ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆಗೊಳಿಸಿದ ಕ್ಸಿಯೋಮಿ
ಮೊಬೈಲ್ ಫೋನ್ ತಯಾರಿಕಾ ಕಂಪನಿಯಾದ ಕ್ಸಿಯೋಮಿ, ಮೊಬೈಲ್ ಉತ್ಪಾದನೆ ಹೊರತಾಗಿ ಬೇರೆ ಅಗತ್ಯ ವಸ್ತುಗಳನ್ನು ಸಹ ತಯಾರಿಸುತ್ತದೆ. ಕ್ಸಿಯೋಮಿ ಕಂಪನಿಯು ಮಾಸ್ಕ್ ಹಾಗೂ ಏರ್ ಫಿಲ್ಟರ್ ಗಳನ್ನು ಸಹ ತಯಾರಿಸಿ, ಮಾರಾಟ ಮಾಡುತ್ತದೆ.

ಇದರ ಜೊತೆಗೆ ಇಯರ್‌ಫೋನ್, ಬ್ಲೂಟೂತ್ ಸ್ಪೀಕರ್, ಸ್ಮಾರ್ಟ್ ಪ್ಯಾಂಟ್, ವಾಚ್, ಸೂಟ್‌ಕೇಸ್, ಸಿಸಿಟಿವಿ ಕ್ಯಾಮೆರಾ ಹಾಗೂ ವೈ-ಫೈ ಎಕ್ಸ್ ಟೆಂಡರ್ ಸೇರಿದಂತೆ ಹಲವು ಸಾಧನಗಳನ್ನು ತಯಾರಿಸಿ ವಿಶ್ವದ ವಿವಿಧ ದೇಶಗಳಲ್ಲಿ ಮಾರಾಟ ಮಾಡುತ್ತದೆ. ಕ್ಸಿಯೋಮಿ ಕಂಪನಿಯು ಇತ್ತೀಚೆಗೆ ತನ್ನ ಮಾರಾಟವನ್ನು ವಿಸ್ತರಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನೆಯನ್ನು ಆರಂಭಿಸಿದೆ.

ಉತ್ಪಾದನೆಯಾದ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಸದ್ಯಕ್ಕೆ ಚೀನಾದಲ್ಲಿ ಮಾರಾಟ ಮಾಡಲಾಗುತ್ತಿದೆ. ಕಂಪನಿಯ ಇತರ ಉತ್ಪನ್ನಗಳಿಗಿಂತ ಭಿನ್ನವಾಗಿ, ಈ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆಗೊಳಿಸಲಾಗಿದೆ. ಶೀಘ್ರದಲ್ಲೇ ಈ ಎಲೆಕ್ಟ್ರಿಕ್ ಮೊಪೆಡ್ ಗಳನ್ನು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಕ್ಸಿಯೋಮಿ ಕಂಪನಿಯು ಎಲೆಕ್ಟ್ರಿಕ್ ಮೊಪೆಡ್ ಗಳನ್ನು ಚೀನಾದಲ್ಲಿ ಬಿಡುಗಡೆಗೊಳಿಸಿದ ಮೊದಲ ಚೀನೀ ಕಂಪನಿಯಾಗಿದೆ. ಎ1 ಹಾಗೂ ಎ1 ಪ್ರೊ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಚೀನಾದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಈ ಮೊಪೆಡ್‌ಗಳು ಗಾತ್ರದಲ್ಲಿ ಚಿಕ್ಕದಾಗಿವೆ. ನಗರ ಪ್ರದೇಶದ ಬಳಕೆಗಾಗಿ ಇವುಗಳನ್ನು ತಯಾರಿಸಲಾಗಿದೆ. ಈ ಮೊಪೆಡ್ ಗಳಲ್ಲಿ 16 ಇಂಚಿನ ವ್ಹೀಲ್ ಗಳನ್ನು ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಮೋಟರ್ ಅನ್ನು ಸೀಟಿನ ಕೆಳಗೆ ಜೋಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟರ್ 750 ವ್ಯಾಟ್ ಸಾಮರ್ಥ್ಯವನ್ನು ಹೊಂದಿದೆ.

ನಗರದ ಬಳಕೆಗಾಗಿ ಅಭಿವೃದ್ಧಿಪಡಿಸಲಾಗಿರುವ ಈ ಎಲೆಕ್ಟ್ರಿಕ್ ಮೊಪೆಡ್ ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಮೊಪೆಡ್ ನಲ್ಲಿ ಒಂದು ಸೀಟ್ ಅನ್ನು ಮಾತ್ರ ಅಳವಡಿಸಲಾಗಿದೆ. ಈ ಎರಡು ಮಾದರಿಯ ಮೊಪೆಡ್ ಗಳಲ್ಲಿ ಎರಡು ಬೇರೆ ಬೇರೆ ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ಎ1 ಮೊಪೆಡ್, ಮೊಬಿಟೆಲ್ 768 ವ್ಯಾ ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 60 ಕಿ.ಮೀಗಳವರೆಗೆ ಚಲಿಸುತ್ತದೆ. ಎ1 ಪ್ರೊ ಮೊಪೆಡ್ 960ವ್ಯಾ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಪೂರ್ತಿಯಾಗಿ ಚಾರ್ಜ್ ಮಾಡಿದ 70 ಕಿ.ಮೀ.ವರೆಗೆ ಚಲಿಸುತ್ತದೆ. ಈ ಮೊಪೆಡ್ ಗಳಲ್ಲಿ ಪೆಡಲ್‌ಗಳನ್ನು ಸಹ ನೀಡಲಾಗಿದೆ. ಇದರಿಂದಾಗಿ ಈ ಮೊಪೆಡ್ ಗಳನ್ನು ಸೈಕಲ್ ಹಾಗೂ ಎಲೆಕ್ಟ್ರಿಕ್ ಮೊಪೆಡ್‌ಗಳಾಗಿ ಬಳಸಬಹುದು.

ಈ ಮೊಬಿಟೆಲ್ ಬ್ಯಾಟರಿಗಳಿಗೆ ಪ್ರತ್ಯೇಕ ಚಾರ್ಜರ್ ನೀಡಲಾಗುತ್ತದೆ. ಇದರಿಂದಾಗಿ ಬ್ಯಾಟರಿ ಖಾಲಿಯಾದ ನಂತರ, ನಾವು ಅದನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸುರಕ್ಷಿತವಾಗಿ ಹೊರ ತೆಗೆದು ರೀಚಾರ್ಜ್ ಮಾಡಬಹುದು.

ಎ 1 ಹಾಗೂ ಎ 1 ಪ್ರೊ ಎಲೆಕ್ಟ್ರಿಕ್ ಮೊಪೆಡ್ ಗಳು ಟಿಎಫ್ ಟಿ ಕಲರ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಹಾಗೂ ಎಲ್ಇಡಿ ಲೈಟಿಂಗ್ ಗಳನ್ನು ಹೊಂದಿವೆ. ಎ 1 ಪ್ರೊ ಟಚ್ ಸ್ಕ್ರೀನ್ ವಾಯ್ಸ್ ಕಂಟ್ರೋಲರ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮೊಪೆಡ್‌ಗಳಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಕ್ಯಾಮೆರಾಗಳನ್ನು ಸಹ ನೀಡಲಾಗಿದೆ.

ಅನೇಕ ಫೀಚರ್ ಗಳನ್ನು ಹೊಂದಿರುವ ಈ ಎಲೆಕ್ಟ್ರಿಕ್ ಮೊಪೆಡ್‌ಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುಲಾಗುತ್ತಿದೆ. ಈ ಎಲೆಕ್ಟ್ರಿಕ್ ಮೊಪೆಡ್ ಗಳ ಆರಂಭಿಕ ಬೆಲೆ ಭಾರತದ ರೂಪಾಯಿ ಮೌಲ್ಯದಲ್ಲಿ 31,633ಗಳಾಗುತ್ತದೆ. ಈ ಬೆಲೆಯು ಬಿಎಸ್ 6 ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ಗಿಂತ ಕಡಿಮೆಯಾಗಿದೆ. ಭಾರತದಲ್ಲಿ ಟಿವಿಎಸ್ ಎಕ್ಸ್‌ಎಲ್ 100 ಬೆಲೆ ರೂ. 42,283ಗಳಾಗಿದೆ.


Click it and Unblock the Notifications








