ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿ‍ವಿಎಸ್ ಮೋಟಾರ್ ತನ್ನ ಜನಪ್ರಿಯ 2020ರ ಅಪಾಚೆ ಆರ್‍‍ಟಿಆರ್ 160 2ವಿ ಬೈಕ್ ಅನ್ನು ಈ ವರ್ಷದ ಜನವರಿ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಹೊಸ ಟಿ‍ವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕಿನ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಬಿಎಸ್-6 ಟಿ‍‍ವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕಿನ ಎಂಟ್ರಿ ಲೆವೆಲ್ ಡ್ರಮ್ ಬ್ರೇಕ್ ರೂಪಾಂತರ ಮತ್ತು ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯನ್ನು ರೂ.3,500 ರವರೆಗೆ ಏರಿಕೆ ಮಾಡಲಾಗಿದೆ. ಇದೀಗ ಡ್ರಮ ಬ್ರೇಕ್ ರೂಪಾಂತರದ ಬೆಲೆಯು ರೂ.97,000 ಮತ್ತು ಡಿಸ್ಕ್ ಬ್ರೇಕ್ ರೂಪಾಂತರದ ಬೆಲೆಯು ರೂ.1,00,000 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಟಿ‍ವಿಎಸ್ ಕಂಪನಿಯ ಅಪಾಚೆ ಸರಣಿಯ ಬೈಕ್‍‍ಗಳಿಗೆ ಬಜಾಜ್ ಆಟೊ ಕಂಪನಿಯ ಪಲ್ಸರ್ ಸರಣಿಯ ಬೈಕ್‍‍ಗಳು ಪ್ರಬಲ ಪೈಪೋಟಿಯನ್ನು ನೀಡುತ್ತವೆ. ಬಜಾಜ್ ಪಲ್ಸರ್ 150 ಡಿಟಿಎಸ್‍-ಐ ಬೈಕಿಗೆ ಪೈಪೋಟಿಯನ್ನು ನೀಡಲು 2016ರಲ್ಲಿ ಮೊದಲ ಬಾರಿಗೆ ಟಿ‍ವಿಎಸ್ ಕಂಪನಿಯು ಅಪಾಚೆ ಆರ್‍‍ಟಿ‍ಆರ್ 160 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಇತ್ತೀಚೆಗೆ ಟಿ‍ವಿಎಸ್ ಕಂಪನಿಯು ಅಪಾಚೆ ಆರ್‍‍ಟಿಆರ್ 160 4ವಿ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಹೊಸ ಟಿ‍ವಿಎಸ್ ಅಪಾಚೆ ಆ‍ರ್‍‍ಟಿಆರ್ 160 2ವಿ ಬೈಕ್ ಹೊಸ ಬಾಡಿ ಗ್ರಾಫಿಕ್ಸ್ ಮತ್ತು ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಇದರೊಂದಿಗೆ ಟಿ‍‍ವಿಎಸ್ ರೇಸ್ ಟ್ಯೂನ್ಡ್- ಎಫ್‍ಐ ಅಥವಾ ಆರ್ಟಿ-ಫೈ ತಂತ್ರಜ್ಞಾನ ಅಳವಡಿಸಲಾಗಿದೆ. 2020ರ ಅಪಾಚೆ ಸ್ಪೋರ್ಟ್ಸ್ ಕಮ್ಯೂಟರ್ ರೇಂಜ್ 4 ವಿ ಮಾದರಿಗಳಂತೆಯೇ, ಆರ್‍‍ಟಿಆರ್ 160 2ವಿ ಬೈಕ್ ಕೂಡ ಸೆಗ್‍‍ಮೆಂಟ್‍‍ನ ಮೊದಲ ಗ್ಲೈಡ್ ಥ್ರೂ ಟೆಕ್ನಾಲಜಿ (ಜಿಟಿಟಿ) ಯನ್ನು ಹೊಂದಿದೆ. ನಗರದಲ್ಲಿ ಆರಾಮದಾಯಕ ಸವಾರಿ ಮಾಡಲು ಇದು ಸಹಕಾರಿಯಾಗಿದೆ.

MOST READ: ಬಿಡುಗಡೆಯಾಯ್ತು ದುಬಾರಿ ಕವಾಸಕಿ ಝಡ್‍ಎಕ್ಸ್ 25ಆರ್ ಬೈಕ್

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಟ್ರಾಫಿಕ್ ಜಾಮ್‍ಗಳು ಉಂಟಾದ ಸಂದರ್ಭದಲ್ಲಿ ಸಲೀಸಾಗಿ ಸಾಗಲು ಈ ಸಿಸ್ಟಂ ಸಹಕರಿಯಾಗಲಿದೆ. ಹೊಸ ಟಿ‍ವಿಎಸ್ ಅಪಾಚೆ ಆ‍ರ್‍‍ಟಿಆರ್ 160 ಬೈಕಿನಲ್ಲಿ ಬಿಎಸ್-6 ಪ್ರೇರಿತ 159.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಈ ಎಂಜಿನ್ 15.3 ಬಿ‍ಹೆಚ್‍ಪಿ ಪವರ್ ಮತ್ತು 13.03 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. 2020ರ ಟಿ‍ವಿಎಸ್ ಅಪಾಚೆ ಆರ್‍‍ಟಿಆರ್ 160 2ವಿ ಬೈಕ್ ಪರ್ಲ್ ವೈಟ್, ಮ್ಯಾಟ್ ಬ್ಲೂ, ಮ್ಯಾಟ್ ರೆಡ್, ಗ್ಲೋಸ್ ಬ್ಲ್ಯಾಕ್, ಗ್ಲೋಸ್ ರೆಡ್ ಮತ್ತು ಟಿ ಗ್ರೇ ಸೇರಿದಂತೆ ಆರು ಬಣ್ಣಗಳಲ್ಲಿ ಲಭ್ಯವಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಮೊದಲೇ ಹೇಳಿದಂತೆ ಹೊಸ ಅಪಾಚೆ ಆರ್‍‍ಟಿಆರ್ 160 ಬೈಕ್, ಬಜಾಜ್ ಪಲ್ಸರ್ 150 ಡಿಟಿಎಸ್‍-ಐ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಸುಮಾರು 15 ವರ್ಷಗಳ ಕೆಳಗೆ 150-160 ಸಿಸಿ ಬೈಕ್‍‍ಗಳ ಸೆಗ್‍‍ಮೆಂಟ್‍ನಲ್ಲಿ ಅಷ್ಟು ಪೈಪೋಟಿ ಇರಲಿಲ್ಲ.

ದುಬಾರಿಯಾಯ್ತು ಜನಪ್ರಿಯ 2020ರ ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕ್

ಹೊಸ ಟಿ‍ವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕಿಗೆ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಎಫ್‌ಜೆಡ್ 15 ವಿ 3.0, ಸುಜುಕಿ ಜಿಕ್ಸರ್ 150, ಹೋಂಡಾ ಸಿಬಿ ಹಾರ್ನೆಟ್ 160 ಆರ್ ಮತ್ತು ಹೊಸ ಜನರೇಷನ್ ಪಲ್ಸರ್ 150 ಬೈಕ್‍‍ಗಳು ಪೈಪೋಟಿಯನ್ನು ನೀಡುತ್ತವೆ. ಅಪಾಚೆ ಸರಣಿಯಲ್ಲಿ ಆರ್‍‍ಟಿಆರ್ 160 ಬೈಕ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.

Article Published On: Thursday, June 11, 2020, 12:22 [IST]
English summary
TVS Apache RTR 160 BS6 price reaches INR 1 lakh mark. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+