ಬಿಡುಗಡೆಯಾಗಲಿದೆ ಹೊಸ ಟಿವಿಎಸ್ ವಿಕ್ಟರ್ ಬೈಕ್
ವಿಕ್ಟರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದು ಎಂದು ಅಧಿಕೃತವಾಗಿ ಟಿವಿಎಸ್ ಕಂಪನಿಯು ಖಚಿತಪಡಿಸಿದೆ. ಕಂಪನಿಯು ತನ್ನ ಸರಣಿಯಲ್ಲಿರುವ ಹಲವು ಜನಪ್ರಿಯ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಇದರಲ್ಲಿ ಟಿಬಿಎಸ್ ವಿಕ್ಟರ್ ಬೈಕು ಕೂಡ ಒಳಗೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ವಿಕ್ಟರ್ 110 ಮಾದರಿಯನ್ನು ಕಂಪನಿಯು ಸ್ಥಗಿತಗೊಳಿಸಲಾಗುತ್ತದೆ ಎಂಬ ವದಂತಿಗಳಿವೆ. ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಟಿವಿಎಸ್ ಕಂಪನಿಯು ಇದು ಕೇವಲ ಉಹಾಪೋಹ ಸುದ್ದಿ ಎಂದು ಹೇಳಿದೆ. ಮುಂಬರುವ ಟಿವಿಎಸ್ ವಿಕ್ಟರ್ ಬಿಎಸ್-6 ಮಾದರಿಯು ತನ್ನ ಹಿಂದಿನ ಮಾದರಿಯ ಒಟ್ಟಾರೆ ಸಿಲೂಯೆಟ್ ಮತ್ತು ವಿನ್ಯಾಸದ ಕೆಲವು ಅಂಶಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಹೊಸ ಟಿವಿಎಸ್ ವಿಕ್ಟರ್ ಬೈಕ್ ಹೊಸ ಗ್ರಾಫಿಕ್ಸ್ ಮತ್ತು ಕೆಲವು ಹೆಚ್ಚುವರಿ ಫೀಚರ್ ಗಳನ್ನು ಹೊಂದಿರಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದರೊಂದಿಗೆ ಹೊಸ ಬಣ್ಣಗಳ ಆಯ್ಕೆಗಳನ್ನು ಸಹ ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಟಿವಿಎಸ್ ಈಗಾಗಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾದ 110 ಸಿಸಿ ಎಂಜಿನ್ ಹೊಂದಿದೆ. ಇದು ಬ್ರ್ಯಾಂಡ್ ನ ಪೋರ್ಟ್ಫೋಲಿಯೊದಿಂದ ರೇಡಿಯನ್ ಬೈಕಿನಲ್ಲಿ ಇದೆ ಎಂಜಿನ್ ಅನ್ನು ಹೊಂದಿದೆ. ನವೀಕರಿಸಿದ ಈ ಬಿಎಸ್-6 ಎಂಜಿನ್ 7,350 ಆರ್‌ಪಿಎಂನಲ್ಲಿ 8.08 ಬಿಹೆಚ್‌ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 8.7 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ ನಾಲ್ಕು-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಇದೇ ಎಂಜಿನ್ ಅನ್ನು ಬಿಎಸ್-6 ವಿಕ್ಟರ್ ಬೈಕಿನಲ್ಲಿ ಅಳವಡಿಸುವ ಸಾಧ್ಯತೆಗಳಿದೆ. ನವೀಕರಿಸಿದ ಎಂಜಿನ್ ಹೊರತುಪಡಿಸಿ, ಇತರ ಮೆಕ್ಯಾನಿಕಲ್ ಅಂಶಗಳು ಹೊಸ ಮಾದರಿಯಲ್ಲಿಯು ಹಾಗೆ ಮುಂದುವರೆಯಲಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಈ ಹೊಸ ಟಿವಿಎಸ್ ವಿಕ್ಟರ್ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ಯುಯಲ್-ಶಾಕ್ ಸೆಟಪ್ ಅನ್ನು ಹೊಂದಿರಲಿದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಬೈಕಿನ ಎರಡು ಕಡೆಗಳಲ್ಲಿ ಡ್ರಮ್ ಬೈಕುಗಳನ್ನು ಅಳವಡಿಸಲಾಗಿದೆ. ಟಾಪ್ ಸ್ಪೆಕ್ ರೂಪಾಂತರದ ಮುಂಭಾಗ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುತ್ತದೆ.

ಮುಂಬರು ಟಿವಿಎಸ್ ವಿಕ್ಟರ್ ಹಿಂದಿನ ಬಿಎಸ್-4 ಮಾದರಿಗಿಂತ ತುಸು ಬೆಲೆ ಹೆಚ್ಚಿರಬಹುದು. ಬಿಎಸ್ 4 ವಿಕ್ಟರ್ ಬೇಸ್ ರೂಪಾಂತರದ ಬೆಲೆಯು ರೂ.54,042ಗಳಾದರೆ. ಟಾಪ್-ಸ್ಪೆಕ್ ಪ್ರೀಮಿಯಂ ಆವೃತ್ತಿಗೆ ರೂ.59,602 ಗಳವರೆಗೆ ಬೆಲೆಯನ್ನು ಹೊಂದಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಟಿವಿಎಸ್ ವಿಕ್ಟರ್ ಬೈಕು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಸ್-6 ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್, ಬಜಾಜ್ ಪ್ಲಾಟಿನಾ 110 ಹೆಚ್-ಗೇರ್ ಮತ್ತು ಬಜಾಜ್ ಸಿಟಿ 100 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಟಿವಿಎಸ್ ಕಂಪನಿಯು ವಿಕ್ಟರ್ ಬೈಕನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗಳಿತ್ತು. ಆದರೆ ಟಿವಿಎಸ್ ಕಂಪನಿಯು ಈ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದೆ. ಟಿವಿಎಸ್ ಕಂಪನಿಯು ತನ್ನ ವಿಕ್ಟರ್ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ.


Click it and Unblock the Notifications








