ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಜಪಾನ್ ಮೂಲದ ಬೈಕ್ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ತನ್ನ ಹೊಸ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಹೊಸ ಸುಜುಕಿ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳನ್ನು ಪ್ರದರ್ಶಿಸಿದರು. ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದ ಸಮಯದಲ್ಲಿ ಸುಜುಕಿ ಜಿಕ್ಸರ್ ಟ್ವಿನ್ ಬೈಕುಗಳ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿತ್ತು. ಕಳೆದ ತಿಂಗಳಲ್ಲಿ ಸುಜುಕಿ ಕಂಪನಿಯು ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳನ್ನು ಜಪಾನಿನ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಭಾರತದಲ್ಲಿ ಲಾಕ್‌ಡೌನ್ ಮುಗಿದ ಬಳಿಕ ಈ ಬೈಕುಗಳನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಬಹಿರಂಗವಾದ ಮಾಹಿತಿಗಳ ಪ್ರಕಾರ ಹೊಸ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕುಗಳಲ್ಲಿ 249 ಸಿಸಿ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 26.1 ಬಿಹೆಚ್‌ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜಿಕ್ಸರ್ 250 ಟ್ವಿನ್ ಬೈಕುಗಳ ಹಿಂದಿನ ಮಾದರಿಗೆ ಹೋಲಿಸಿದರೆ 0.4 ಬಿಹೆಚ್‌ಪಿ ಪವರ್ ಮತ್ತು 0.4 ರಷ್ಟು ಎನ್ಎಂ ಟಾರ್ಕ್ ಕೂಡ ಕಡಿಮೆಯಾಗಿದೆ.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಹೊಸ ಸುಜುಕಿ ಜಿಕ್ಸರ್ ಬೈಕುಗಳಲ್ಲಿ ಎಂಜಿನ್ ನವೀಕರಣ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳು ಕಂಡುಬಂಡಿಲ್ಲ. ಈ ಬೈಕ್ ಪ್ರಸ್ತುತ ಮಾದರಿಯ ವಿನ್ಯಾಸ ಮತ್ತು ಫೀಚರ್ ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಸುಜುಕಿ ಜಿಕ್ಸರ್ 250 ನೇಕೆಡ್ ಸ್ಟ್ರೀಟ್‍‍‍ಫೈಟರ್ ಆಗಿದ್ದರೆ, ಎಸ್‍ಎಫ್ 250 ಬೈಕ್ ಫೇರ್ಡ್ ಆವೃತ್ತಿಯಾಗಿದೆ. ಎರಡೂ ಬೈಕ್‍‍ಗಳು ಎಲ್‍ಇ‍ಡಿ ಹೆಡ್‍‍ಲ್ಯಾಂಪ್‍‍ಗಳು, ಎಲ್‍ಇಡಿ ಟೈಲ್‍‍ಲೈಟ್‍ಗಳು, ಎಲ್‍‍ಸಿಡಿ ಡಿಜಿ‍ಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಪ್ರಸ್ತುತ ನೇಕೆಡ್ ಆವೃತ್ತಿಯ ಸುಜುಕಿ ಜಿಕ್ಸರ್ 250 ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಒವಲ್ ಶೇಪಿನ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍‍ಗಳಿವೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಅಂಶಗಳಿವೆ.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಹೊಸ ಸುಜುಕಿ ಜಿಕ್ಸರ್ 250 ಮತ್ತು ಎಸ್‍ಎಫ್ 250 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍‍ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ. ಬ್ರೈಕಿಂಗ್ ಸಿಸ್ಟಂ ಉತ್ತಮವಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎ‍ಬಿಎಸ್ ಸಿಸ್ಟಂ ಅನ್ನು ಅಳವಡಿಸಿದ್ದಾರೆ.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಮಾರುಕಟ್ಟೆಯಲ್ಲಿರುವ ಸುಜುಕಿ ಜಿಕ್ಸರ್ 250 ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.09 ಲಕ್ಷ ದರ ಹೊಂದಿದ್ದರೆ, ಜಿಕ್ಸರ್ ಎಸ್‍ಎಫ್ 250 ಬೈಕ್ ತುಸು ದುಬಾರಿಯಾಗಿದ್ದು ರೂ.1.70 ಲಕ್ಷ ದರವನ್ನು ಹೊಂದಿದೆ. ನವೀಕರಿಸಿದ ಹೊಸ ಜಿಕ್ಸರ್ 250 ಮತ್ತು ಎಸ್‍ಎಫ್ 250 ಬೈಕ್‍‍ಗಳಿಗೆ ಪ್ರಸ್ತುತ ಮಾದರಿಗಳಿಗಿಂತ ಸ್ವಲ್ಪ ಹೆಚ್ಚಿನ ಬೆಲೆ ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ಸುಜುಕಿ ಜಿಕ್ಸರ್ 250 ಟ್ವಿನ್ ಬೈಕುಗಳ ಟೀಸರ್ ಬಿಡುಗಡೆ

ಹೊಸ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಬೈಕ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ ಡ್ಯೂಕ್ 250, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಟಿ‍ವಿಎಸ್ ಅಪಾಚೆ ಆರ್‍ಆರ್ 310 ಬೈ‍‍ಕ್‍‍ಗಳಿಗೆ ಪೈಪೋಟಿ‍ಯನ್ನು ನೀಡಲಿದೆ.

Article Published On: Friday, April 24, 2020, 17:29 [IST]
English summary
Suzuki Teases The BS6 Gixxer 250 Twins — India Launch Soon. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+