ಕುಸಿತ ಕಂಡ ಟಿವಿಎಸ್ ಮೋಟಾರ್ಸ್ ಮಾರಾಟ ಪ್ರಮಾಣ
ಟಿವಿಎಸ್ ಮೋಟಾರ್ ತನ್ನ 2020ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಜುಲೈ ತಿಂಗಳಿನಲ್ಲಿ 2,43,788 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2019ರ ಜುಲೈ ತಿಂಗಳಿನಲ್ಲಿ ಕಂಪನಿಯು 2,65,679 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮಾರಾಟ ಪ್ರಮಾಣವು 8.23%ನಷ್ಟು ಕುಸಿತ ಕಂಡಿದೆ. ಕಂಪನಿಯು ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 1,89,647 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ, 2019ರ ಜುಲೈ ತಿಂಗಳಿನಲ್ಲಿ 2,08,489 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು.

ಕಳೆದ ತಿಂಗಳು 1,06,062 ಯುನಿಟ್ ಬೈಕ್‌ಗಳನ್ನು ಮಾರಾಟ ಮಾಡಲಾಗಿದ್ದರೆ, 2019ರ ಜುಲೈ ತಿಂಗಳಿನಲ್ಲಿ 1,08,210 ಯುನಿಟ ಬೈಕ್‌ಗಳನ್ನು ಮಾರಾಟ ಮಾಡಲಾಗಿತ್ತು. ಸ್ಕೂಟರ್ ಮಾರಾಟವು ಕಳೆದ ವರ್ಷ ಜುಲೈಗೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ 25.28%ನಷ್ಟು ಕುಸಿದು 78,603 ಯುನಿಟ್ ಗಳಿಗೆ ತಲುಪಿದೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಜುಲೈ ತಿಂಗಳಿನಲ್ಲಿ 8,956 ಯುನಿಟ್ ತ್ರಿಚಕ್ರ ಹಾಗೂ 59,123 ಯುನಿಟ್ ಮೊಪೆಡ್‌ಗಳು ಮಾರಾಟವಾಗಿ, ಇವುಗಳ ಮಾರಾಟ ಪ್ರಮಾಣವು 13%ನಷ್ಟು ಹೆಚ್ಚಾಗಿದೆ. ಕಳೆದ ತಿಂಗಳು ಟಿವಿಎಸ್ ಕಂಪನಿಯ ರಫ್ತು ಪ್ರಮಾಣವು 10.86%ನಷ್ಟು ಕಡಿಮೆಯಾಗಿದೆ.

ಜುಲೈ ತಿಂಗಳಿನಲ್ಲಿ ಕಂಪನಿಯು ಒಟ್ಟು 62,389 ವಾಹನಗಳನ್ನು ರಫ್ತು ಮಾಡಿದೆ. 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಏಪ್ರಿಲ್-ಜೂನ್ ಅವಧಿಯಲ್ಲಿ ಕಂಪನಿಯು ರೂ.142.30 ಕೋಟಿಗಳಷ್ಟು ಲಾಭ ಗಳಿಸಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲ್ಲಾ ಬಿಎಸ್ 6 ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಟಿವಿಎಸ್ ಕಂಪನಿಯ ಬೈಕ್‌ಗಳಾದ ಸ್ಟಾರ್ ಸಿಟಿ, ಸ್ಟಾರ್ ಸಿಟಿ ಪ್ಲಸ್, ಅಪಾಚೆ ರೇಂಜ್ ಹಾಗೂ ಸ್ಕೂಟರ್‌ಗಳಾದ ಜುಪಿಟರ್, ವೆಗೊ, ಜೆಸ್ಟ್ ಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಟಿವಿಎಸ್ ಕಂಪನಿಯು ಇತ್ತೀಚೆಗೆ ಜೆಸ್ಟ್ ಸ್ಕೂಟರ್‌ನ ಬಿಎಸ್ 6 ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.58,460ಗಳಾಗಿದೆ. ಕಂಪನಿಯು ಈ ವರ್ಷದ ಆರಂಭದಲ್ಲಿ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.15 ಲಕ್ಷಗಳಾಗಿದೆ. ಈ ಸ್ಕೂಟರ್ ಅನ್ನು ಸದ್ಯಕ್ಕೆ ಬೆಂಗಳೂರು ಹಾಗೂ ಪುಣೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಂಪನಿಯು ಇತ್ತೀಚೆಗೆ ಇಕೋಟ್ರಸ್ಟ್ ಎಫ್‌ಐ ಟೆಕ್ನಾಲಜಿಯನ್ನು ಬಿಡುಗಡೆಗೊಳಿಸಿದೆ. ಈ ಟೆಕ್ನಾಲಜಿಯನ್ನು ಹೊಂದಿರುವ ಎಂಜಿನ್ ಸಾಮಾನ್ಯ ಎಂಜಿನ್‌ಗಿಂತ 15%ನಷ್ಟು ಹೆಚ್ಚಿನ ಮೈಲೇಜ್ ನೀಡುತ್ತದೆ. ಈ ಟೆಕ್ನಾಲಜಿಯನ್ನು ಅಪಾಚೆ ಆರ್ ಆರ್ 310, ಜೂಪಿಟರ್ ಹಾಗೂ ಎನ್ ಟಾರ್ಕ್‌ಗಳಲ್ಲಿ ಬಳಸಲಾಗಿದೆ.


Click it and Unblock the Notifications








