ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಮಾಹಾಮಾರಿ ಕರೋನಾ ವೈರಸ್‌ನಿಂದಾಗಿ ಎಲ್ಲಾ ವಲಯದಲ್ಲೂ ಆರ್ಥಿಕ ಮುಗ್ಗಟ್ಟು ತೀವ್ರಗೊಂಡಿದ್ದು, ಆಟೋ ಉತ್ಪಾದನಾ ಕಂಪನಿಗಳು ಭಾರೀ ನಷ್ಟ ಅನುಭವಿಸಿವೆ. ಟಿವಿಎಸ್ ಮೋಟಾರ್ಸ್ ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.67 ರಷ್ಟು ನಷ್ಟ ಅನುಭವಿಸಿದ್ದು, ರೂ. 139.07 ಕೋಟಿ ಲಾಭಾಂಶ ಕಡಿತವಾಗಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

2020-21ರ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಒಟ್ಟು 2.55 ಲಕ್ಷ ದ್ವಿಚಕ್ರ ವಾಹನ ವಾಹನಗಳನ್ನು ಮಾರಾಟ ಮಾಡಿರುವ ಟಿವಿಎಸ್ ಮೋಟಾರ್ ಕಂಪನಿಯು ಕಳೆದ ವರ್ಷ ಇದೇ ಅವಧಿಯಲ್ಲಿ 8.84 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಅದರ ಹಿಂದಿನ ವರ್ಷದ ವಾಹನ ಮಾರಾಟಕ್ಕಿಂತಲೂ ರೂ. 142.03 ಕೋಟಿ ಲಾಭಾಂಶ ಪಡೆದುಕೊಂಡಿತ್ತು.

ಆದರೆ ಈ ಬಾರಿ ಕರೋನಾ ವೈರಸ್‌ನಿಂದಾಗಿ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ತೀವ್ರವಾಗಿ ನಷ್ಟ ಅನುಭವಿಸಿದ್ದು, ಇದೀಗ 2ನೇ ತ್ರೈಮಾಸಿಕ ಅವಧಿಯಲ್ಲಿ ಕೆಲವು ಪ್ರಮುಖ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಸುಧಾರಣೆ ತರಲಾಗುತ್ತಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಟಿವಿಎಸ್ ಮೋಟಾರ್ ಕಂಪನಿಯು ದ್ವಿಚಕ್ರ ವಾಹನಗಳ ಮಾರಾಟ ಮಾತ್ರವಲ್ಲದೆ ವಾಣಿಜ್ಯ ಬಳಕೆಯ ವಾಹನಗಳ ಮಾರಾಟದಲ್ಲೂ ತೀವ್ರವಾಗಿ ಕುಸಿತ ಕಂಡಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ರಫ್ತು ಮಾಡಲಾಗುವ ವಾಹನ ಪ್ರಮಾಣವು ಕುಸಿತಕಂಡಿದೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಒಟ್ಟಾರೆಯಾಗಿ ಹೇಳಬೇಕೆಂದರೆ ಆಟೋ ಉದ್ಯಮವೇ ಭಾರೀ ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಬಹುತೇಕ ಕಂಪನಿಗಳು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.60ರಿಂದ ಶೇ.90ರಷ್ಟು ನಷ್ಟ ಅನುಭವಿಸಿ ಎನ್ನಬಹುದು.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಇನ್ನು ಲಾಕ್‌ಡೌನ್ ತೆರವುಗೊಂಡ ನಂತರ ಬಹುತೇಕ ಆಟೋ ಕಂಪನಿಗಳು ಹೊಸ ಮಾರ್ಗಸೂಚಿ ಅನ್ವಯ ವಾಹನ ಮಾರಾಟವನ್ನು ಮುಂದುವರಿಸಿದ್ದು, ವೈರಸ್ ಭೀತಿ ನಡುವೆಯೂ ವಿವಿಧ ಸುರಕ್ಷಾ ಕ್ರಮಗಳೊಂದಿಗೆ ಸುರಕ್ಷಿತ ವ್ಯಾಪಾರ ವಹಿವಾಟು ನಡೆಸುತ್ತಿವೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಕರೋನಾ ಮಹಾಮಾರಿಯಿಂದಾಗಿ ಕೇವಲ ಆಟೋ ಉದ್ಯಮದಲ್ಲಿ ಮಾತ್ರವಲ್ಲ ಎಲ್ಲಾ ವಾಣಿಜ್ಯ ವಹಿವಾಟಿನಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಒಂದು ಹೊಸ ಸವಾಲಾಗಿ ಪರಿಣಮಿಸಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಸದ್ಯ ತೀವ್ರ ಕುಸಿತ ಕಂಡಿರುವ ಹೊಸ ವಾಹನ ಮಾರಾಟವು ಮತ್ತೆ ಮೊದಲಿನಂತೆ ಚೇತರಿಸಿಕೊಳ್ಳಲು ತುಸು ಸಮಯಾವಕಾಶ ತೆಗೆದುಕೊಳ್ಳಲಿದ್ದು, ಆಟೋ ತಜ್ಞರ ಪ್ರಕಾರ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಬರಲು ಕನಿಷ್ಠ 3 ರಿಂದ 4 ವರ್ಷ ಬೇಕಾಗಬಹುದು ಅಂದಾಜಿಸಿದ್ದಾರೆ.

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಭಾರತೀಯ ಆಟೋ ಮೊಬೈಲ್ ಉದ್ಯಮದ ನಿರ್ವಹಣೆ ಮಾಡುತ್ತಿರುವ SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್) ಸಂಘವು ಕೂಡಾ ಇದೇ ಅಂಶದ ಮೇಲೆ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರದಿಂದ ಗರಿಷ್ಠ ವಿನಾಯ್ತಿಗಳಿಗೆ ಬೇಡಿಕೆಯಿಡುತ್ತಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಮೊದಲ ತ್ರೈಮಾಸಿಕ ಅವಧಿಯಲ್ಲಿ ಟಿವಿಎಸ್ ಕಂಪನಿಗೆ ಶೇ.67 ರಷ್ಟು ಲಾಸ್

ಹೊಸ ವಾಹನ ಮಾರಾಟವನ್ನು ಸುಧಾರಿಸುವತ್ತ ಸರ್ಕಾರ ಕೈಗೊಳ್ಳಬಹುದಾದ ಸಲಹೆಗಳ ಪಟ್ಟಿ ಮಾಡಿರುವ ಸೈಮಾ ಸಂಘವು ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಾಸ್ತಾಪಿಸುವ ಸಾಧ್ಯತೆಗಳಿದ್ದು, ಜಿಎಸ್‌ಟಿ ಇಳಿಕೆ ಸೇರಿದಂತೆ ಹಲವು ವಿನಾಯ್ತಿಗಳನ್ನು ಕೋರುವ ಸಾಧ್ಯತೆಗಳಿವೆ.

Most Read Articles

Kannada
English summary
TVS Registered Loss Of Rs 139.07 Crore In First Quarter Of Financial Year 2021. Read in Kannada.
Story first published: Wednesday, July 29, 2020, 22:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X