ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಅಪಾಚೆ ಆರ್ಟಿಆರ್ 180 ಬೈಕ್
ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ಜನಪ್ರಿಯ ಬಿಎಸ್-6 ಅಪಾಚೆ ಆರ್ಟಿಆರ್ 180 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಟಿವಿಎಸ್ ಅಪಾಚೆ ಆರ್ಟಿಆರ್ 180 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.01 ಲಕ್ಷಗಳಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಕಂಪನಿಯ ಅಪಾಚೆ ಸರಣಿಯ ಬೈಕ್‍ಗಳಿಗೆ ಬಜಾಜ್ ಆಟೊ ಕಂಪನಿಯ ಪಲ್ಸರ್ ಸರಣಿಯ ಬೈಕ್‍ಗಳು ಪ್ರಬಲ ಪೈಪೋಟಿಯನ್ನು ನೀಡುತ್ತವೆ. ಈ ಹೊಸ ಬಿಎಸ್-6 ಟಿವಿಎಸ್ ಅಪಾಚೆ ಆರ್ಟಿಆರ್ 180 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ಪಲ್ಸರ್ 180 ಬೈಕಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 180 ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಎಸ್-6 ಟಿವಿಎಸ್ ಅಪಾಚೆ ಆರ್‌ಟಿಆರ್ 180 ಬೈಕಿನಲ್ಲಿ ಎಲ್‌ಇಡಿ ಡಿಆರ್‌ಎಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೇಸಿಂಗ್ ಗ್ರಾಫಿಕ್ಸ್, ಎಲ್‌ಇಡಿ ಟೈಲ್ ಲ್ಯಾಂಪ್, ಸಿಂಗಲ್-ಪೀಸ್ ಸೀಟ್, ಎಂಜಿನ್ ಕೌಲ್, ಸ್ಪ್ಲಿಟ್ ಪಿಲಿಯನ್ ಗ್ರ್ಯಾಬ್ ರೈಲ್ ಮತ್ತು ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಬಿಎಸ್-6 ಟಿವಿಎಸ್ ಅಪಾಚೆ ಆರ್ಟಿಆರ್ 180 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಅಪಾಚೆ ಆರ್ಟಿಆರ್ 180 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಸಹ ಹೊಂದಿದೆ.

ಈ ಬೈಕಿನಲ್ಲಿ ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ 270 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 200 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್-ಚಾನೆಲ್ ಸೂಪರ್-ಮೋಟೋ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಈ ಅಪಾಚೆ ಆರ್‌ಟಿಆರ್ 180 ಬೈಕಿನಲ್ಲಿ ಕಂಪನಿಯ ರೇಸ್ ಟ್ಯೂನ್ಡ್ ಫ್ಯೂಯಲ್ ಇಂಜೆಕ್ಷನ್ (ಆರ್‌ಟಿ-ಫೈ) ಸಿಸ್ಟಂ ಜೊತೆಗೆ ನವೀಕರಿಸಿದ 177.4 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಆಯಿಲ್ ಕೂಲರ್ ಅನ್ನು ಪಡೆಯುತ್ತದೆ.

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 16 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 15.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಇದರೊಂದಿಗೆ ಟಿವಿಎಸ್ ಕಂಪನಿಯು ಬಿಎಸ್-6 ಎಕ್ಸ್‌ಎಲ್ 100 ಮಾದರಿಯನ್ನು 3 ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಎಕ್ಸ್‌ಎಲ್ 100 ಮಾದರಿಯಲ್ಲಿ 99.7 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಟಿವಿಎಸ್ ಅಪಾಚೆ ಆರ್ಟಿಆರ್ 180 ಬೈಕ್ ತನ್ನ ಆಕರ್ಷಕ ಲುಕ್ ನಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಟಿವಿಎಸ್ ಅಪಾಚೆ ಆರ್ಟಿಆರ್ 180 ಬೈಕ್ ಯುವ ಜನತೆಯ ಮೆಚ್ಚಿನ ಬೈಕುಗಳಲ್ಲಿ ಒಂದಾಗಿದೆ. ಈ ಹೊಸ ಅಪಾಚೆ ಆರ್‌ಟಿಆರ್ 180 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.


Click it and Unblock the Notifications








