ಬಿಎಸ್-6 ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಕರೋನಾ ವೈರಸ್ ಪರಿಣಾಮ ಭಾರೀ ನಷ್ಟ ಅನುಭವಿಸಿರುವ ಆಟೋ ಉದ್ಯವು ಸದ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಹೊಸ ವಾಹನಗಳ ಮಾರಾಟವು ನಿಧಾನವಾಗಿ ಏರಿಕೆಯಾಗುತ್ತಿದೆ. ಆದರೆ ವೈರಸ್ ಪರಿಣಾಮ ಆಟೋ ಉತ್ಪಾದನಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗಿದ್ದು, ಇದು ಹೊಸ ವಾಹನಗಳ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಟಿವಿಎಸ್ ಮೋಟಾರ್ ಕಂಪನಿಯು ಸಹ ಕರೋನಾ ವೈರಸ್ ಪರಿಣಾಮ ನಷ್ಟದಲ್ಲಿರುವ ಹೊಸ ವಾಹನಗಳ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಮುಂದಾಗಿದ್ದು, ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಮಾದರಿಗಳ ಬೆಲೆಯನ್ನು ಏರಿಕೆ ಮಾಡಿದೆ. ಹೊಸ ದರಪಟ್ಟಿಯಲ್ಲಿ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಸಹ ದುಬಾರಿ ಬೆಲೆ ಪಡೆದುಕೊಂಡಿದ್ದು, ಎಕ್ಸ್‌ಶೋರೂಂ ದರದಲ್ಲಿ ರೂ.1 ಸಾವಿರದಷ್ಟು ಹೆಚ್ಚಳ ಮಾಡಿದೆ.

ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಬಿಎಸ್-6 ಎಂಜಿನ್ ಜೋಡಣೆಯ ನಂತರ ಇದು ಎರಡನೇ ಬಾರಿಗೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಈ ಹಿಂದೆ ಬಿಎಸ್-4 ಎಂಜಿನ್‌ನಿಂದ ಬಿಎಸ್-6 ಎಂಜಿನ್ ಮಾದರಿಗೆ ಉನ್ನತೀಕರಿಸಿದಾಗಲೂ ಹೆಚ್ಚುವರಿ ರೂ.7,800 ಹೆಚ್ಚುವರಿ ಬೆಲೆ ಏರಿಕೆ ಮಾಡಲಾಗಿತ್ತು.

ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಬಿಎಸ್-6 ಜಾರಿ ನಂತರ ಕಳೆದ ಜೂನ್ ತಿಂಗಳಿನಲ್ಲೂ ರೂ.950 ಬೆಲೆ ಏರಿಕೆ ಮಾಡಿದ್ದ ಟಿವಿಎಸ್ ಕಂಪನಿಯು ಒಟ್ಟು ಬಿಎಸ್-6 ಮಾದರಿಯ ಮೇಲೆ ಬಿಎಸ್-4 ಮಾದರಿಗಿಂತಲೂ ರೂ. 10 ಸಾವಿರದಷ್ಟು ಹೆಚ್ಚಳ ಮಾಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸ್ಕೂಟರ್ ಇದೀಗ ಆರಂಭಿಕವಾಗಿ ರೂ. 67,885 ಮತ್ತು ಟಾಪ್ ಎಂಡ್ ಮಾದರಿಯು ರೂ. 74,365 ಬೆಲೆ ಪಡೆದುಕೊಂಡಿದೆ.

ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಹೊಸ ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ಡ್ರಮ್ ಬ್ರೇಕ್ ಮಾದರಿಯು ಆರಂಭಿಕ ಮಾದರಿಯಾಗಿದ್ದರೆ ರೇಸ್ ಎಡಿಷನ್ ಹೈ ಎಂಡ್ ಮಾದರಿಯಾಗಿದ್ದು, 125 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು 9.25-ಬಿಎಚ್‌ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ರೇಸ್ ಎಡಿಷನ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಬಿಎಸ್-6 ಸ್ಕೂಟರ್‌ನಲ್ಲಿ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕಾರ್ಬ್ಯುಟರ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ನೀಡಲಾಗಿದ್ದು, ಇದರಿಂದ ಹೊಸ ಸ್ಕೂಟರ್‌ನಲ್ಲಿ ಪರ್ಫಾಮೆನ್ಸ್ ಹೆಚ್ಚಳವಾಗಿರುವುದಲ್ಲದೇ ಮಾಲಿನ್ಯ ಉತ್ಪತ್ತಿ ಪ್ರಮಾಣದಲ್ಲೂ ಕೂಡಾ ಸುಧಾರಣೆಯಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯಲ್ಲಿ ಮತ್ತೆ ಹೆಚ್ಚಳ ಮಾಡಿದ ಟಿವಿಎಸ್

ಇದರೊಂದಿಗೆ ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ರೇಸ್ ಎಡಿಷನ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಈ ಬಾರಿ ಪ್ರಮುಖ ಆಕರ್ಷಣೆಯಾಗಲಿದೆ. ಇನ್ನುಳಿದಂತೆ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಲ್ಲಿರುವಂತೆಯೇ ಮುಂದುವರಿಸಲಾಗಿದ್ದು, ಬಿಎಸ್-6 ಎಂಜಿನ್ ಜೊತೆ ಉನ್ನತೀಕರಣಗೊಂಡಿರುವ 125ಸಿಸಿ ಪ್ರತಿಸ್ಪರ್ಧಿ ಸ್ಕೂಟರ್‌ಗಳಿಗೆ ಇದು ಪ್ರಬಲ ಪೈಪೋಟಿ ನೀಡುತ್ತಿದೆ.

Article Published On: Tuesday, August 4, 2020, 13:55 [IST]
English summary
TVS NTorq 125 BS6 Price Hiked. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+