ಪಾರ್ಕ್ ಫಾರ್ ಫ್ರೀಡಂ ಅಭಿಯಾನವನ್ನಾರಂಭಿಸಿದ ಸುಜುಕಿ ಮೋಟಾರ್‌ಸೈಕಲ್
ಭಾರತದಲ್ಲಿ ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿಯರ್ಸ್‌ಗಳನ್ನು ಗೌರವಿಸುವ ಸಲುವಾಗಿ ಸುಜುಕಿ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ಸ್ ಲಿಮಿಟೆಡ್ ಸ್ವಾತಂತ್ರ್ಯ ದಿನಾಚರಣೆಯಂದು ಪಾರ್ಕ್ ಫಾರ್ ಫ್ರೀಡಂ ಅಭಿಯಾನವನ್ನು ಆರಂಭಿಸಲಿದೆ.

ಈ ಅಭಿಯಾನದಡಿಯಲ್ಲಿ ಕರೋನಾ ಸೋಂಕು ಹರಡದಂತೆ ತಡೆಯಲು ಆಗಸ್ಟ್ 15ರಂದು ಮನೆಯಿಂದ ಹೊರಬರದಂತೆ ಸುಜುಕಿ ಮೋಟರ್ ಸೈಕಲ್ ಜನರಿಗೆ ಮನವಿ ಮಾಡಿದೆ. ಈ ಬಗ್ಗೆ ಕಂಪನಿಯು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಶೇರ್ ಮಾಡಿ ಆಗಸ್ಟ್ 15 ರಂದು ಮನೆಯಿಂದ ಹೊರಹೋಗದಂತೆ ಮನವಿ ಮಾಡಿದೆ. ಸುಜುಕಿ ಮೋಟಾರ್‌ಸೈಕಲ್ ತನ್ನ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ದೇಶಾದ್ಯಂತವಿರುವ ಪೊಲೀಸ್ ಠಾಣೆಗಳಿಗೆ ಸುಜುಕಿ ಬೈಕ್‌ಗಳನ್ನು ನೀಡುತ್ತಿದೆ.

ಕಂಪನಿಯು ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಪೊಲೀಸ್ ಸಿಬ್ಬಂದಿಗಳಿಗೆ ಸುಜುಕಿ ಜಿಕ್ಸರ್ 250 ಬೈಕುಗಳನ್ನು ವಿತರಿಸಿದೆ. ಜುಲೈ ತಿಂಗಳ ಮಾರಾಟ ವರದಿಯ ಪ್ರಕಾರ ಸುಜುಕಿ ಮೋಟಾರ್‌ಸೈಕಲ್ ಜೂನ್ ತಿಂಗಳಿಗಿಂತ 37%ನಷ್ಟು ಹೆಚ್ಚು ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಜುಲೈ ತಿಂಗಳಿನಲ್ಲಿ 34,412 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಲಾಕ್ ಡೌನ್ ಸಡಿಲಿಕೆಯ ನಂತರ ಕಂಪನಿಯು ತನ್ನ ವಾಹನಗಳ ಉತ್ಪಾದನೆ, ಮಾರಾಟ ಹಾಗೂ ಸಪ್ಲೈ ಚೈನ್ ಗಳನ್ನು ಸುಧಾರಿಸಿಕೊಳ್ಳುತ್ತಿದೆ. ಕರೋನಾ ವೈರಸ್ ಹರಡದಂತೆ ತಡೆಯಲು ಕಂಪನಿಯು ಸರ್ಕಾರವು ಸೂಚಿಸಿರುವ ಎಲ್ಲಾ ನಿಯಮಗಳನ್ನು ಅನುಸರಿಸುತ್ತಿದೆ. ತನ್ನ ಉತ್ಪಾದನಾ ಘಟಕಗಳಲ್ಲಿ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದೆ.

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಗುರುಗ್ರಾಮದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಇತ್ತೀಚೆಗಷ್ಟೇ 50 ಲಕ್ಷ ಯುನಿಟ್ ಅನ್ನು ಉತ್ಪಾದಿಸಿತು. ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬಂದ ನಂತರ ಕಂಪನಿಯು ತನ್ನ ಎಲ್ಲಾ ಬಿಎಸ್ 6 ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆಯನ್ನು ರೂ.4,000ದಿಂದ ರೂ.10,000ಗಳವರೆಗೆ ಹೆಚ್ಚಿಸಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು
ಜಿಕ್ಸರ್ 150, ಜಿಕ್ಸರ್ 250, ಬರ್ಗ್‌ಮನ್ ಸ್ಟ್ರೀಟ್, ಆಕ್ಸೆಸ್ 125 ಹಾಗೂ ಇಂಟ್ರೂಡರ್ 150 ಬಿಎಸ್ 6 ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಬಿಎಸ್ 6 ವಾಹನಗಳ ಉತ್ಪಾದನಾ ವೆಚ್ಚವು ಹೆಚ್ಚಾದ ಕಾರಣಕ್ಕೆ ಈ ವಾಹನಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಇತ್ತೀಚೆಗೆ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಇಂಟ್ರೂಡರ್ 250 ಸಿಸಿ ಬೈಕ್ ಮಾದರಿಗಾಗಿ ಪೇಟೆಂಟ್ ಅರ್ಜಿಯನ್ನು ಸಲ್ಲಿಸಿದೆ. ಈ ಬೈಕ್‌ನ ಪೇಟೆಂಟ್ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ. ಇಂಟ್ರೂಡರ್ 250 ಬೈಕಿನ ಉತ್ಪಾದನೆ ಹಾಗೂ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.


Click it and Unblock the Notifications








