ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಸುಜುಕಿ ಕಟಾನಾ ಬೈಕ್
ಸುಜುಕಿ ಮೋಟಾರ್‍ಸೈಕಲ್ ಕಂಪನಿಯು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಹೊಸ ಕಟಾನಾ ಬೈಕ್ ಅನ್ನು ಅನಾವರಣಗೊಳಿಸಿತ್ತು. ಈ ಬೈಕ್ ಜಪಾನ್ ತಯಾರಕ ಕಂಪನಿಯ ಜನಪ್ರಿಯ ಸ್ಪೋರ್ಟ್‍ಬೈಕ್‍ಗಳಲ್ಲಿ ಒಂದಾಗಿದೆ.

ಸುಜುಕಿ ಕಟಾನಾ ಬೈಕ್ ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿದೆ ಎಂಬ ವದಂತಿಗಳಿತ್ತು. ಆದರೆ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೊಯಿಚಿರೋ ಹಿರಾವ್ ಮತ್ತು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಉಪಾಧ್ಯಕ್ಷ ದೇವಶಿಶ್ ಹಂಡಾ ಅವರು ಸಂದರ್ಶನದಲ್ಲಿ, 2020ರಲ್ಲಿ ಸುಜುಕಿ ಕಟಾನಾ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದಿಲ್ಲ. ಯುರೋ 5 (ಬಿಎಸ್ 6) ಮಾನದಂಡಗಳಿಗೆ ಅನುಗುಣವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿರುವ ಕಟಾನಾವನ್ನು ನವೀಕರಿಸಲಾಗಿಲ್ಲ.

ನವೀಕರಿಸಿದ ನಂತರ ಈ ಬೈಕಿನ ಬಗ್ಗೆ ಗ್ರಾಹಕರ ಆಸಕ್ತಿಯನ್ನು ಗಮನಿಸಿ ಈ ಬೈಕ್ ಅನ್ನು ಬಿಡುಗಡೆಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ. 2021ರಲ್ಲಿ ಈ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಕಟಾನಾ ಬೈಕಿಗೆ ತನ್ನದೆ ಆದ ದೊಡ್ಡ ಇತಿಹಾಸವಿದೆ. ಈ ಬೈಕ್ ಅನ್ನು 1981ರಲ್ಲಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಆಗ ಈ ಬೈಕ್ ವಿಶ್ವದ ಅತಿ ವೇಗದ ಉತ್ಪಾದನಾ ಬೈಕ್ ಆಗಿತ್ತು. ಹಲವು ವರ್ಷಗಳ ನಂತರ, ಸುಜುಕಿ ಮೋಟಾರ್‍ಸೈಕಲ್ ಕಂಪನಿಯು ಈ ಬೈಕ್ ಅನ್ನು ಮರುವಿನ್ಯಾಸಗೊಳಿಸಿ, ಹೊಸ ಕಟಾನಾ ಬೈಕ್ ಬಿಡುಗಡೆಗೊಳಿಸಿತು.

ಸುಜುಕಿ ಮೋಟಾರ್‍ಸೈಕಲ್ ಕಂಪನಿಯು ಹೊಸ ಬಣ್ಣದೊಂದಿಗೆ ಸುಜುಕಿ ಕಟಾನಾ ಬೈಕನ್ನು ಪ್ರದರ್ಶಿಸಿದ್ದಾರೆ. ಸುಜುಕಿ ಕಟಾನಾ ಬ್ಲ್ಯಾಕ್ ಮತ್ತು ರೆಡ್ ಎಂಬ ಎರಡು ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.

ಕಟಾನಾ ಬೈಕಿನಲ್ಲಿ ಜಿಎಸ್ಎಕ್ಸ್-ಎಸ್ 1000 ಬೈಕಿನಲ್ಲಿರುವಂತಹ ಸುಜುಕಿಯ ಕೆ5 ಎಂಜಿನ್ ಅಳವಡಿಸಲಾಗಿದೆ. 999 ಸಿಸಿಯ ಇನ್ ಲೈನ್ ನಾಲ್ಕು ಸಿಲಿಂಡರ್‍ನ ಈ ಎಂಜಿನ್, 150 ಬಿಹೆಚ್‍ಪಿ ಪವರ್ ಮತ್ತು 108 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ 6 ಸ್ಪೀಡಿನ ಟ್ರಾನ್ಸ್ಮಿಷನ್ ಜೊತೆಗೆ ಸ್ಲಿಪ್ಪರ್ ಕ್ಲಚ್ ಅನ್ನು ಜೋಡಿಸಲಾಗಿದೆ.

ಈ ಬೈಕ್ ಮೂರು ಹಂತದ ಟ್ರಾಕ್ಷನ್ ಕಂಟ್ರೋಲ್ ಹಾಗೂ ಎಬಿಎಸ್ ಅನ್ನು ಹೊಂದಿದೆ. ಬೈಕ್ ಬಗೆಗಿನ ಮಾಹಿತಿಯನ್ನು ಟಿಎಫ್‌ಟಿ ಕಲರ್ ಸ್ಕ್ರೀನ್‍ನಲ್ಲಿ ಪಡೆಯಬಹುದು. ಈ ಬೈಕಿನಲ್ಲಿ ಸ್ವಿಂಗಾರ್ಮ್ ಜಿಎಸ್ಎಕ್ಸ್-ಆರ್ ನ ಅಪ್‍ಸೈಡ್ ಡೌನ್ ಫೋರ್ಕ್, ರೇಡಿಯಲ್ ಆಗಿ ಮೌಂಟ್ ಮಾಡಲಾದ ಫ್ರಂಟ್ ಕ್ಯಾಲಿಪರ್‍ಗಳಿವೆ.

ಹೊಸ ಕಟನಾ ಬೈಕಿನ ವಿನ್ಯಾಸವನ್ನು ಒರಿಜಿನಲ್ ಬೈಕಿನಿಂದ ಪಡೆಯಲಾಗಿದೆ. ಇದರಿಂದಾಗಿ ಹೊಸ ಕಟನಾ ಬೈಕ್ ಜಿಎಸ್ಎಕ್ಸ್-ಎಸ್ 1000 ಬೈಕಿಗಿಂತ 6 ಕೆ.ಜಿ ಹೆಚ್ಚು ತೂಕವನ್ನು ಹೊಂದಲಿದೆ. ಈಗ ಬೈಕಿನ ತೂಕವು 215 ಕೆ.ಜಿ.ಗಳಾಗಿದೆ.

ಈ ಬೈಕಿನ ಮುಂಭಾಗ ಆಕರ್ಷಕ ಎಲ್‍ಇಡಿ ಹೆಡ್‍ಲೈಟ್ ಅನ್ನು ಹೊಂದಿದೆ. ಈ ಬೈಕ್ ಫ್ಯೂಯಲ್ ಟ್ಯಾಂಕ್ ಕೇವಲ 12 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಜಪಾನಿನ ತಯಾರಕರು ಈ ವರ್ಷ ಬೈಕನ್ನು ಸಿಕೆಡಿಯಾಗಿ ಭಾರತಕ್ಕೆ ಬರಬಹುದೆಂದು ಸುಳಿವು ನೀಡಿದ್ದಾರೆ. ಈ ಬೈಕ್ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿ 1000 ಆರ್, ಯಮಹಾ ಎಂಟಿ -10, ಕವಾಸಕಿ ಝಡ್1000, ಮತ್ತು ಬಿಎಂಡಬ್ಲ್ಯು ಎಸ್ 1000ಆರ್ ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








