ಫ್ರಂಟ್ ಲೈನ್ ವಾರಿಯರ್ಸ್‌ಗೆ ಸ್ಪೆಷಲ್ ಆಫರ್ ನೀಡಿದ ಯಮಹಾ ಇಂಡಿಯಾ
ಕರೋನಾ ಮಾಹಾಮಾರಿ ವಿರುದ್ದ ನಿರಂತವಾಗಿ ಹೋರಾಡುತ್ತಿರುವ ಫ್ರಂಟ್ ಲೈನ್ ವಾರಿಯರ್ಸ್‌ಗೆ ಯಮಹಾ ಇಂಡಿಯಾ ಕಂಪನಿಯು ಹಲವು ಆಫರ್‌ಗಳನ್ನು ಘೋಷಣೆ ಮಾಡಿದ್ದು, ದ್ವಿಚಕ್ರ ವಾಹನ ಖರೀದಿ ಮೇಲೆ ವಿಶೇಷ ಲೋನ್ ಆಫರ್ ನೀಡುತ್ತಿದೆ.

ದ್ವಿಚಕ್ರ ವಾಹನಗಳ ಖರೀದಿ ಯೋಜನೆಯಲ್ಲಿರುವ ಡಾಕ್ಟರ್ಸ್, ಹೆಲ್ತ್ ಕೇರ್ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೆ ಆಫರ್ ಲಭ್ಯವಿದ್ದು, ದ್ವಿಚಕ್ರ ವಾಹನ ಖರೀದಿಸಿದ ಮೊದಲ ಮೂರು ತಿಂಗಳು ಶೇ.50 ರಷ್ಟು ಇಎಂಐ ದರ ನಿಗದಿಯೊಂದಿಗೆ ಸಾಲ ಮರುಪಾವತಿಗೆ ಸಹಕಾರಿಯಾಗುವಂತೆ ಹೊಸ ಲೋನ್ ಆಫರ್ ನೀಡಲಾಗುತ್ತಿದೆ.

ಹೊಸ ಲೋನ್ ಆಫರ್‌ನಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ದ್ವಿಚಕ್ರ ವಾಹನ ಖರೀದಿಯನ್ನು ಸುಲಭವಾಗಿಸಲಿದ್ದು, ಹೊಸ ವಾಹನ ಖರೀದಿಸಿದ ಮೂರು ತಿಂಗಳ ನಂತರ ಸಾಮಾನ್ಯ ದರದಲ್ಲೇ ಇಎಂಐ ಮರುಪಾವತಿ ಮಾಡಬೇಕಾಗುತ್ತದೆ

ಜೊತೆಗೆ ದೇಶಾದ್ಯಂತ ತನ್ನ ಪ್ರಮುಖ ಡೀಲರ್ಸ್ ಪಾರ್ಟನರ್ಸ್ ಜೊತೆಗೂಡಿ ಫ್ರಂಟ್ ಲೈನ್ ವಾರಿಯರ್ಸ್ ದ್ವಿಚಕ್ರ ವಾಹನಗಳಿಗೂ ಉಚಿತ ಸರ್ವೀಸ್‌ಗೆ ಚಾಲನೆ ನೀಡಿದ್ದು, ಆಸಕ್ತ ಕರೋನಾ ವಾರಿಯರ್ಸ್ ಯಾವುದೇ ಶುಲ್ಕವಿಲ್ಲದೆ ಈ ಸೇವೆಯನ್ನು ಪಡೆಯಬಹುದಾಗಿದೆ.

ಸುಮಾರು 14 ತಾಂತ್ರಿಕ ಅಂಶಗಳ ಮೇಲೆ ಉಚಿತ ಸೇವೆ ನೀಡುತ್ತಿರುವ ಯಮಹಾ ಕಂಪನಿಯು ಫ್ರಂಟ್ ಲೈನ್ ವಾರಿಯರ್ಸ್ ಕಾರ್ಯಕ್ಕೆ ಈ ಮೂಲಕ ಧನ್ಯವಾದ ಅರ್ಪಿಸುತ್ತಿದ್ದು, ಕರೋನಾ ವಿರುದ್ಧ ಹೋರಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಣಕಾಸಿನ ನೆರವು ನೀಡಿದೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಯಮಹಾ ಇಂಡಿಯಾ ಕಂಪನಿಯು ವಿವಿಧ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ರೂ.61.50 ಲಕ್ಷ ದೇಣಿಯನ್ನು ನೀಡಿದ್ದು, ಇದೀಗ ಕರೋನಾ ವಾರಿಯರ್ಸ್‌ಗೆ ಉಚಿತವಾಗಿ ಬೈಕ್ ಸರ್ವೀಸ್ ಸೇವೆಯನ್ನು ನೀಡುತ್ತಿದೆ.
MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಯಮಹಾ ಇಂಡಿಯಾ ಕಂಪನಿಯು ಕೂಡಾ ರೂ.61.50 ಲಕ್ಷ ದೇಣಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಹಾಯಹಸ್ತ ಚಾಚಿದೆ.

ಯಹಾಮ ಕಂಪನಿಯು ತನ್ನ ಉದ್ಯೋಗಿಗಳ ಒಂದು ದಿನದ ವೇತನವನ್ನು ಸೇರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ದೇಣಿಗೆ ನೀಡಿದ್ದು, ರೂ.61.50 ಲಕ್ಷ ದೇಣಿಗೆಯಲ್ಲಿ ಉತ್ತರಪ್ರದೇಶ ಸರ್ಕಾರಕ್ಕೆ ರೂ.25 ಲಕ್ಷ, ತಮಿಳುನಾಡು ಸರ್ಕಾರಕ್ಕೆ ರೂ.25 ಲಕ್ಷ ಮತ್ತು ರೂ.11.50 ಲಕ್ಷ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ.
MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಬೈಕ್ ಉತ್ಪಾದನಾ ಘಟಕಗಳನ್ನು ಹೊಂದಿರುವುದರಿಂದ ಆ ರಾಜ್ಯಗಳಿಗೆ ತಲಾ ರೂ. 25 ಲಕ್ಷ ದೇಣಿಗೆ ನೀಡಿರುವ ಯಮಹಾ ಕಂಪನಿಯು ಕೇಂದ್ರ ಸರ್ಕಾರಕ್ಕೆ ರೂ. 11.50 ಲಕ್ಷ ದೇಣಿಗೆ ನೀಡಿ ವೈರಸ್ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬಿದೆ.


Click it and Unblock the Notifications