ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್‌ ಇಂದು ಜಗತ್ತಿನಾದ್ಯಂತ ಆತಂಕವನ್ನು ಹುಟ್ಟಿಸಿದೆ. ಜಗತ್ತನ್ನೇ ತಲ್ಲಣಗೊಳಿಸಿರುವ ಕರೋನಾ ವೈರಸ್‌ ಭೀತಿಯಿಂದಾಗಿ ಹಲವಾರು ವಾಹನಾ ಉತ್ಪಾದನಾ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಇದರೊಂದಿಗೆ ಟ್ರಯಂಫ್ ಕಂಪನಿಗೂ ಕರೋನಾ ವೈರಸ್ ಬಿಸಿ ತಟ್ಟಿದೆ. ಇದೀಗ ಟ್ರಯಂಫ್ ಕಂಪನಿಯು ಕರೋನಾ ವೈರಸ್ ಭೀತಿಯಿಂದ 2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕು ಬಿಡುಗಡೆಗೊಳಿಸುವುದನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಟ್ರಯಂಫ್ ಕಂಪನಿಯು ತನ್ನ ದುಬಾರಿ 2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್ 25ರಂದು , ಅಂದರೆ ನಾಳಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದ ಮುಂದೂಡಲಾಗಿದೆ.

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಹೊಸ ಮಿಡ್ ಸರಣಿಯ ಈ ಸ್ಪೋರ್ಟ್ಸ್ ಬೈಕ್ ರಿವೈಸ್ ಮಾಡಲಾದ ಡಿಸೈನ್ ಆಕ್ಸೆಸರೀಸ್, ಆಫ್ ರ್‍ಯಾಕ್ ಟೆಕ್ನಾಲಜಿ ಹಾಗೂ ಮಿಡ್ ಸರಣಿಯ ಬಿ‍ಎಸ್ 6 ಎಂಜಿನ್‍ ಅನ್ನು ಹೊಂದಿದೆ. ಟ್ರಯಂಫ್ ಆರ್‍ಎಸ್ ಬೈಕ್, ರಾಕೆಟ್ 3 ಬೈಕಿನ ನಂತರ ಟ್ರಯಂಫ್ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಎರಡನೇ ಬೈಕ್ ಆಗಿದೆ. ಟ್ರಯಂಫ್ ಕಂಪನಿಯ ಐಷಾರಾಮಿ ಬೈಕುಗಳಲ್ಲಿ ಹೊಸ ಸ್ಟ್ರೀಟ್ ಟ್ರಿಪಲ್ ಆರ್ಎಸ್ ಕೂಡ ಒಂದಾಗಿದೆ.

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಮಾರುಕಟ್ಟೆಯಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍‍ಎಸ್ ಬೈಕಿನ ಬೆಲೆಯು ರೂ.11.13 ಲಕ್ಷಗಳಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಬೈಕ್, ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿಗಿಂತ ಹೆಚ್ಚು ರಗಡ್ ಲುಕ್ ಅನ್ನು ಹೊಂದಿದೆ.

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

2020ರ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್, ಇಂಟಿಗ್ರೇಟೆಡ್ ಟ್ವಿನ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ ಹಾಗೂ ಇಂಟಿಗ್ರೇಟೆಡ್ ಡಿ‍ಆರ್‍ಎಲ್‍‍ಗಳನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಬಾಡಿ ಪ್ಯಾನೆಲ್, ರೇರ್ ಸೀಟ್‍‍ಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಈ ಬದಲಾವಣೆಗಳಿಂದ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಟ್ರಯಂಫ್ ಕಂಪನಿಯು ಈ ಬೈಕಿನ ಟಿ‍ಎಫ್‍‍ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿ ಹೊಸ ಗ್ರಾಫಿಕ್ಸ್ ಗಳನ್ನು ಅಳವಡಿಸಲಿದೆ.

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಈ ಹೊಸ ಬೈಕಿನಲ್ಲಿ ಬ್ಲೂಟೂಥ್ ಸೇರಿದಂತೆ ಹಲವಾರು ಫೀಚರ್‍‍ಗಳಿರಲಿವೆ. ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟ್ರೀಟ್ ಟ್ರಿಪಲ್ ಆರ್‍ಎಸ್ ಬೈಕಿನಲ್ಲಿ 765 ಸಿಸಿಯ ಇನ್‍‍ಲೈನ್ ಎಂಜಿನ್ ಅಳವಡಿಸಲಾಗಿದೆ.

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಈ ಎಂಜಿನ್ ಅನ್ನು ಟ್ರಯಂಫ್ ಕಂಪನಿಯ ಮೋಟೊ 2 ಎಂಜಿನ್ ಅಪ್‍‍ಗ್ರೇಡ್ ಮಾಡುತ್ತಿರುವ ತಂಡವು ತಯಾರಿಸಿದೆ. ಈ ಬೈಕ್ ಹೊಸದಾದ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ. ಈ ಬೈಕಿನಲ್ಲಿರುವ ಎಂಜಿನ್ 123 ಬಿ‍ಹೆಚ್‍‍ಪಿ ಪವರ್ ಹಾಗೂ 79 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಯಂಫ್ ಎಂಜಿನಿಯರ್‍‍ಗಳು ಈ ಬೈಕಿನಲ್ಲಿರುವ ರಿಸೆಷನ್ ಸೈಕಲ್ ಅನ್ನು 7%ನಷ್ಟು ಕಡಿಮೆಗೊಳಿಸಿದ್ದಾರೆ

ಬೈಕ್ ಬಿಡುಗಡೆಯನ್ನು ಕಾಡಿದ ಕರೋನಾ ವೈರಸ್‍

ಇದರಿಂದಾಗಿ ಬೈಕ್ ಸವಾರನು ಲೊ ಹಾಗೂ ಮಿಡ್ ಎಂಬ ಎರಡು ವಿಧದ ಸೈಲೆನ್ಸರ್ ಸೌಂಡ್ ಅನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿರುವ ಬಿಎಸ್ 4 ಬೈಕಿನಲ್ಲಿ ಅಪ್‍‍ಶಿಫ್ಟ್ ಇದ್ದರೆ, ಹೊಸ ಬೈಕಿನಲ್ಲಿ ಅಪ್ ಅಂಡ್ ಡೌನ್ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕ್‍ಗಳಲ್ಲಿ ಒಂದಾಗಿದೆ.

More from DriveSpark

Article Published On: Tuesday, March 24, 2020, 16:23 [IST]
English summary
Covid-19 Outbreak: 2020 Triumph Street Triple RS India Launch Postponed Indefinitely. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+