ವೈರಸ್ ಭೀತಿ: ಗ್ರಾಹಕರ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಿದೆ ಸುಜುಕಿ ಮೋಟಾರ್‌ಸೈಕಲ್
ವೈರಸ್ ಭೀತಿ ನಡುವೆಯೂ ಆಟೋ ಉದ್ಯಮ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು, ಸುರಕ್ಷತೆಯ ಜೊತೆಗೆ ವ್ಯಾಪಾರ ವಹಿವಾಟು ಕೈಗೊಳ್ಳುತ್ತಿರುವ ವಾಹನ ಉತ್ಪಾದನಾ ಕಂಪನಿಗಳು ಗರಿಷ್ಠ ಸುರಕ್ಷತೆಯೊಂದಿಗೆ ವಾಹನ ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಕೈಗೊಳ್ಳುತ್ತಿವೆ.

ಲಾಕ್‌ಡೌನ್ ವಿನಾಯ್ತಿ ನಂತರ ಬಹುತೇಕ ವಾಣಿಜ್ಯ ಚಟುವಟಿಕೆಗಳು ಹೊಸ ಸುರಕ್ಷಾ ಕ್ರಮದೊಂದಿಗೆ ಪುನಾರಂಭಗೊಂಡಿದ್ದು, ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಸಹ ಮಾರಾಟ ಮಳಿಗೆಗಳ ಜೊತೆಗೆ ಶೇ.50ರಷ್ಟು ಸರ್ವೀಸ್ ಸ್ಟೇಷನ್‌ಗಳಿಗೂ ಮರುಚಾಲನೆ ನೀಡಿದೆ. ಜೊತೆಗೆ ಬೇಡಿಕೆ ಮೇರೆಗೆ ಗ್ರಾಹಕರ ಮನೆ ಬಾಗಿಲಿಗೆಗೆ ಹೊಸ ವಾಹನಗಳ ಟೆಸ್ಟ್ ರೈಡ್, ವಿತರಣೆ ಮತ್ತು ತಾಂತ್ರಿಕ ಸೇವೆಗಳನ್ನು ನೀಡಲಾಗುತ್ತಿದ್ದು, ವೈರಸ್ ಹರಡುವಿಕೆಯ ಸಾಧ್ಯತೆಯನ್ನು ಸಾಧ್ಯವಷ್ಟು ಮಟ್ಟಿಗೆ ಕಡಿಮೆಗೊಳಿಸಲಾಗುತ್ತಿದೆ.

ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ವಾಹನ ಮಾರಾಟಕ್ಕೆ ಚಾಲನೆ ನೀಡಿರುವ ಆಟೋ ಕಂಪನಿಗಳು ವೈರಸ್ ಹರಡದಂತೆ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

ಹೊಸ ಸುರಕ್ಷಾ ಮಾರ್ಗಸೂಚಿಗಳಿಂದಾಗಿ ಪ್ರತಿ ಹಂತದಲ್ಲೂ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಥರ್ಮಾ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಜರ್, ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಬಳಕೆಯೂ ಕಡ್ಡಾಯವಾಗಿದೆ.

ಜೊತೆಗೆ ಮಾರಾಟ ಮಳಿಗೆಗಳಿಗೆ ಗ್ರಾಹಕರ ಆಗಮನವನ್ನ ತಡೆಯುವುದಕ್ಕಾಗಿ ಕಂಪನಿಯೇ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಅಂತಿಮವಾಗಿ ಬೈಕ್ ಉತ್ಪನ್ನಗಳನ್ನು ಗ್ರಾಹಕರ ಬಾಗಿಲುಗಳಿಗೆ ತಲುಪಿಸುತ್ತಿದ್ದು, ವಾಹನಗಳ ವಿತರಣೆ ಸಂದರ್ಭದಲ್ಲೂ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಚಗೊಳಿಸಿದ ನಂತರವೇ ಗ್ರಾಹಕರಿಗೆ ಹಸ್ತಾಂತರಿಸಲಾಗುತ್ತಿದೆ.

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಈಗಾಗಲೇ ದೇಶದ ವಿವಿಧಡೆ ಹರಡಿಕೊಂಡಿರುವ ನೂರಾರು ವಾಹನ ಮಾರಾಟ ಕೇಂದ್ರಗಳನ್ನು ಪುನಾರಂಭಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಟ ಪ್ರಮಾಣದ ಪ್ರೊಟೋಕಾಲ್ ನಿಯಮಗಳನ್ನು ಜಾರಿಗೊಳಿಸಿದೆ.

ವೈರಸ್ ಭೀತಿ ಸಂದರ್ಭದಲ್ಲಿ ಆನ್‌ಲೈನ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಆನ್‌ಲೈನ್ ವ್ಯವಹಾರ ಕೈಗೊಳ್ಳುವ ಗ್ರಾಹಕರಿಗೆ ವಿಶೇಷ ರಿಯಾಯ್ತಿಗಳನ್ನು ನೀಡುತ್ತಿದ್ದು, ವೈರಸ್ ಭೀತಿ ಹೊಗಲಾಗಲಾಡಿಸಿ ವಾಹನ ಮಾರಾಟ ಹೆಚ್ಚಿಸುವ ಯೋಜನೆ ರೂಪಿಸಿದೆ.

ಇನ್ನು ಕಳೆದ ವಾರ ಹರಿಯಾಣದಲ್ಲಿರುವ ಸುಜುಕಿ ಮೋಟಾರ್‌ಸೈಕಲ್ ಉತ್ಪಾದನಾ ಘಟಕದಲ್ಲಿ ಕರೋನಾ ವೈರಸ್ ಪತ್ತೆಯಾಗಿದ್ದರಿಂದ ಗರಿಷ್ಠ ಸುರಕ್ಷಾ ಕ್ರಮಗಳೊಂದಿಗೆ ವಾಹನಗಳ ಉತ್ಪಾದನೆ ಕೈಗೊಳ್ಳಲಾಗುತ್ತಿದ್ದು, ವೈರಸ್ ಭೀತಿ ನಡುವೆ ಉದ್ಯಮ ವ್ಯವಹಾರಗಳನ್ನು ಕೈಗೊಳ್ಳುವುದೇ ಇದೀಗ ಒಂದು ದೊಡ್ಡ ಸವಾಲಾಗಿದೆ.


Click it and Unblock the Notifications








