ಡಿಜಿಟಲ್ ಕಾರ್ಯಾಚರಣೆ ಆರಂಭಿಸಿದ ರಾಯಲ್ ಎನ್‌ಫೀಲ್ಡ್
ಕ್ಲಾಸಿಕ್ ರೆಟ್ರೊ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಲಾಕ್‌ಡೌನ್ ಮುಗಿದ ನಂತರ ಭಾರತದಲ್ಲಿರುವ 90%ಗೂ ಹೆಚ್ಚು ಶೋರೂಂ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ತೆರೆದಿದೆ. ಲಾಕ್‌ಡೌನ್ ತೆರವಿನ ನಂತರವೂ ಶೋರೂಂಗಳಲ್ಲಿ ಗ್ರಾಹಕರ ಕೊರತೆ ಉಂಟಾಗಿದೆ.

ಈ ಕಾರಣಕ್ಕೆ ಕಂಪನಿಯು ಬೈಕುಗಳ ಮಾರಾಟಕ್ಕಾಗಿ ಹೊಸ ವಿಧಾನವನ್ನು ಪರಿಚಯಿಸಿದೆ.ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಬೈಕು ಮಾರಾಟಕ್ಕಾಗಿ ಆನ್‌ಲೈನ್ ವೇದಿಕೆಯನ್ನು ಆರಂಭಿಸಿದೆ. ಬೈಕ್ ಮಾರಾಟಕ್ಕಾಗಿ ಕಂಪನಿಯು ಆನ್‌ಲೈನ್ ಬುಕ್ಕಿಂಗ್‌ಗಳನ್ನು ಆರಂಭಿಸಿದೆ.

ಇದರಡಿಯಲ್ಲಿ, ಗ್ರಾಹಕರು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು, ಜೊತೆಗೆ ಹಣಕಾಸು ಸೌಲಭ್ಯವನ್ನು ಸಹ ಪಡೆಯಬಹುದು. ಕಂಪನಿಯು ಬೈಕ್‌ಗಳ ಟೆಸ್ಟ್ ಡ್ರೈವ್‌ಗಾಗಿ ಆನ್‌ಲೈನ್ ಬುಕ್ಕಿಂಗ್ ಆಯ್ಕೆಯನ್ನು ಸಹ ಆರಂಭಿಸಿದೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಇದರ ಜೊತೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಪಿಕ್-ಅಪ್ ಹಾಗೂ ಹೋಮ್ ಸರ್ವೀಸ್ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ. ಕಂಪನಿಯು ದೇಶದ ಆಯ್ದ ನಗರಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಿದೆ. ರಾಯಲ್ ಎನ್‌ಫೀಲ್ಡ್ ಜೂನ್ 6ರಿಂದ ಹಂತಹಂತವಾಗಿ ದೇಶಾದ್ಯಂತವಿರುವ ತನ್ನ ಶೋರೂಂಗಳನ್ನು ತೆರೆಯಲು ಆರಂಭಿಸಿದೆ.

ಕಂಪನಿಯು ಸದ್ಯಕ್ಕೆ 850 ಮಳಿಗೆ ಹಾಗೂ 425 ಸ್ಟುಡಿಯೋಗಳನ್ನು ತೆರೆದಿದೆ. ಇದರೊಂದಿಗೆ ಸಪ್ಲೈ ಚೈನ್ ಅನ್ನು ಸಹ ಆರಂಭಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಬಿಡುಗಡೆಗೊಳಿಸಿರುವ ಮೇ ತಿಂಗಳ ಮಾರಾಟ ವರದಿಯ ಪ್ರಕಾರ, ಕಂಪನಿಯು ಮೇ ತಿಂಗಳಿನಲ್ಲಿ 69%ನಷ್ಟು ನಷ್ಟವನ್ನು ಅನುಭವಿಸಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ರಾಯಲ್ ಎನ್‌ಫೀಲ್ಡ್ ಕಂಪನಿಯು ಮೇ ತಿಂಗಳಿನಲ್ಲಿ 19,113 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2019ರ ಮೇ ತಿಂಗಳಿನಲ್ಲಿ 62,371 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2,160 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಲಾಗಿದ್ದರೆ, ಈ ವರ್ಷ 648 ದ್ವಿಚಕ್ರ ವಾಹನಗಳನ್ನು ರಫ್ತು ಮಾಡಲಾಗಿದೆ.

ಈ ಮೂಲಕ ರಫ್ತಿನಲ್ಲಿ 68%ನಷ್ಟು ನಷ್ಟ ಉಂಟಾಗಿದೆ. ಇತ್ತೀಚೆಗಷ್ಟೇ ಕಂಪನಿಯು ತನ್ನ ಗ್ರಾಹಕರಿಗೆ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ಎರಡು ತಿಂಗಳವರೆಗೆ ವಿಸ್ತರಿಸಿದೆ. ಲಾಕ್‌ಡೌನ್‌ನಿಂದಾಗಿ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ಕಳೆದುಕೊಂಡ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಮೆಟಿಯೊರ್ 350 ಬೈಕ್ ಅನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಿದೆ. ಕ್ಲಾಸಿಕ್ 350, ಬುಲೆಟ್ 350 ಹಾಗೂ ಥಂಡರ್ ಬರ್ಡ್ 350 ಬೈಕ್‌ಗಳ ನಂತರ 350 ಸಿಸಿ ಸೆಗ್‌ಮೆಂಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಹೊಸ ಬೈಕ್ ಇದಾಗಿದೆ.


Click it and Unblock the Notifications