ಅನಾವರಣವಾಯ್ತು 2021ರ ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್
ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಸ ಜಿಎಸ್ಎಕ್ಸ್250ಆರ್ ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹಿಂದಿನ ಮಾದರಿಗೆ ಹೋಲಿಸಿದರೆ 2021ರ ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

2021ರ ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಉಳಿದಂತೆ ಯಾವುದೇ ಪ್ರಮುಖ ಅಪ್ಡೇಟ್ ಗಳನ್ನು ಮಾಡಲಾಗಿಲ್ಲ. ಹೊಸ ಜಿಎಸ್ಎಕ್ಸ್250ಆರ್ ಬೈಕ್ ಹೊಸ ಬಣ್ಣವನ್ನು ಹೊರತುಪಡಿಸಿದರೆ ಹಿಂದಿನ ಮಾದರಿಗೆ ಹೋಲುತ್ತದೆ. ಇನ್ನು ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್ ಪೂರ್ಣ ಫೇರಿಂಗ್ ವಿನ್ಯಾಸವನ್ನು ಹೊಂದಿದೆ.

2021ರ ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್ ಮಸ್ಕ್ಯುಲರ್ ಸ್ಟೈಲಿಂಗ್ ಅನ್ನು ಹೊಂದಿದೆ. ಈ ಹೊಸ ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್ ನೋಡಲು ಸ್ಪೋರ್ಟಿ ಲುಕ್ ನೊಂದಿಗೆ ಆಕರ್ಷಕವಾಗಿದೆ. ಇನ್ನು ಒಟ್ಟಾರೆಯಾಗಿ ನೋಡುಗರನ್ನು ತನ್ನತ ಸೆಳೆಯುವ ರೀತಿಯ ಆಕರ್ಷಕ ವಿನ್ಯಾಸವನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಈ ಹೊಸ ಸುಜುಕಿ ಜಿಎಸ್ಎಕ್ಸ್250ಆರ್ ಬೈಕಿನಲ್ಲಿ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಎಲ್ಇಡಿ ಡಿಆರ್ಎಲ್, ಎಲ್ಇಡಿ ಟೈಲೈಟ್ ಮತ್ತು ಎಲ್ಇಡಿ ಹೆಡ್ ಲೈಟ್ ಅನ್ನು ಅಳವಡಿಸಲಾಗಿದೆ.

ಈ 2021ರ ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್ 15-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಬೈಕಿನಲ್ಲಿ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ಸ್ಪ್ಲೀಟ್ ಸ್ಟೈಲ್ ಸೀಟ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಸುಜುಕಿ ಜಿಎಸ್ಎಕ್ಸ್250ಆರ್ ಬೈಕಿನಲ್ಲಿ 248ಸಿಸಿ ಪ್ಯಾರೆಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ ಅನ್ನು 24 ಬಿಹೆಚ್‍ಪಿ ಪವರ್ ಮತ್ತು 22 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು 2021ರ ಸುಜುಕಿ ಜಿಎಸ್ಎಕ್ಸ್250ಆರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಫೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಇನ್ನು ಬೈಕಿನಲ್ಲಿ ಸುರಕ್ಷತಾ ದೃಷ್ಟಯಿಂದ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಸುಜುಕಿ ಜಿಎಸ್ಎಕ್ಸ್250ಆರ್ ಬೈಕಿನ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸಹ ನೀಡಲಾಗಿದೆ.

ಇನ್ನು 2021ರ ಸುಜುಕಿ ಜಿಎಸ್ಎಕ್ಸ್250ಆರ್ ಬೈಕ್ 181 ಕೆಜಿ ತೂಕವನ್ನು ಹೊಂದಿದೆ. ಇನ್ನು ಸುಜುಕಿ ಕಂಪನಿಯು ತನ್ನ ಹೊಸ ಜಿಎಸ್ಎಕ್ಸ್250ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.


Click it and Unblock the Notifications








