ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಬಿಎಸ್-6 ರೇಡಿಯಾನ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಟಿವಿಎಸ್ ಕಂಪನಿಯು ಹೊಸ ರೇಡಿಯಾನ್ ಬೈಕನ್ನು ಬಿಡುಗಡೆ ಮಾಡುವ ಮುನ್ನವೇ ಮಾಹಿತಿಯನ್ನು ಬಹಿರಂಗಪಡಿಸಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಟಿವಿಎಸ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ರೇಡಿಯಾನ್ ಬೈಕಿನ ಮಾಹಿತಿಯನ್ನು ಬಹಿರಂಗಪಡಿಸಿದೆ. ಮುಂದಿನ ಎರಡು ತಿಂಗಳಲ್ಲಿ ಟಿವಿಎಸ್ ಕಂಪನಿಯು ರೇಡಿಯಾನ್ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಟಿವಿಎಸ್ ರೇಡಿಯಾನ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಟಿವಿಎಸ್ ರೇಡಿಯಾನ್ ಬೈಕ್ ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯಬಹುದು.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಹೊಸ ಟಿವಿಎಸ್ ರೇಡಿಯಾನ್ ಬೈಕಿನಲ್ಲಿ ಹಿಂದಿನ ಮಾದರಿಯಲ್ಲಿರುವಂತಹ 109.7 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಎಂಜಿನ್ 7,350 ಆರ್‌ಪಿಎಂನಲ್ಲಿ 8.08 ಬಿಹೆಚ್‌ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 8.7 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಎಂಜಿನ್ ನೊಂದಿಗೆ ನಾಲ್ಕು-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್ ನಲ್ಲಿ ಫ್ಯೂಯಲ್ ಇಂಜೆಕ್ಷನ್ ಅನ್ನು ಸೇರ್ಪಡಿಸಲಾಗಿದೆ. ಇದರಿಂದಾಗಿ ಈ ಹೊಸ ಬೈಕಿನ ಮೈಲೇಜ್ 15% ಸುಧಾರಣೆಯಾಗಿದೆ ಎಂದು ಟಿವಿಎಸ್ ಕಂಪನಿಯು ಹೇಳಿಕೊಂಡಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಹಿಂದಿನ ಬಿಎಸ್-4 ಟಿವಿಎಸ್ ರೇಡಿಯಾನ್ ಮಾದರಿಯ 109.7 ಸಿಸಿ ಎಂಜಿನ್ 7,000 ಆರ್‌ಪಿಎಂನಲ್ಲಿ 8.2 ಬಿಹೆಚ್‌ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಬಿಎಸ್-6 ರೇಡಿಯಾನ್ ಬೈಕ್ ಸ್ಟ್ಯಾಂಡರ್ಡ್ ಮತ್ತು ಟಾಪ್-ಸ್ಪೆಕ್ ಮಾದರಿಯಾದ "ಕಮ್ಯೂಟರ್ ಬೈಕ್ ಆಫ್ ದಿ ಇಯರ್ ಎಡಿಷನ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ಕಮ್ಯೂಟರ್ ಬೈಕ್ ಆಫ್ ದಿ ಇಯರ್ ಎಡಿಷನ್ ವಿಶೇಷ ಆವೃತ್ತಿಯಾಗಿರಬಹುದು. ಈ ಆವೃತ್ತಿಯನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸಬಹುದು.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಹೊಸ ಟಿವಿಎಸ್ ರೇಡಿಯಾನ್ ಸ್ಟ್ಯಾಂಡರ್ಡ್ ರೂಪಾಂತರವು ಆರು ಬಣ್ಣಗಳಲ್ಲಿ ಲಭ್ಯವಿರಲಿದೆ. ಕಮ್ಯೂಟರ್ ಬೈಕ್ ಆಫ್ ದಿ ಇಯರ್ ಎಡಿಷನ್" ನಲ್ಲಿ ಫ್ರಂಟ್ ಡಿಸ್ಕ್ ಬ್ರೇಕ್, ಟ್ಯಾಂಕ್ ಪ್ಯಾಡ್, ಪೆಟ್ರೋಲ್ ಟ್ಯಾಂಕ್ ಕುಶನ್, ಪ್ರೀಮಿಯಂ ಸೀಟ್ ವಿನ್ಯಾಸ, ಕ್ರೋಮ್ ರೇರ್ ವ್ಯೂ ಮಿರರ್ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಹೊಂದಿರುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಇದರೊಂದಿಗೆ ಈ ಬೈಕಿನಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಟೇಲ್ ಲ್ಯಾಂಪ್‌ಗಳು ಮತ್ತು ಹಿಂಭಾಗದಲ್ಲಿ ಲಗೇಜ್ ರ್ಯಾಕ್ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಹೊಸ ಟಿವಿಎಸ್ ರೇಡಿಯಾನ್ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್-ಶಾಕ್ಸ್ ಸೆಟಪ್ ಅನ್ನು ಒಳಗೊಂಡಿದೆ. ಈ ಬೈಕಿನಲ್ಲಿ ಎರಡು ಟಯರ್‍ಗಳಿಗೆ ಡ್ರಮ್ ಬ್ರೇಕ್‍ ಗಳನ್ನು ಜೋಡಿಸಲಾಗಿದೆ. ಟಾಪ್ ಸ್ಪೆಕ್ ನಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಬಿಎಸ್-6 ಟಿವಿಎಸ್ ರೇಡಿಯಾನ್ ಬೈಕ್

ಹೊಸ ಟಿವಿಎಸ್ ರೇಡಿಯಾನ್ ಬೈಕಿನಲ್ಲಿ ಸಿಂಕ್ರೊನೈಸ್ಡ್ ಬ್ರೇಕಿಂಗ್ ತಂತ್ರಜ್ಞಾನವನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಹೊಸ ಟಿವಿಎಸ್ ರೇಡಿಯಾನ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.60,000 ಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Friday, April 10, 2020, 11:16 [IST]
English summary
TVS Radeon BS6 Specs Revealed Ahead Of Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+