ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಎನ್‌ಟಾರ್ಕ್ 125 ರೇಸ್ ಎಡಿಷನ್ ಮಾದರಿಯಲ್ಲಿ ಯೆಲ್ಲೋ ಬ್ಲ್ಯಾಕ್ ಬಣ್ಣದ ಆಯ್ಕೆ ಹೊಂದಿರುವ ಡ್ಯುಯಲ್ ಟೋನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಯೆಲ್ಲೋ ಮತ್ತು ಬ್ಲ್ಯಾಕ್ ಬಣ್ಣದ ಆಯ್ಕೆ ಹೊಂದಿರುವ ಎನ್‌ಟಾರ್ಕ್ ಹೊಸ ರೇಸ್ ಎಡಿಷನ್ ಮಾದರಿಯು ಪರ್ಫಾಮೆನ್ಸ್ ಸ್ಕೂಟರ್ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದ್ದು, ರೇಸ್ ಎಡಿಷನ್ ಮಾದರಿಯಲ್ಲಿ ಈಗಾಗಲೇ ರೆಡ್ ಮತ್ತು ಬ್ಲ್ಯಾಕ್ ಬಣ್ಣದ ಆಯ್ಕೆ ಲಭ್ಯವಿದೆ. ಇದೀಗ ಗ್ರಾಹಕರ ಬೇಡಿಕೆಗೆ ಮೇರೆ ಸ್ಟ್ಯಾಂಡರ್ಡ್ ಆವೃತ್ತಿಯ ಬಣ್ಣದ ಆಧಾರದ ಮೇಲೆ ಯೆಲ್ಲೋ ಮತ್ತು ಬ್ಲ್ಯಾಕ್ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 74,365 ಬೆಲೆ ನಿಗದಿ ಮಾಡಲಾಗಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಹೊಸ ಸ್ಕೂಟರ್ ಮಾದರಿಯು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡ್ ಮತ್ತು ಬ್ಲ್ಯಾಕ್ ಡ್ಯುಯಲ್ ಟೋನ್ ಮಾದರಿಯಲ್ಲೇ ಬೆಲೆ ಪಡೆದುಕೊಂಡಿದ್ದು, ಹೊಸ ಬಣ್ಣದ ಆಯ್ಕೆ ಹೊಂದಿರುವ ಸ್ಕೂಟರ್ ಬೆಲೆಯಲ್ಲಿ ಯಾವುದೇ ಹೆಚ್ಚುವರಿ ದರ ವಿಧಿಸಿಲ್ಲ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಇನ್ನು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಸ್ಪೋರ್ಟಿ ಲುಕ್ ಹೊಂದಿರುವ ರೇಸ್ ಎಡಿಷನ್ ಮಾದರಿಯು ರೇಸಿಂಗ್ ಗ್ರಾಫಿಕ್ಸ್ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದ್ದು, ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಡಿಆರ್‌ಎಸ್ ಪಡೆದುಕೊಂಡಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಸ್ಟ್ಯಾಂಡರ್ಡ್ ಮಾದರಿಯಲ್ಲಿ ಬಿಎಸ್-6 ಎಂಜಿನ್ ಜೋಡಣೆಯ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಈ ಹಿಂದೆ ಬಿಎಸ್-4 ಎಂಜಿನ್‌ನಿಂದ ಬಿಎಸ್-6 ಎಂಜಿನ್ ಮಾದರಿಗೆ ಉನ್ನತೀಕರಿಸಿದಾಗಲೂ ಹೆಚ್ಚುವರಿ ರೂ.7,800 ಹೆಚ್ಚುವರಿ ಬೆಲೆ ಏರಿಕೆ ಮಾಡಲಾಗಿತ್ತು.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಬಿಎಸ್-6 ಜಾರಿ ನಂತರ ಕಳೆದ ಜೂನ್ ತಿಂಗಳಿನಲ್ಲೂ ರೂ.950 ಬೆಲೆ ಏರಿಕೆ ಮಾಡಿದ್ದ ಟಿವಿಎಸ್ ಕಂಪನಿಯು ಒಟ್ಟು ಬಿಎಸ್-6 ಮಾದರಿಯ ಮೇಲೆ ಬಿಎಸ್-4 ಮಾದರಿಗಿಂತಲೂ ರೂ. 10 ಸಾವಿರದಷ್ಟು ಹೆಚ್ಚಳ ಮಾಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸ್ಕೂಟರ್ ಇದೀಗ ಆರಂಭಿಕವಾಗಿ ರೂ. 67,885 ಮತ್ತು ಟಾಪ್ ಎಂಡ್ ಮಾದರಿಯು ರೂ. 74,365 ಬೆಲೆ ಪಡೆದುಕೊಂಡಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಹೊಸ ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ಡ್ರಮ್ ಬ್ರೇಕ್ ಮಾದರಿಯು ಆರಂಭಿಕ ಮಾದರಿಯಾಗಿದ್ದರೆ ರೇಸ್ ಎಡಿಷನ್ ಹೈ ಎಂಡ್ ಮಾದರಿಯಾಗಿದ್ದು, 125 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು 9.25-ಬಿಎಚ್‌ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ರೇಸ್ ಎಡಿಷನ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಬಿಎಸ್-6 ಸ್ಕೂಟರ್‌ನಲ್ಲಿ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಿವಿಎಸ್

ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕಾರ್ಬ್ಯುಟರ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ನೀಡಲಾಗಿದ್ದು, ಇದರಿಂದ ಹೊಸ ಸ್ಕೂಟರ್‌ನಲ್ಲಿ ಪರ್ಫಾಮೆನ್ಸ್ ಹೆಚ್ಚಳವಾಗಿರುವುದಲ್ಲದೇ ಮಾಲಿನ್ಯ ಉತ್ಪತ್ತಿ ಪ್ರಮಾಣದಲ್ಲೂ ಕೂಡಾ ಸುಧಾರಣೆಯಾಗಿದೆ.

Article Published On: Tuesday, August 11, 2020, 11:46 [IST]
English summary
TVS Ntorq 125 Race Edition In Yellow Paint Scheme Launched. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+