ಟಿವಿಎಸ್ ಯಂಗ್ ಮೀಡಿಯಾ ರೇಸರ್: ಫೈನಲ್ ಹಂತಕ್ಕೆ ಲಗ್ಗೆಯಿಟ್ಟ ಡ್ರೈವ್‌ಸ್ಪಾಕ್ ಟೀಂ..

ರೇಸಿಂಗ್ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಟಿವಿಎಸ್ ಮೋಟಾರ್ ಕಂಪನಿಯು ಮಾಧ್ಯಮ ಪ್ರತಿನಿಧಿಗಾಗಿಯೇ ಯಂಗ್ ಮೀಡಿಯಾ ರೇಸರ್ ಸ್ಪರ್ಧೆ ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಚೆನ್ನೈನಲ್ಲಿರುವ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್‌ನಲ್ಲಿ 4ನೇ ಆವೃತ್ತಿಯ ಯಂಗ್ ಮೀಡಿಯಾ ರೇಸರ್ ಆಯೋಜಿಸಿತ್ತು.

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

2017ರಿಂದ ಯುವ ಪತ್ರಕರ್ತರಿಗಾಗಿಯೇ ವಿಶೇಷವಾಗಿ ರೇಸಿಂಗ್ ಸ್ಪರ್ಧೆ ಏರ್ಪಡಿಸುತ್ತಿರುವ ಟಿವಿಎಸ್ ಮೋಟಾರ್ ಕಂಪನಿಯು ಇದೀಗ ನಾಲ್ಕನೇ ಆವೃತ್ತಿಗೆ ಚಾಲನೆ ನೀಡಿದೆ. ನಾಲ್ಕನೇ ಆವೃತ್ತಿಯ ಯಂಗ್ ಮೀಡಿಯಾ ರೇಸರ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಡ್ರೈವ್‌ಸಾರ್ಕ್ ತಂಡದ ರಿವ್ಯೂ ಎಡಿಟರ್ ಪ್ರೋಮಿತ್ ಘೋಷ್ ವಿವಿಧ ಮಾಧ್ಯಮ ಸಂಸ್ಥೆಗಳ ಹದಿನಾಲ್ಕು ಜನ ಪತ್ರಕರ್ತರಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

ಆಟೋಮೊಬೈಲ್ ವಿಭಾಗದ ಯುವ ಪತ್ರಕರ್ತರಲ್ಲಿನ ರೇಸಿಂಗ್ ಕೌಶಲ್ಯವನ್ನು ಗುರುತಿಸಲು ಯಂಗ್ ಮೀಡಿಯಾ ರೇಸರ್ ಸ್ಪರ್ಧೆ ಆಯೋಜಿಸುತ್ತಿರುವ ಟಿವಿಎಸ್ ಮೋಟಾರ್ ಕಂಪನಿಯು ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಆಹ್ವಾನಿಸುತ್ತದೆ.

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

ಕಳೆದ ಮೂರು ಆವೃತ್ತಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರಿರುವ ಡ್ರೈವ್‌ಸ್ಪಾರ್ಕ್ ತಂಡವು ಒಂದು ಬಾರಿ ವಿಜಯಶಾಲಿಯಾಗಿತ್ತು. ಇದೀಗ ನಾಲ್ಕನೇ ಆವೃತ್ತಿಯಲ್ಲೂ ಭರವಸೆ ಮೂಡಿಸಿರುವ ರಿವ್ಯೂ ಎಡಿಟರ್ ಪ್ರೋಮಿತ್ ಘೋಷ್ ಕ್ವಾಲಿಪೈ ಹಂತದಲ್ಲಿ ಐದನೇ ಸ್ಥಾನದೊಂದಿಗೆ ಫೈನಲ್ ರೇಸ್‌ಗೆ ಪ್ರವೇಶ ಪಡೆದಿದ್ದಾರೆ.

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

ಅಹರ್ತಾ ಸುತ್ತಿನಲ್ಲಿ 2.29.31 ಲ್ಯಾಪ್ಸ್‌ನೊಂದಿಗೆ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಪ್ರೋಮಿತ್ ಘೋಷ್ ಮುಂದಿನ ತಿಂಗಳು ನಡೆಯಲಿರುವ ಫೈನಲ್ ಹಂತದಲ್ಲಿ ಯಂಗ್ ರೇಸರ್ ಪ್ರಶಸ್ತಿಗಾಗಿ ಸೆಣಿಸಲಿದ್ದು, ರೇಸಿಂಗ್ ಟ್ರ್ಯಾಕ್‌ನಲ್ಲಿ ವೇಗದ ಬೈಕ್ ಸವಾರಿಗಿಂತಲೂ ತಿರುವುಗಳಲ್ಲಿ ಬೈಕ್ ಚಾಲನಾ ಕೌಶಲ್ಯವೇ ಗೆಲುವಿನ ಪ್ರಮುಖ ಅಂಶವಾಗಿರುತ್ತದೆ.

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

ರೈಸ್ ಟ್ರ್ಯಾಕ್‌ಗಳಿಗಾಗಿಯೇ ಪ್ರತ್ಯೇಕ ಬೈಕ್ ಮಾದರಿಗಳನ್ನು ಹೊಂದಿರುವ ಟಿವಿಎಸ್ ಮೋಟಾರ್ ಕಂಪನಿಯು ಯಂಗ್ ಮೀಡಿಯಾ ರೇಸರ್ ಸ್ಪರ್ಧೆಗಾಗಿ ರೇಸಿಂಗ್ ತಂತ್ರಜ್ಞಾನ ಹೊಂದಿರುವ ಅಪಾಚೆ ಆರ್‌ಟಿಆರ್ 200 4ವಿ ಬಳಕೆ ಮಾಡುತ್ತಿದ್ದು, ಸಾಮಾನ್ಯ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಗಿಂತಲೂ ರೇಸಿಂಗ್ ಆವೃತ್ತಿಯು ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

ಟ್ರ್ಯಾಕ್‌ಗಳಲ್ಲಿ ಬಳಕೆಗೆ ಪೂರಕವಾದ ಅಂಶಗಳನ್ನು ಹೊಂದಿರುವ ರೇಸಿಂಗ್ ಸ್ಪೆಕ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಯು ಸಾಕಷ್ಟು ಹಗುರವಾಗಿದ್ದು, ಟ್ರ್ಯಾಕ್ ತಿರುವುಗಳಲ್ಲಿನ ಕೌಶಲ್ಯ ಪ್ರದರ್ಶನಕ್ಕೆ ಪೂರಕವಾದ ಅಂಶಗಳನ್ನು ಪಡೆದುಕೊಂಡಿದೆ.

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

ರೇಸ್ ಟ್ರ್ಯಾಕ್‌ಗಳಲ್ಲಿನ ಪ್ರತಿ ತಿರುವುಗಳಲ್ಲೂ ಎಚ್ಚರಿಕೆ ವಹಿಸಬೇಕಾದ ರೈಡರ್‌ಗಳು ವೇಗಕ್ಕೆ ತಕ್ಕಂತೆ ದೇಹ ಸ್ಥಿತಿ ಬದಲಿಸುವುದು ಮತ್ತು ರೇಸ್ ಟ್ರ್ಯಾಕ್‌ಗಳ ಲೈನ್‌ಗಳ ಮೇಲೆ ನಿಖರವಾದ ದೃಷ್ಠಿ ಹರಿಸಬೇಕು. ಇಲ್ಲವಾದಲ್ಲಿ ಬೈಕ್ ಸ್ಥಿರತೆ ತಪ್ಪುವುದರ ಜೊತೆಗೆ ಅಪಾಯ ತಪ್ಪಿದ್ದಲ್ಲ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಟಿವಿಎಸ್ ಯಂಗ್ ಮಿಡಿಯಾ ರೇಸರ್‌ನಲ್ಲಿ ಗಮನಸೆಳೆದ ಡ್ರೈವ್‌ಸ್ಪಾರ್ಕ್

ಈ ಎಲ್ಲಾ ಅಂಶಗಳ ಮೇಲೆ ನಿಖರತೆ ಸಾಧಿಸುವರನ್ನು ಗುರುತಿಸಲೆಂದೆ ಆಟೋಮೊಬೈಲ್ ಸುದ್ದಿ ವಿಭಾಗದ ಪತ್ರಕರ್ತರಿಗಾಗಿ ವಿಶೇಷ ರೇಸ್ ಆಯೋಜಿಸುತ್ತಿರುವ ಟಿವಿಎಸ್ ಮೋಟಾರ್ ಕಂಪನಿಯು ಇದೀಗ ನಾಲ್ಕನೇ ಆವೃತ್ತಿಯನ್ನು ಆಯೋಜಿಸಿದ್ದು, ನಾಲ್ಕನೇ ಆವೃತ್ತಿಯ ಅಂತಿಮ ಹಂತದ ಸ್ಪರ್ಧೆಯನ್ನು ಮುಂದಿನ ತಿಂಗಳು ಡಿಸೆಂಬರ್ ಮಧ್ಯಂತರದಲ್ಲಿ ಕೈಗೊಳ್ಳಲು ನಿರ್ಧರಿಸಿದೆ.

Most Read Articles

Kannada
English summary
DriveSpark Reviews Ediotor Qualifies for next race in TVS young media racer program. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X