ಬಹಿರಂಗವಾಯ್ತು ಬಿಎಸ್-6 ಸುಜುಕಿ ಜಿಕ್ಸರ್ 250 ಬೈಕಿನ ಮಾಹಿತಿ
ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಜಿಕ್ಸರ್ 250 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇದೀಗ ಹೊಸ ಸುಜುಕಿ ಜಿಕ್ಸರ್ 250 ಬೈಕಿನ ಮಾಹಿತಿಗಳು ಬಹಿರಂಗವಾಗಿದೆ.

ಬಿಎಸ್-6 ಜಿಕ್ಸರ್ 250 ಬೈಕಿನ ಮಾಹಿತಿಯನ್ನು ಐಎಬಿ ಬಹಿರಂಗಪಡಿಸಿದೆ. ಬಹಿರಂಗವಾದ ಮಾಹಿತಿಗಳ ಪ್ರಕಾರ ಹೊಸ ಜಿಕ್ಸರ್ 250 ಬೈಕ್ 249 ಸಿಸಿ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 26.1 ಬಿಹೆಚ್‌ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜಿಕ್ಸರ್ ೨೫೦ ಬೈಕಿನ ಹಿಂದಿನ ಮಾದರಿಗೆ ಹೋಲಿಸಿದರೆ 0.4 ಬಿಹೆಚ್‌ಪಿ ಪವರ್ ಮತ್ತು 0.4 ರಷ್ಟು ಎನ್ಎಂ ಟಾರ್ಕ್ ಕೂಡ ಕಡಿಮೆಯಾಗಿದೆ.

ಹೊಸ ಸುಜುಕಿ ಜಿಕ್ಸರ್‍ನಲ್ಲಿ ಎಂಜಿನ್ ನವೀಕರಣ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳು ಕಂಡುಬಂಡಿಲ್ಲ. ಈ ಬೈಕ್ ಪ್ರಸ್ತುತ ಮಾದರಿಯ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಉಪಕರಣಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಸುಜುಕಿ ಜಿಕ್ಸರ್ 250 ನೇಕೆಡ್ ಸ್ಟ್ರೀಟ್‍ಫೈಟರ್ ಆವೃತ್ತಿಯಾಗಿದೆ. ಈ ಬೈಕಿನಲ್ಲಿ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಎಲ್‍ಇಡಿ ಟೈಲ್‍ಲೈಟ್‍ಗಳು, ಎಲ್‍ಸಿಡಿ ಡಿಜಿಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಸುಜುಕಿ ಜಿಕ್ಸರ್ 250 ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಒವಲ್ ಶೇಪಿನ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍ಗಳಿವೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಅಂಶಗಳಿವೆ.

ಸುಜುಕಿ ಜಿಕ್ಸರ್ 250 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ. ಬ್ರೈಕಿಂಗ್ ಸಿಸ್ಟಂ ಉತ್ತಮವಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿದ್ದಾರೆ.

ಸುಜುಕಿ ಜಿಕ್ಸರ್ 250 ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.09 ಲಕ್ಷ ದರ ಹೊಂದಿದೆ. ನವೀಕರಿಸಿದ ಹೊಸ ಜಿಕ್ಸರ್ 250 ಬೈಕಿಗೆ ಪ್ರಸ್ತುತ ಮಾದರಿಗಿಂತ ಸ್ವಲ್ಪ ಹೆಚ್ಚಿನ ಬೆಲೆ ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ.

ಸುಜುಕಿ ಜಿಕ್ಸರ್ 250 ಬೈಕನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲೇ ಬಿಡುಗಡೆಯಾಗಲಿದೆ. ಈ ಹೊಸ ಸುಜುಕಿ ಜಿಕ್ಸರ್ 250 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ ಡ್ಯೂಕ್ 250, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








