ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ 2021ರ ಆರ್3 ಬೈಕನ್ನು ಜಪಾನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಹೊಸ ಯಮಹಾ ಆರ್3 ಬೈಕ್ 2021ರ ಜನವರಿ 15ರಂದು ಜಪಾನ್ ನಲ್ಲಿ ಬಿಡುಗಡೆಯಾಗಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಯಮಹಾ ಕಂಪನಿಯು ತನ್ನ ತವರಿನಲ್ಲಿ ವಾರ್ಷಿಕವಾಗಿ 3700 ಹೊಸ ಆರ್3 ಬೈಕುಗಳನ್ನು ಬಿಡುಗಡೆಗೊಳಿಸುವ ಗುರಿಯನ್ನು ಹೊಂದಿದೆ. ಜಪಾನ್ ಮಾರುಕಟ್ಟೆಯಲ್ಲಿ ಈ ಹೊಸ ಯಮಹಾ ಆರ್3 ಬೈಕಿನ ಬೆಲೆಯು ಭಾರತೀಯ ಕರೆನ್ಸಿ ಪ್ರಕಾರ ರೂ.4.89 ಲಕ್ಷಗಳಾಗಿದೆ. ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಲು, 2021ರ ಯಮಹಾ ಆರ್3 ಹೊಸ ಮತ್ತು ಆಕರ್ಷಕ ಸಯಾನ್ ಬಣ್ಣ ಆಯ್ಕೆಯನ್ನು ನೀಡಲಾಗಿದೆ. ಇನ್ನು ಈ ಹೊಸ ಬೈಕಿನಲ್ಲಿ ಬಾಡಿವರ್ಕ್ ಹೆಚ್ಚಿನ ಶೇಕಡಾವಾರು ಪ್ರಮಾಣವು ಸಯಾನ್ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

2021ರ ಯಮಹಾ ಆರ್3 ಬೈಕ್ ಹೊಸ ಗ್ರಾಫಿಕ್ಸ್ ಬೈಕಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ. ಇನ್ನು ಸಯಾನ್ ಬಣ್ಣ ಆಯ್ಕೆಯ ಹೊರತಾಗಿ, 2021ರ ಯಮಹಾ ಆರ್3 ಬೈಕ್ ನವೀಕರಿಸಿದ ಮ್ಯಾಟ್ ಬ್ಲ್ಯಾಕ್ ಶೇಡ್ ಅನ್ನು ಒಳಗೊಂಡಿದೆ.

MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಇನ್ನು 2021ರ ಯಮಹಾ ಆರ್3 ಬೈಕ್ ಡೀಪ್ ಪರ್ಪ್ಲಿಷ್ ಬ್ಲೂ ಮೆಟಾಲಿಕ್ ಬಣ್ಣದ ಆಯ್ಕೆಯೂ ಇದೆ. ಇನ್ನು ಹೊಸ ಯಮಹಾ ಆರ್3 ಬೈಕ್ ಆಕರ್ಷಕ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಇನ್ನು ಬೈಕಿನ ಹೃದಯ ಭಾಗ ಎಂದೇ ಕರೆಯುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಯಮಹಾ ಆರ್3 ಬೈಕಿನಲ್ಲಿ 320 ಸಿಸಿ ಪ್ಯಾರಲಲ್-ಟ್ವಿನ್ ಲಿಕ್ವೀಡ್ ಎಂಜಿನ್ ಅನ್ನು ಅಳವಡಿಸಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಈ ಎಂಜಿನ್ 10,750 ಆರ್‌ಪಿಎಂನಲ್ಲಿ 42 ಬಿಹೆಚ್‍ಪಿ ಪವರ್ ಮತ್ತು 9,000 ಆರ್‌ಪಿಎಂನಲ್ಲಿ 29 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಇನ್ನು ಯಮಹಾ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ವೈಝಡ್ಎಫ್-ಆರ್6 ಬೈಕನ್ನು ಸ್ಥಗಿತಗೊಳಿಸಲಾಗಿದೆ. ಯಮಹಾ ವೈಝಡ್ಎಫ್-ಆರ್6 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವು ವರ್ಷಗಳ ಕಾಲ ಸೂಪರ್‌ಸ್ಪೋರ್ಟ್ ವಿಭಾಗದಲ್ಲಿ ಪಾರುಪತ್ಯ ಸಾಧಿಸಿದ ಬೈಕ್ ಇದಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಯಮಹಾ ವೈಝಡ್ಎಫ್-ಆರ್6 ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸೂಪರ್‌ಸ್ಪೋರ್ಟ್ ಬೈಕ್ ಆಗಿದೆ. ಹಲವು ವರ್ಷಗಳ ಕಾಲ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಂಚಿದ ಈ ಸೂಪರ್‌ಸ್ಪೋರ್ಟ್ ಬೈಕ್ ಇದೀಗ ಇತಿಹಾಸ ಪುಟ ಸೇರಿದೆ ಇತ್ತೀಚೆಗೆ ಟ್ರಯಂಫ್ ಕೂಡ ಡೇಟೋನಾ 675 ಸೂಪರ್‌ಸ್ಪೋರ್ಟ್ ಬೈಕನ್ನು ಸ್ಥಗಿತಗೊಳಿಸಿತ್ತು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಇದೀಗ ಯಮಹಾ ಕಂಪನಿಯು ಕೂಡ ವೈಝಡ್ಎಫ್-ಆರ್ ಬೈಕನ್ನು ನವೀಕರಿಸುವುದಿಲ್ಲವೆಂದು ಹೇಳಿದೆ. ಆದರೆ ಯಮಹಾ ಕಂಪನಿಯು ವೈಝಡ್ಎಫ್-ಆರ್6 ಬೈಕನ್ನು ಟ್ರ್ಯಾಕ್-ಓನ್ಲಿ ಮಾದರಿಯಾಗಿ ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿಕೊಂಡಿದೆ. ಕಂಪನಿಯ ಪ್ರಕಾರ, ಈ ವೈಝಡ್ಎಫ್-ಆರ್6 ಮಿಡಲ್ ವೇಟ್ ಸೂಪರ್‌ಸ್ಪೋರ್ಟ್ ಅನ್ನು ಅಪ್‌ಗ್ರೇಡ್ ಮಾಡಲು ಸಂಬಂಧಿಸಿದ ವೆಚ್ಚ ತುಂಬಾ ಹೆಚ್ಚಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಈ ವಿಭಾಗದಲ್ಲಿ ಒಟ್ಟಾರೆ ಮಾರಾಟವು ದೊಡ್ಡ ಪ್ರಮಾಣದಲ್ಲಿ ಕುಸಿತವನ್ನು ಕಂಡಿದೆ. ಏಕೆಂದರೆ ಸೂಪರ್‌ಸ್ಪೋರ್ಟ್ ವಿಭಾಗದ ಬೈಕುಗಳು ದುಬಾರಿ ಬೆಲೆಯನ್ನು ಹೊಂದಿದೆ. 600 ಸಿಸಿ ಸೂಪರ್‌ಸ್ಪೋರ್ಟ್‌ಗಳ ಅಭಿವೃದ್ಧಿ ವೆಚ್ಚಗಳು ಅದರ ಲೀಟರ್-ಕ್ಲಾಸ್ ಮಾದರಿಗಳ ವೆಚ್ಚವನ್ನು ಹೋಲುತ್ತವೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಆರ್3 ತನ್ನ ವಿಭಾಗದಲ್ಲಿ ಅತ್ಯುತ್ತಮ ಬೈಕುಗಳಲ್ಲಿ ಒಂದಾಗಿದೆ. ಇದರ ಸ್ಪೋರ್ಟಿ ಲುಕ್ ನೊಂದಿಗೆ ಬಹಳ ಜನಪ್ರಿಯವಾಗಿತ್ತು. ಕೆಲವು ಕಾರಣಗಳಿಂದಾಗಿ, ಯಮಹಾ ನವೀಕರಿಸಿದ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ತರಲಿಲ್ಲ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣವಾಯ್ತು ಹೊಸ ಯಮಹಾ ಆರ್3 ಬೈಕ್

ಅಲ್ಲದೇ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆಯಲ್ಲಿ ಯಮಹಾ ಕಂಪನಿಯು ಭಾರತದಲ್ಲಿ ಆರ್3 ಮಾದರಿಯನ್ನು ಸ್ಥಗಿತಗೊಳಿಸಿದರು. ಇನ್ನು ಈ 2021ರ ಆರ್3 ಬೈಕನ್ನು ಯಮಹಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಯಮಹಾ yamaha
English summary
2021 Yamaha R3 Revealed For Japanese Market. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X