ಅತಿ ಕಡಿಮೆ ಬೆಲೆಯೊಂದಿಗೆ ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಈಗಾಗಲೇ ಸಾಂಪ್ರಾದಾಯಿಕ ವಾಹನಗಳನ್ನು ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳು ಹೆಚ್ಚು ಗ್ರಾಹಕರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಈಗಾಗಲೇ ಹಲವಾರು ಸ್ಟಾರ್ಟ್-ಅಪ್ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಮಾರಾಟ ಮಾಡುವಲ್ಲಿ ಮುನ್ನಡೆ ಸಾಧಿಸುತ್ತಿವೆ.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಈ ನಿಟ್ಟಿನಲ್ಲಿ ಹೊಸ ಪಯತ್ನಕ್ಕೆ ಕೈ ಹಾಕಿರುವ ಬೆಂಗಳೂರು ಮೂಲದ 'ಸಿಂಪಲ್ ಎನರ್ಜಿ' ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡಬಲ್ಲ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯೊಂದನ್ನು ಸಿದ್ದಪಡಿಸಿದೆ.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಮಾದರಿಗೆ ಮಾರ್ಕ್ 2 ಎಂದು ಕರೆದಿರುವ ಸಿಂಪಲ್ ಎನರ್ಜಿ ಕಂಪನಿಯು ಶೀಘ್ರದಲ್ಲೇ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲು ಸಿದ್ದವಾಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಕೂಟರ್ ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಕಡಿಮೆ ಬೆಲೆ ಹೆಚ್ಚು ಮೈಲೇಜ್

ಸಿಂಪಲ್ ಎನರ್ಜಿ ಕಂಪನಿಯ ಮಾಹಿತಿ ಪ್ರಕಾರ ಹೊಸ ಮಾರ್ಕ್ 2 ಸ್ಕೂಟರ್ ಮಾದರಿಯು ತೆಗೆದುಹಾಕಬಹುದಾದ ಲೀ-ಅಯಾನ್ ಬ್ಯಾಟರಿ ಪ್ರೇರಣೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 280 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ ಎಂದು ಹೇಳಿಕೊಂಡಿದೆ.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಮಾರ್ಕ್ 2 ಸ್ಕೂಟರ್‌ನಲ್ಲಿ ಅಳವಡಿಸಲಾಗಿರುವ ಲೀ-ಅಯಾನ್ ಬ್ಯಾಟರಿಯು ಗೃಹ ಬಳಕೆಯ ಚಾರ್ಜರ್ ಮೂಲಕ 40 ನಿಮೀಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಬಹುದಾದರೇ ಫಾಸ್ಟ್ ಚಾರ್ಜಿಂಗ್ ಸೆಂಟರ್‌ಗಳಲ್ಲಿ ಕೇವಲ 17 ನೀಮಿಷಗಳಲ್ಲೇ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಹೊಸ ಮಾರ್ಕ್ 2 ಇವಿ ಸ್ಕೂಟರ್ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಈ ಸ್ಕೂಟರ್ ಎಕಾನಮಿ ಮತ್ತು ಸ್ಪೋರ್ಟ್ ಮೋಡ್‌ಗಳನ್ನು ಹೊಂದಿದ್ದು, ಸ್ಪೋರ್ಟ್ ಮೋಡ್‌ನಲ್ಲಿ ಗಂಟೆಗೆ ಗರಿಷ್ಠ 103ಕಿ.ಮೀ ವೇಗದಲ್ಲಿ ಚಲಿಸಬಹುದು.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಬಿಡುಗಡೆ ಯಾವಾಗ?

ಇದೇ ವರ್ಷ ಜೂನ್ ಅಥವಾ ಜುಲೈನಲ್ಲಿ ಹೊಸ ಇವಿ ಸ್ಕೂಟರ್ ಬಿಡುಗಡೆ ಯೋಜನೆ ಹೊಂದಿದ್ದ ಸಿಂಪಲ್ ಎನರ್ಜಿ ಕಂಪನಿಯು ಕರೋನಾ ವೈರಸ್ ಪರಿಣಾಮ ಬಿಡುಗಡೆ ಯೋಜನೆಯನ್ನು ಮುಂಬರುವ ಅಕ್ಟೋಬರ್ ವೇಳೆಗೆ ಮಾರಾಟ ಪ್ರಕ್ರಿಯೆ ಆರಂಭಿಸುವ ಯೋಜನೆಯಲ್ಲಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಹೊಸ ಇವಿ ಸ್ಕೂಟರ್ ಬೆಲೆ?

ಅಚ್ಚರಿ ಆದರೂ ಮಾರ್ಕ್ 2 ಇವಿ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.1.10 ಲಕ್ಷದಿಂದ ರೂ.1.25 ಲಕ್ಷ ಬೆಲೆಯೊಂದಿಗೆ ಮಾರಾಟ ಮಾಡುವುದಾಗಿ ಸುಳಿವು ನೀಡಿರುವ ಸಿಂಪಲ್ ಎನರ್ಜಿ ಕಂಪನಿಯು ಮಾರುಕಟ್ಟೆಯಲ್ಲಿರುವ ಹಲವು ಸ್ಕೂಟರ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಸದ್ಯ ಮಾರುಕಟ್ಟೆಯಲ್ಲಿ ಬಹುತೇಕ ಪ್ರೀಮಿಯಂ ಇವಿ ಸ್ಕೂಟರ್‌ಗಳು ರೂ.1 ಲಕ್ಷದಿಂದ 1.40 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಬ್ಯಾಟರಿಗೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ 60ಕಿ.ಮೀ ನಿಂದ 90 ಕಿ.ಮೀ ಮೈಲೇಜ್ ಹೊಂದಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಆದರೆ ಸಿಂಪಲ್ ಎನರ್ಜಿ ಕಂಪನಿಯು ಸಾಮಾನ್ಯ ಬೆಲೆಯಲ್ಲೇ ಪ್ರತಿ ಚಾರ್ಜ್‌ಗೆ 280ಕಿ.ಮೀ ಹಿಂದಿರುಗಿಸುವ ಭರವಸೆ ನೀಡಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರೀಮಿಯಂ ಫೀಚರ್ಸ್‌ಗಳಾದ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ಅಲಾಯ್ ವೀಲ್ಹ್, ಡಿಸ್ಕ್ ಬ್ರೇಕ್‌ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ನೀಡಿದೆ.

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

ಹೊಸ ಯೋಜನೆಗಾಗಿ ಸದ್ಯ ರೂ. 1.30 ಕೋಟಿ ಬಂಡವಾಳದೊಂದಿಗೆ ಬೆಂಗಳೂರಿನ ಯಲಹಂಕದಲ್ಲಿ ಆರಂಭಿಕ ಸ್ಕೂಟರ್ ಉತ್ಪಾದನಾ ಘಟಕವನ್ನು ತೆರೆದಿರುವ ಸಿಂಪಲ್ ಎನರ್ಜಿ ಕಂಪನಿಯು ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಸ್ಕೂಟರ್‌ಗಳು ಆರಂಭಿಕವಾಗಿ ಇ-ಕಾಮರ್ಸ್ ಪ್ಲ್ಯಾಟ್‌ಫಾರ್ಮ್‌ಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ನಲ್ಲಿ ಮಾರಾಟಗೊಳ್ಳಲಿವೆ.

MOST READ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು..!

ಪ್ರತಿ ಚಾರ್ಜ್‌ಗೆ 280ಕಿ.ಮೀ ಮೈಲೇಜ್ ನೀಡುತ್ತೆ ಈ ಹೊಸ ಇವಿ ಸ್ಕೂಟರ್

2021ಕ್ಕೆ ಹೊಸ ಮಾರಾಟ ಮಳಿಗೆಗಳನ್ನು ಅಧಿಕೃತವಾಗಿ ತೆರೆಯುವ ಯೋಜನೆಯಿದ್ದು, ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ ಎರಡನೇ ದರ್ಜೆಯ ಮಾಹಾನಗರಗಳಲ್ಲೂ ಇವಿ ಸ್ಕೂಟರ್ ಮಾರಾಟ ಯೋಜನೆಯ ಗುರಿ ಹೊಂದಿದೆ.

Most Read Articles

Kannada
English summary
Electric Scooter From Simple Energy Will Have A Range Of More Than 280 kilometres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more