Just In
- 9 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 10 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 11 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 11 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾಗಲಿದೆ ಟ್ರಯಂಫ್ ಟೈಗರ್ 900
ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್ಸೈಕಲ್ ತನ್ನ ಹೊಸ ಟ್ರಯಂಫ್ ಟೈಗರ್ 900, ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಟೈಗರ್ 900 ಬೈಕ್ ಜಿಟಿ ಮತ್ತು ರ್ಯಾಲಿ ಪ್ರೊ ಎಂಬ ಎರಡೂ ರೂಪಾಂರಗಳಲ್ಲಿ ಲಭ್ಯವಿರಲಿದೆ.
ಟ್ರಯಂಫ್ ಮೋಟಾರ್ಸೈಕಲ್ಸ್, ಹೊಸ ಟೈಗರ್ 900 ಬೈಕ್ ಅನ್ನು ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಟ್ರಯಂಫ್ ಟೈಗರ್ 900 ಬೈಕ್ ಅನ್ನು ನವೀಕರಿಸಿದ ಚಾಸಿಸ್, ಸಸ್ಪೆಂಷನ್, ಹೊಸ ಎಂಜಿನ್ ಮತ್ತು ಹೊಸ ಎಂಜಿನ್ನೊಂದಿಗೆ ಬಿಡುಗಡೆಗೊಳಿಸಿದ್ದರು. ಭಾರತದಲ್ಲಿ ಟೈಗರ್ 800 ಬೈಕ್, ಅಡ್ವೆಂಚರ್ ಬೈಕ್ಗಳ ಸರಣಿಯಲ್ಲಿ ಉತ್ತಮ ಬೈಕ್ ಆಗಿದೆ.
ಹೊಸ ಟೈಗರ್ 900 ಬೈಕ್ ಹೆಚ್ಚು ಪವರ್ಫುಲ್ ಎಂಜಿನ್ ಅನ್ನು ಹೊಂದಿದೆ. ಟೈಗರ್ 900 ಬೈಕ್ ಅನ್ನು ಮುಂದಿನ ಏಪ್ರಿಲ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಳಿದೆ. ಹೊಸ ಟೈಗರ್ 900 ಬೈಕಿನಲ್ಲಿ ಬೋಲ್ಡ್ - ಆನ್ ಸಬ್ ಫ್ರೇಮ್, ಹೊಸ ಅಲ್ಯೂಮಿನಿಯಂ ಸ್ವಿಂಗಾರ್ಮ್, ಹೊಸ ಎಲ್ಇಡಿ ಹೆಡ್ಲ್ಯಾಂಪ್, ಡಿಆರ್ಎಲ್ ಮತ್ತು ಟಿಎಫ್ಟಿ ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.
ಹೊಸ ಬೈಕ್ ಟೈಗರ್ 800 ಬೈಕ್ಗಿಂತ ಹಗುರವಾಗಿದೆ. ಟೈಗರ್ 900 ಬೈಕ್ ಟೈಟರ್ ಫ್ಯೂಯಲ್ ಟ್ಯಾಂಕ್ ಹೊಂದಿರುವುದರಿಂದ ಬೈಕ್ ಅನ್ನು ಸುಲಭವಾಗಿ ರೈಡ್ ಮಾಡಲು ಸಹಕಾರಿಯಾಗಿದೆ.
ಇದು ಟೈಗರ್ 800 ಮಾದರಿಯ ಅಲ್ಯೂಮಿನಿಯಂ ಫಿನಿಶ್ಗೆ ಹೋಲಿಸಿದರೆ ಪ್ಲಾಸ್ಟಿಕ್ನಿಂದ ಮಾಡಲ್ಪಟ್ಟ ನವೀಕರಿಸಿದ ಫ್ರಂಟ್ ಫೆಂಡರ್, ವಿಂಡ್ಸ್ಕ್ರೀನ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿದೆ. ಟ್ರಯಂಫ್ ಟೈಗರ್ 800 ಬೈಕಿನ ಎಕ್ಸ್ಆರ್ ಮತ್ತು ಎಕ್ಸ್ಸಿ ರೂಪಾಂತರಗಳನ್ನು ಟ್ರೈಗರ್ 900ನಲ್ಲಿ ಜಿಟಿ ಮತ್ತು ರ್ಯಾಲಿ ಮಾದರಿಗಳೊಂದಿಗೆ ಬದಲಾಯಿಸಿದೆ.
ಟ್ರಯಂಫ್ ಟೈಗರ್ 900 ಬೈಕಿನಲ್ಲಿ 888 ಸಿಸಿ ಇನ್ಲೈನ್ 3 ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಯುರೋ 5 ಮತ್ತು ಬಿಎಸ್-6 ಮಾಲಿನ್ಯ ನಿಯಮದ ಅನುಸಾರವಾಗಿದೆ. ಈ ಎಂಜಿನ್ 94 ಬಿಹೆಚ್ಪಿ ಪವರ್ ಮತ್ತು 86 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಜಿಟಿ ರೂಪಾಂತರದಲ್ಲಿ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು 180 ಎಂಎಂ ಫ್ರಂಟ್ ಮತ್ತು 170 ರೇರ್ ಬ್ರೇಕ್ನೊಂದಿಗೆ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್ ಹೊಂದಿದೆ. ಪ್ರೊ ಟ್ರೀಮ್ 9 ಹಂತದ ಡ್ಯಾಂಪಿಂಗ್ ಮತ್ತು 4 ಫ್ರೀಪಿಕ್ಸ್ ಪ್ರೀ ಲೋಡ್ ಸೆಟ್ಟಿಂಗ್ಗಳೊಂದಿಗೆ ಎಲೆಕ್ಟ್ರಾನಿಕ್ ಅಡ್ಜೆಂಸ್ಟ್ ಬಲ್ ಹೊಂದಿರುವ ಮೊನೊಶಾಕ್ ಅನ್ನು ಹೊಂದಿದೆ.
ಎರಡೂ ಬೈಕ್ಗಳು ಮೆಟ್ಜೆಲರ್ ಟೂರನ್ಸ್ ನೆಕ್ಸ್ಟ್ ಟಯರ್ಗಳೊಂದಿಗೆ 19/17 ಅಲಾಯ್ ವ್ಹೀಲ್ಗಳನ್ನು ಹೊಂದಿದೆ. ಸ್ಟೈಲ್ಮಾ ಕ್ಯಾಲಿಪರ್ಗಳ ಮೂಲಕ ಬ್ರೇಕಿಂಗ್ ಹೊಂದಿದೆ. ಹೊಸ ಬೈಕ್ ಭಾರತದಲ್ಲಿ ರೂ.16 ಲಕ್ಷಗಳಿಂದ 16.5 ಲಕ್ಷಗಳಿಗೆ ಮಾರಾಟವಾಗಬಹುದು.
ಹೊಸ ಟ್ರಯಂಫ್ ಟೈಗರ್ 900 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಫ್ 850 ಜಿಎಸ್, ಹೊಸ ತಲೆಮಾರಿನ ಹೋಂಡಾ ಆಫ್ರಿಕಾ ಟ್ವಿನ್ ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕ್ಗಳಿಗೆ ಪೈಪೋಟಿ ನೀಡುತ್ತದೆ.