಗಳಲ್ಲಿ 50,000 ಯುನಿಟ್‍ಗಳು ಮಾರಾಟ ಮಾಡವಾಗಿತ್ತು. ಇನ್ನು 2020ರ ಸೆಪ್ಟೆಂಬರ್ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯ 60,000 ಯುನಿಟ್‍ಗಳು ಮಾರಾಟವಾಗಿವೆ.

2020ರ ಸೆಪ್ಟೆಂಬರ್ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 55,910 ಯುನಿಟ್‍ಗಳನ್ನು ಮಾರಟ ಮಾಡಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 54,858 ಯುನಿಟ್‍ಗಳನ್ನು ಮಾರಾಟ ಮಾಡಿದ್ದರು.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟವನ್ನು ಹೋಲಿಸಿದರೆ ಈ ಬಾರಿ ಶೇ.2 ರಷ್ಟು ಬೆಳವಣಿಗೆಯನ್ನು ಗಳಿಸಿದೆ. 2020ರ ಆಗಸ್ಟ್ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 47,571 ಯುನಿಟ್‍ಗಳನ್ನು ಮಾರಟ ಮಾಡಿದ್ದರು.

2020ರ ಆಗಸ್ಟ್ ತಿಂಗಳ ಮಾರಟವನ್ನು ಸೆಪ್ಟೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.17.5 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಿದೆ. ಇನ್ನು 2020ರ ಸೆಪ್ಟೆಂಬರ್ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 4,131 ಯುನಿಟ್‍ಗಳನ್ನು ರಫ್ತು ಮಾಡಿದ್ದಾರೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 4,642 ಯುನಿಟ್‍ಗಳನ್ನು ರಫ್ತು ಮಾಡಿದ್ದರು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ರಫ್ತಿಗೆ ಈ ವರ್ಷದ ಅದೇ ತಿಂಗಳಿಗೆ ಹೋಲಿಸಿದರೆ ಶೇ.11 ರಷ್ಟು ಕುಸಿತವಾಗಿದೆ.

ಇತ್ತೀಚೆಗೆ ಕಂಪನಿಯು ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಬೈಕುಗಳನ್ನು ವಿತರಿಸಿತ್ತು. ಈ ಮೂಲಕ ಕಂಪನಿಯು ಮುಂಬರುವ ಹಬ್ಬದ ವೇಳೆಗೆ ಇನ್ನೂ ಹೆಚ್ಚಿನ ಪ್ರಮಾಣದ ಮಾರಾಟವನ್ನು ನಿರೀಕ್ಷಿಸುತ್ತಿದೆ. ಹೊಸ ಬೈಕುಗಳ ಬಿಡುಗಡೆಯು ಸಹ ಕಂಪನಿಗೆ ಇನ್ನಷ್ಟು ಲಾಭದಾಯಕವಾಗಿರಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ತನ್ನ ಜನಪ್ರಿಯ ಬಿಎಸ್-6 ಹಿಮಾಲಯನ್ ಬೈಕನ್ನು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇತ್ತೀಚೆಗೆ ಬಿಎಸ್-6 ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಬೆಲೆಯನ್ನು ಎರಡನೇ ಬಾರಿ ಹೆಚ್ಚಿಸಿದೆ.

ಬಿಎಸ್-6 ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಎಲ್ಲಾ ರೂಪಾಂತರಗಳಿ ಅನುಗುಣವಾಗಿ ರೂ.1,837 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ. ಬೆಲೆ ಏರಿಕೆಯ ಬಳಿಕ, ಬಿಎಸ್-6 ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿನ ಆರಂಭಿಕ ಬೆಲೆಯು ರೂ.1.91 ಲಕ್ಷಗಳಾಗಿದೆ.

ರಾಯಲ್ ಎನ್‍ಫೀಲ್ಡ್ ತನ್ನ ಮೆಟಿಯೋರ್ 350 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ರಾಯಲ್ ಎನ್‍ಫೀಲ್ಡ್ ತನ್ನ ಮೆಟಿಯೋರ್ 350 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.


Click it and Unblock the Notifications