ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಕೋವಿಡ್-19ನಿಂದಾಗಿ ಭಾರೀ ನಷ್ಟ ಅನುಭವಿಸಿರುವ ಆಟೋ ಉದ್ಯವು ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಹೊಸ ವಾಹನಗಳ ಮಾರಾಟವು ನಿಧಾನವಾಗಿ ಏರಿಕೆಯಾಗುತ್ತಿದೆ. ಆದರೆ ವೈರಸ್ ಪರಿಣಾಮ ಆಟೋ ಉತ್ಪಾದನಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗಿದ್ದು, ಇದರಿಂದ ಆಟೋ ಕಂಪನಿಗಳು ಹೊಸ ವಾಹನಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿವೆ.

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಹೌದು, ಕರೋನಾ ವೈರಸ್‌ನಿಂದಾಗಿ ವಾಹನಗಳ ಉತ್ಪಾದನಾ ವೆಚ್ಚವು ಅಧಿಕಗೊಂಡಿದ್ದು, ಟಿವಿಎಸ್ ಮೋಟಾರ್ ಸೇರಿದಂತೆ ಹಲವಾರು ಆಟೋ ಕಂಪನಿಗಳು ಹೊಸ ವಾಹನಗಳ ದರ ಹೆಚ್ಚಿಸಿವೆ. ಟಿವಿಎಸ್ ಮೋಟಾರ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ದರಪಟ್ಟಿಯಲ್ಲಿ ಬಹುತೇಕ ದ್ವಿಚಕ್ರ ವಾಹನಗಳು ದುಬಾರಿ ಬೆಲೆ ಪಡೆದುಕೊಂಡಿದ್ದು, ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ರೂ. 1,050 ಹೆಚ್ಚಳ ಮಾಡಲಾಗಿದೆ.

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಹೊಸ ಬೈಕ್‌ಗಳ ಬೆಲೆಯು ಬಿಎಸ್-6 ಎಂಜಿನ್ ಉನ್ನತೀಕರಣದ ನಂತರ ಇದು 2ನೇ ಬಾರಿಗೆ ದುಬಾರಿ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಈ ಹಿಂದೆಯು ಹೊಸ ಬೈಕಿನ ಬೆಲೆಯಲ್ಲಿ ರೂ.3 ಸಾವಿರದಷ್ಟು ಹೆಚ್ಚಳ ಮಾಡಲಾಗಿತ್ತು.

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಬೆಲೆ ಹೆಚ್ಚಳ ನಂತರ ಅಪಾಚೆ ಆರ್‌ಟಿಆರ್ 200 4ವಿ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.28 ಲಕ್ಷ ಬೆಲೆ ಹೊಂದಿದ್ದು, ಮತ್ತೊಂದು ಅಪಾಚೆ ಸರಣಿ ಬೈಕ್ ಮಾದರಿಯಾದ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಕೂಡಾ ದುಬಾರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಇನ್ನು ಬಿಎಸ್-6 ಎಂಜಿನ್ ಕಡ್ಡಾಯದ ನಂತರ ಅಪಾಚೆ ಆರ್‌ಟಿಆರ್ 160 4ವಿ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ ಮಾದರಿಗಳು ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಉತ್ತಮ ಇಂಧನ ದಕ್ಷತೆಯೊಂದಿಗೆ ರಸ್ತೆಗಿಳಿದಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾದರಿಯು ಬಿಎಸ್-6 ಪ್ರೇರಿತ 159.7ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 16-ಬಿಎಚ್‌ಪಿ ಮತ್ತು 14.1-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಹಾಗೆಯೇ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ ಮಾದರಿಯು ಸಹ ಬಿಎಸ್-6 ಮಾದರಿಯ 197.75ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ ಮತ್ತು 16.8-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಇದರೊಂದಿಗೆ ಎರಡು ಬೈಕ್‌ಗಳಲ್ಲೂ ಈ ಬಾರಿ ಪರ್ಫಾಮೆನ್ಸ್ ಹೆಚ್ಚಳವಾಗಿರುವ ಸ್ಪಷ್ಟವಾಗಿದ್ದು, ಇಂಧನ ದಕ್ಷತೆ ಕೂಡಾ ಗಮನಸೆಳೆಯಲಿದೆ ಎನ್ನಲಾಗಿದೆ. ಜೊತೆಗೆ ಹೊಸ ಬೈಕ್‌ಗಳಲ್ಲಿ ಇದೇ ಮೊದಲ ಬಾರಿಗೆ ಟ್ರಾಫಿಕ್ ದಟ್ಟಣೆಯಲ್ಲೂ ಕಡಿಮೆ ಇಂಧನ ದಹಿಸುವಿಕೆಯ ಹೊಸ ತಂತ್ರಜ್ಞಾನ(ಜಿಟಿಟಿ) ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಇನ್ನುಳಿದಂತೆ ಈ ಹಿಂದಿನ ಬೈಕ್ ಮಾದರಿಯಲ್ಲಿ ನೀಡಲಾಗಿದ್ದ ಬಹುತೇಕ ಫೀಚರ್ಸ್‌ಗಳನ್ನು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಟೈಲ್‌ಲೈಟ್ಸ್, ಎಲ್ಇಡಿ ಡಿಆರ್‌ಎಲ್ಎಸ್ ಮತ್ತು ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ ಸ್ಮಾರ್ಟ್‌ಫೋನ್ ಜೊತೆ ಸಂಪರ್ಕಿಸಲು ಸ್ಮಾಟ್ ಕನೆಕ್ಟ್ ಫೀಚರ್ಸ್ ನೀಡಲಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಎಸ್-6 ಅಪಾಚೆ ಆರ್‌ಟಿಆರ್ 200 4ವಿ ಬೆಲೆಯಲ್ಲಿ ಮತ್ತೆ ಹೆಚ್ಚಳ

ಹಾಗೆಯೇ ಬೈಕ್ ಸವಾರರ ಸುರಕ್ಷತೆಗಾಗಿ ಅಪಾಚೆ ಆರ್‌ಟಿಆರ್ 200 4ವಿ ಬೈಕ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಚಾನೆಲ್ ಎಬಿಎಸ್ ನೀಡಿದಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ನಲ್ಲಿ ಸಿಂಗಲ್ ಚಾನೆಲ್ ಎಬಿಸ್, ಸ್ಲಿಪ್ಲರ್ ಕ್ಲಚ್ ಸೌಲಭ್ಯವನ್ನು ಎರಡು ಬೈಕ್‌ಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

More from DriveSpark

Article Published On: Wednesday, August 5, 2020, 17:33 [IST]
English summary
TVS Apache RTR 200 4V Prices Hiked. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+