ದುಬಾರಿಯಾಯ್ತು 2020ರ ಯಮಹಾ ಫಾಸಿನೊ 125 ಎಫ್‍ಐ ಸ್ಕೂಟರ್
ಯಮಹಾ ಮೋಟಾರ್ಸ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ 2020ರ ಫಾಸಿನೊ 125 ಎಫ್‍ಐ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ 2020ರ ಫಾಸಿನೊ 125 ಎಫ್‍ಐ ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದೆ.

ಈ ಸ್ಕೂಟರ್ ಯಮಹಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ 125ಸಿಸಿ ಸ್ಕೂಟರ್ ಆಗಿದೆ. ಈ ಸ್ಕೂಟರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.66,430ಗಳಾಗಿದೆ. ಆದರೆ ಈ ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಬಳಿಕ ಇದರ ಬೆಲೆಯು ರೂ.67,230 ಗಳಾಗಿದೆ. ಈ ಸ್ಕೂಟರ್ ಅನ್ನು ಮಾರುಕಟ್ಟೆಯಲ್ಲಿರುವ 113 ಸಿಸಿ ಯಮಹಾ ಫಾಸಿನೊ ಸ್ಕೂಟರಿನ ಬದಲಿಗೆ ಬಿಡುಗಡೆಗೊಳಿಸಿತ್ತು. ಈ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

2020ರ ಯಮಹಾ ಫಾಸಿನೊ 125 ಎಫ್‍ಐ ಸ್ಕೂಟರಿನಲ್ಲಿ 125 ಸಿಸಿಯ ಬ್ಲೂ ಕೋರ್ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಹಾಗೂ 9.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಈ ಸ್ಕೂಟರ್ ಹಿಂದಿನ ಸ್ಕೂಟರಿಗಿಂತ 30% ಹೆಚ್ಚು ಪವರ್ ಉತ್ಪಾದಿಸುತ್ತದೆ. ಇದರ ಜೊತೆಗೆ ಹೊಸ ಫಾಸಿನೊ 125 ಸ್ಕೂಟರ್ ಹಿಂದಿನ ಸ್ಕೂಟರಿಗಿಂತ 16% ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ.

ಯಮಹಾ ಕಂಪನಿಯು ಹೊಸ ಸ್ಕೂಟರಿನಲ್ಲಿರುವ ಚಾಸೀಸ್ ಹಾಗೂ ಫ್ರೇಂಗಳನ್ನು ಅಪ್‍ಡೇಟ್‍ಗೊಳಿಸಿದೆ. ಇದರಿಂದಾಗಿ ಹೊಸ ಸ್ಕೂಟರಿನ ತೂಕವು ಹಳೆಯ ಸ್ಕೂಟರಿಗಿಂತ ಕಡಿಮೆಯಾಗಿದೆ. ಹಳೆಯ ಸ್ಕೂಟರ್ 103 ಕೆ.ಜಿ ತೂಕವನ್ನು ಹೊಂದಿತ್ತು. ಹೊಸ ಸ್ಕೂಟರ್ 99 ಕೆ.ಜಿ ತೂಕವನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಯಮಹಾ ಕಂಪನಿಯು 2020ರ ಫಾಸಿನೊ 125 ಸ್ಕೂಟರಿನಲ್ಲಿ ಹಲವಾರು ಹೊಸ ಫೀಚರ್‍ಗಳನ್ನು ಅಳವಡಿಸಿದೆ. ಇವುಗಳಲ್ಲಿ 12 ಇಂಚಿನ ಅಲಾಯ್ ವ್ಹೀಲ್, ಮಲ್ಟಿ ಫಂಕ್ಷನ್ಲ್ ಕೀ, ಯುಎಸ್‍ಬಿ ಚಾರ್ಜಿಂಗ್, ಫೋಲ್ಡೆಬಲ್ ಹುಕ್, ಸೈಡ್ ಸ್ಟಾಂಡ್ ಕಟ್ ಆಫ್ ಸ್ವಿಚ್ ಸೇರಿವೆ.

ಸ್ಕೂಟರ್‍ನಲ್ಲಿ ಸಿಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ. ಇದರ ಜೊತೆಗೆ ಟ್ರಾಫಿಕ್ ಮೋಡ್‍ನಲ್ಲಿ ಸ್ಟಾರ್ಟ್ ಸ್ಟಾಪ್ ಸಿಸ್ಟಂ ನೀಡಲಾಗಿದ್ದು, ನಗರದ ಟ್ರಾಫಿಕ್ ದಟ್ಟಣೆಯನ್ನು ನಿಭಾಯಿಸಲು ಅನುಕೂಲವಾಗಲಿದೆ.
MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಯಮಹಾ ಕಂಪನಿಯು 2020ರ ಫಾಸಿನೊ 125 ಸ್ಕೂಟರ್ ಅನ್ನು ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಆದರೆ ಟಾಪ್ ಎಂಡ್ ಮಾದರಿಗಳನ್ನು ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

2020ರ ಯಮಹಾ ಫಾಸಿನೊ 125 ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಟಿವಿಎಸ್ ಎನ್‍ಟಾರ್ಕ್ 125, ಸುಜುಕಿ ಆಕ್ಸೆಸ್ 125, ಹೋಂಡಾ ಗ್ರೇಜಿಯಾ ಹಾಗೂ ಹೋಂಡಾ ಆಕ್ಟಿವಾ 125 ಸ್ಕೂಟರ್‍ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications