ಬಹಿರಂಗವಾಯ್ತು ಸ್ಕೂಟಿ ಪೆಪ್ ಪ್ಲಸ್ ಬಿಎಸ್ 6 ಸ್ಕೂಟರ್ ಬೆಲೆ
ಬಿಎಸ್ 4 ವಾಹನಗಳು ಹೆಚ್ಚು ವಾಯು ಮಾಲಿನ್ಯವನ್ನು ಉಂಟು ಮಾಡುತ್ತಿದ್ದ ಕಾರಣಕ್ಕೆ, ಬಿಎಸ್ 4 ಎಂಜಿನ್ ಹೊಂದಿರುವ ಎಲ್ಲಾ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಮುಂದೆ ಬಿಎಸ್ 6 ಎಂಜಿನ್ ಹೊಂದಿರುವ ವಾಹನಗಳನ್ನು ಮಾತ್ರ ರಿಜಿಸ್ಟರ್ ಮಾಡಲಾಗುವುದು.

ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಗೊಳಿಸುತ್ತಿವೆ. ಟಿವಿಎಸ್ ಕಂಪನಿಯು ಸಹ ತನ್ನ ಸರಣಿಯ ಎಲ್ಲಾ ವಾಹನಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಗೊಳಿಸುತ್ತಿದೆ. ಬಿಎಸ್ 6 ಎಂಜಿನ್ ಹೊಂದಿರುವ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಅನ್ನು ಟಿವಿಎಸ್ ಕಂಪನಿಯು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರಿನ ಆರಂಭಿಕ ಬೆಲೆ ರೂ.51,754ಗಳಾದರೆ, ಗರಿಷ್ಠ ಬೆಲೆ ರೂ.52,954ಗಳಾಗಲಿದೆ. ಈ ಬೆಲೆ ಟಾಪ್ ಎಡಿಶನ್ ಪ್ಯಾಪೆಲಿಯಸ್ ಹಾಗೂ ಮ್ಯಾಟ್ ಗಳಿಗೆ ಅನ್ವಯಿಸಲಿದೆ.

ಬಿಎಸ್ 6 ಸ್ಕೂಟರಿನ ಬೆಲೆ ಬಿಎಸ್ 4 ಸ್ಕೂಟರಿಗಿಂತ ರೂ.6,400 - ರೂ.6,700 ಹೆಚ್ಚಾಗಿರಲಿದೆ. ಈ ಬೆಲೆ ಏರಿಕೆಯ ನಂತರವೂ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್, ಕಡಿಮೆ ಬೆಲೆಯನ್ನು ಹೊಂದಿರುವ ಸ್ಕೂಟರ್ ಆಗಿರಲಿದೆ.

ಎಂಜಿನ್ ನ ಪವರ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಸ್ಕೂಟರ್ ನಲ್ಲಿರುವ ಎಂಜಿನ್ ಸಿಸ್ಟಂನಲ್ಲಿ ಕಾರ್ಬ್ಯುರೇಟರ್‌ಗೆ ಫ್ಯೂಯಲ್ -ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದರಿಂದಾಗಿ ಈ ಎಂಜಿನ್ 6,500 ಆರ್‌ಪಿಎಂನಲ್ಲಿ 5 ಬಿಹೆಚ್‌ಪಿ ಪವರ್ ಹಾಗೂ 4,000 ಆರ್‌ಪಿಎಂನಲ್ಲಿ 5.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ 90 ಸಿಸಿ ಎಂಜಿನ್ ಹೊಂದಿರುವ ಏಕೈಕ ಸ್ಕೂಟರ್ ಆಗಿದೆ. ಈಗ ಈ ಸ್ಕೂಟರ್ ಆನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಮಾಡಲಾಗಿದೆ. ಟಿವಿಎಸ್ ಕಂಪನಿಯು ಇನ್ನೂ ಹಲವು ವರ್ಷಗಳವರೆಗೆ ಇದೇ ಎಂಜಿನ್ ಅನ್ನು ಈ ಸ್ಕೂಟರಿನಲ್ಲಿ ಮುಂದುವರೆಸುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಹುತೇಕ ಸ್ಕೂಟರ್‌ಗಳು 110 ಸಿಸಿ ಹಾಗೂ 125 ಸಿಸಿಯ ಎಂಜಿನ್ ಗಳನ್ನು ಹೊಂದಿವೆ. ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಅನ್ನು ಬಿಎಸ್ 6 ಎಂಜಿನ್‌ನೊಂದಿಗೆ ಅಪ್ ಗ್ರೇಡ್ ಗೊಳಿಸಿರುವ ಕಾರಣಕ್ಕೆ ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಗಳಿವೆ.

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್, ಯಾವುದೇ ಸ್ಕೂಟರ್ ಗಳಿಗೆ ನೇರವಾದ ಪೈಪೋಟಿಯನ್ನು ನೀಡುವುದಿಲ್ಲ. ಹೀರೊ ಕಂಪನಿಯು ಇತ್ತೀಚೆಗೆ ಬಿಎಸ್ 6 ಎಂಜಿನ್ ನಲ್ಲಿ ಬಿಡುಗಡೆಗೊಳಿಸಿದ ಬ್ಲೇಜರ್ ಪ್ಲಸ್ 110 ಸ್ಕೂಟರಿನ ಬೆಲೆ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರಿನ ಬೆಲೆಗಿಂತ ರೂ.3,400 ಹೆಚ್ಚಾಗಿದೆ.


Click it and Unblock the Notifications








