ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಸುಜುಕಿ ಕಂಪನಿಯ ಹಯಾಬುಸಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಲೆಜೆಂಡರಿ ಬೈಕುಗಳ ಪೈಕಿ ಒಂದಾಗಿದ್ದು, ತನ್ನ ಆಕರ್ಷಕ ವಿನ್ಯಾಸದಿಂದಾಗಿ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಈ ಬೈಕ್ ವಿಶ್ವದಲ್ಲಿರುವ ಅತಿ ವೇಗದ ಬೈಕುಗಳಲ್ಲಿ ಒಂದಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಹೊಸ ತಲೆಮಾರಿನ ಬೈಕ್ ಅನ್ನು ಸದ್ಯದಲ್ಲಿಯೇ ಮಾರುಕಟ್ಟೆಗೆ ತರಲಾಗುತ್ತದೆ. ಆದರೆ ಸುಜುಕಿ ಹಯಾಬುಸಾ ಬೈಕ್ ಯುರೋ 5 ಸಾಲಿನಿಂದ ಕಣ್ಮರೆಯಾಗದಿರಬಹುದು ಎಂದು ವರದಿಗಳಾಗಿತ್ತು. ಆದರೆ ಕೆಲವು ಹೊಸ ನವೀಕರಣಗಳೊಂದಿಗೆ ಹಯಾಬುಸಾ ಬೈಕ್ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಹೊಸ ತಲೆಮಾರಿನ ಹಯಾಬುಸಾ ಬೈಕ್ ಸಾಧಾರಣ ನವೀಕರಣವನ್ನು ಪಡೆಯಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಕೆಲವು ವರದಿಗಳ ಪ್ರಕಾರ, ಸುಜುಕಿ ತನ್ನ ಅತ್ಯಂತ ಪ್ರಸಿದ್ಧವಾದ ಬೈಕುಗಳಲ್ಲಿ ಒಂದಾದ ಹಯಾಬುಸಾವನ್ನು ಮುಂದುವರೆಸಲು ಹೊರಸೂಸುವಿಕೆ ನಿಯಮಕ್ಕೆ ಅನುಗುಣವಾಗಿ ನವೀಕರಿಸಲು ನಿರ್ಧರಿಸಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಹೊಸ ಹಯಾಬುಸಾ ಬೈಕ್ ಅದೇ ಎಂಜಿನ್ ಅನ್ನು ಯುರೋ 5 ಹೊರಸೂಸುವಿಕೆ ನಿಯಮಕ್ಕೆ ಅನುಗುಣವಾಗಿ ನವೀಕರಿಸಬಹುದು. ಇದು ನವೀಕರಿಸಿದ ಎಕಾಸ್ಟ್ ಮತ್ತು ಎಲೆಕ್ಟ್ರಾನಿಕ್ಸ್‌ನೊಂದಿಗೆ ಹೆಚ್ಚಿನ ಪವರ್ ಅನ್ನು ಉತ್ಪಾದಿಸಬಹುದೆಂದು ನಿರೀಕ್ಷಿಸುತ್ತೇವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಹೊಸ ಹಯಾಬುಸಾ ಬೈಕ್ ದೊಡ್ಡದಾದ 1,440 ಸಿಸಿ ಎಂಜಿನ್ ಅನ್ನು ಹೊಂದಿರಲಿದೆ. ಯುರೋ 5 ನಿಯಮಗಳನ್ನು ಪೂರೈಸಲು ಸುಜುಕಿ ಇದೇ ಎಂಜಿನ್ ಅನ್ನು ನವೀಕರಿಸಬಹುದು ಎಂಬುದು ಇನ್ನು ಖಚಿತವಾಗಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ನವೀಕರಿಸಿದ ಹಯಬುಸಾ ಹೊಸ ಎಲೆಕ್ಟ್ರಾನಿಕ್ಸ್ ಪ್ಯಾಕೇಜ್ (ಐಎಂಯು) ಒಳಗೊಂಡಿರುತ್ತದೆ, ಈ ಬೈಕಿನಲ್ಲಿ ಎಬಿಎಸ್ ಮತ್ತು ಟ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿರಲಿದೆ. ಈ ಬೈಕ್ ಡ್ಯುಯಲ್ ರೈಡಿಂಗ್ ಮೋಡ್ ಗಳನ್ನು ಹೊಂದಿರಲಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಇನ್ನು ಹೊಸ ಹಯಾಬುಸಾ ಬೈಕಿನಲ್ಲಿ ಹಿಂದಿನ ಮಾದರಿಯ ರೀತಿಯೆಲ್ಲೆ ಬಾಡಿವರ್ಕ್ ಹೊಂದಿರುತ್ತದೆ. ಆದರೆ ಕೆಲವು ಸೂಕ್ಷ್ಮ ಬದಲಾವಣೆಗಳು ಕಂಡುಬರುತ್ತವೆ ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಈ ಬೈಕಿನಲ್ಲಿ ಸ್ಮಾರ್ಟ್ ಫೋನ್ ಎನಾಬಲ್ ಆಗಿರುವ ನ್ಯಾವಿಗೇಷನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎಲ್ಇಡಿ ಹೆಡ್‍‍ಲೈಟ್ ಹಾಗೂ ಟೇಲ್‍‍ಲೈಟ್, ಟಾಪ್ ಶೆಲ್ಫ್ ಬ್ರೇಕಿಂಗ್ ಸಿಸ್ಟಂಗಳಿರುವ ಸಾಧ್ಯತೆಗಳಿವೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ ಜನಪ್ರಿಯ ಸುಜುಕಿ ಹಯಾಬುಸಾ

ಸುಜುಕಿ ಹಯಾಬುಸಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಸುಜುಕಿ ಹಯಾಬುಸಾ ಪ್ರಪಂಚದಾದ್ಯಂತ ತನ್ನದೇ ಅದೇ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಹೊಸ ಹಯಾಬುಸಾ ಅಭಿಮಾನಿಗಳನ್ನು ಆಕರ್ಷಿಸಲು ಸಾಕಷ್ಟು ವಿಶಿಷ್ಟವಾದ ಹಯಾಬುಸಾ ಸ್ಟೈಲಿಂಗ್ ಅನ್ನು ಇನ್ನೂ ಉಳಿಸಿಕೊಳ್ಳಬಹುದು.

Most Read Articles

Kannada
English summary
Rumours Suggest A New Suzuki Hayabusa For 2021. Read In Kannada.
Story first published: Saturday, October 10, 2020, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X