ಮನೆ ಬಾಗಿಲಲ್ಲೇ ಸರ್ವೀಸ್ ನೀಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಭಾರತ ಮೂಲದ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಹಲವು ದಿನಗಳ ಹಿಂದೆ ಸರ್ವಿಸ್ ಆನ್ ವ್ಹೀಲ್ಸ್ ಸೌಲಭ್ಯವನ್ನು ಪರಿಚಯಿಸಿತ್ತು. ಈ ಸೌಲಭ್ಯದಡಿಯಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ ಮನೆ ಬಾಗಿಲಲ್ಲೇ ಸರ್ವೀಸ್ ನೀಡುತ್ತಿದೆ.

ಮನೆ ಬಾಗಿಲಲ್ಲೇ ಸರ್ವೀಸ್ ನೀಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಕಂಪನಿಯು ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಸೇವೆಯನ್ನು ನೀಡಲು ರಾಯಲ್ ಎನ್‌ಫೀಲ್ಡ್ ಕಂಪನಿಯು 800 ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ನಿಯೋಜಿಸಿದೆ. ಸರ್ವೀಸ್ ಆನ್ ವ್ಹೀಲ್ಸ್ ಯೋಜನೆಯಡಿಯಲ್ಲಿ ಈ ಬೈಕ್‌ಗಳನ್ನು ವಿನ್ಯಾಸಗೊಳಿಸಿದ್ದು ಅವುಗಳಲ್ಲಿ ಅಗತ್ಯವಿರುವ ಸಾಧನಗಳನ್ನು ಅಳವಡಿಸಲಾಗಿದೆ.

ಮನೆ ಬಾಗಿಲಲ್ಲೇ ಸರ್ವೀಸ್ ನೀಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಈ ಬೈಕ್‌ನಲ್ಲಿ ಸರ್ವೀಸ್ ಮಾಡಲು ಬೇಕಾದ ಟೂಲ್ ಗಳಿದ್ದು, 80%ವರೆಗೆ ಸರ್ವೀಸ್ ನೀಡಲಾಗುವುದು. ಈ ಟೂಲ್ ಗಳ ಮೂಲಕ ಗ್ರಾಹಕರ ಮನೆಯಲ್ಲಿಯೇ ಸರ್ವೀಸ್ ಮಾಡಲಾಗುವುದು. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಯೋಜನೆಯಡಿ ಹಲವಾರು ಸೇವೆಗಳನ್ನು ನೀಡುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮನೆ ಬಾಗಿಲಲ್ಲೇ ಸರ್ವೀಸ್ ನೀಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಈ ಸೇವೆಗಳಲ್ಲಿ ನಿಗದಿತ ಮೆಂಟೆನೆನ್ಸ್, ಸಣ್ಣ ಪುಟ್ಟ ರಿಪೇರಿ,ಬಿಡಿಭಾಗಗಳ ಬದಲಾವಣೆ, ಎಲೆಕ್ಟ್ರಿಕ್ ಡಯಾಗ್ನಾಸಿಸ್ ಗಳು ಸೇರಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುವುದಾಗಿ ಹೇಳಿದೆ.

ಮನೆ ಬಾಗಿಲಲ್ಲೇ ಸರ್ವೀಸ್ ನೀಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಸರ್ವೀಸ್ ಆನ್ ವ್ಹೀಲ್ ನಲ್ಲಿ ತರಬೇತಿ ಪಡೆದ ಹಾಗೂ ಕಂಪನಿಯ ಅಧಿಕೃತ ಸೇವಾ ತಂತ್ರಜ್ಞರಿರುತ್ತಾರೆ. ಇವರು ತಮ್ಮ ಜೊತೆಗೆ ಲೂಬ್ರಿಕಂಟ್ ಹಾಗೂ ಬಿಡಿಭಾಗಗಳನ್ನು ಹೊಂದಿರುತ್ತಾರೆ. ಕಂಪನಿಯು ಇವುಗಳಿಗೆ 12 ತಿಂಗಳ ವಾರಂಟಿ ನೀಡಲಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮನೆ ಬಾಗಿಲಲ್ಲೇ ಸರ್ವೀಸ್ ನೀಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ಸರ್ವೀಸ್ ಆನ್ ವ್ಹೀಲ್ ಗಾಗಿ ಗ್ರಾಹಕರು ತಮ್ಮ ಹತ್ತಿರದ ಡೀಲರ್ ಗಳಲ್ಲಿ ಅಪಾಯಿಂಟ್ ಮೆಂಟ್ ಪಡೆಯಬೇಕಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಕ್ಲಾಸಿಕ್ 350 ಬೈಕ್ ಗಳಿಗಾಗಿ ಆಫ್ಟರ್ ಮಾರ್ಕೆಟ್ ಸೈಲೆನ್ಸರ್‌ಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ವಿಷಯವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮನೆ ಬಾಗಿಲಲ್ಲೇ ಸರ್ವೀಸ್ ನೀಡಲಿದೆ ರಾಯಲ್ ಎನ್‌ಫೀಲ್ಡ್ ಕಂಪನಿ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗಾಗಿ ಒಟ್ಟು 16 ಸೈಲೆನ್ಸರ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ಇವುಗಳ ಆರಂಭಿಕ ಬೆಲೆ ರೂ.3,300ಗಳಾಗಿದೆ. ಕಂಪನಿಯ ಅತ್ಯಂತ ದುಬಾರಿ ಬೆಲೆಯ ಸೈಲೆನ್ಸರ್ ದರ ರೂ.3,600ಗಳಾಗಿದೆ.

Most Read Articles

Kannada
English summary
Royal Enfield to provide door step service set up 800 mobile service unit. Read in Kannada.
Story first published: Wednesday, July 29, 2020, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X