ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ ಇಂಡಿಯಾ

ಕರೋನಾ ವೈರಸ್ ಮಾಹಾಮಾರಿಯು ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕರೋನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಹೀಗಾಗಿ ಕರೋನಾ ವಾರಿಯರ್ಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಯಮಹಾ ಇಂಡಿಯಾ ಕಂಪನಿಯು ಕರೋನಾ ವಾರಿಯರ್ಸ್ ದ್ವಿಚಕ್ರ ವಾಹನಗಳಿಗೆ ಉಚಿತ ಸರ್ವೀಸ್ ಘೋಷಿಸಿದೆ.

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ದೇಶಾದ್ಯಂತ ತನ್ನ ಪ್ರಮುಖ ಡೀಲರ್ಸ್ ಪಾರ್ಟನರ್ ಜೊತೆಗೂಡಿ ಉಚಿತ ಸರ್ವೀಸ್‌ಗೆ ಚಾಲನೆ ನೀಡಿದ್ದು, ಆಸಕ್ತ ಕರೋನಾ ವಾರಿಯರ್ಸ್ ಯಾವುದೇ ಶುಲ್ಕವಿಲ್ಲದೆ ಸೇವೆ ಪಡೆಯಬಹುದಾಗಿದೆ. ಇದಲ್ಲದೇ ಯಮಹಾ ಕಂಪನಿಯು ಕರೋನಾ ವಿರುದ್ಧ ಹೋರಾಡುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಣಕಾಸಿನ ನೆರವು ನೀಡಿದೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ಯಮಹಾ ಇಂಡಿಯಾ ಕಂಪನಿಯು ವಿವಿಧ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ರೂ.61.50 ಲಕ್ಷ ದೇಣಿಯನ್ನು ನೀಡಿದ್ದು, ಇದೀಗ ಕರೋನಾ ವಾರಿಯರ್ಸ್‌ಗೆ ಉಚಿತವಾಗಿ ಬೈಕ್ ಸರ್ವೀಸ್ ಸೇವೆಯನ್ನು ನೀಡುತ್ತಿದೆ.

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹಣಕಾಸಿನ ನೆರವು ಘೋಷಣೆ ಮಾಡಿರುವುದಲ್ಲದೇ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಯಮಹಾ ಇಂಡಿಯಾ ಕಂಪನಿಯು ಕೂಡಾ ರೂ.61.50 ಲಕ್ಷ ದೇಣಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಹಾಯಹಸ್ತ ಚಾಚಿದೆ.

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ಯಹಾಮ ಕಂಪನಿಯು ತನ್ನ ಉದ್ಯೋಗಿಗಳ ಒಂದು ದಿನದ ವೇತನವನ್ನು ಸೇರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ದೇಣಿಗೆ ನೀಡಿದ್ದು, ರೂ.61.50 ಲಕ್ಷ ದೇಣಿಗೆಯಲ್ಲಿ ಉತ್ತರಪ್ರದೇಶ ಸರ್ಕಾರಕ್ಕೆ ರೂ.25 ಲಕ್ಷ, ತಮಿಳುನಾಡು ಸರ್ಕಾರಕ್ಕೆ ರೂ.25 ಲಕ್ಷ ಮತ್ತು ರೂ.11.50 ಲಕ್ಷ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ.

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಬೈಕ್ ಉತ್ಪಾದನಾ ಘಟಕಗಳನ್ನು ಹೊಂದಿರುವುದರಿಂದ ಆ ರಾಜ್ಯಗಳಿಗೆ ತಲಾ ರೂ. 25 ಲಕ್ಷ ದೇಣಿಗೆ ನೀಡಿರುವ ಯಮಹಾ ಕಂಪನಿಯು ಕೇಂದ್ರ ಸರ್ಕಾರಕ್ಕೆ ರೂ. 11.50 ಲಕ್ಷ ದೇಣಿಗೆ ನೀಡಿ ವೈರಸ್ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ಇನ್ನು ಮಹಾಮಾರಿ ಕರೋನಾ ವೈರಸ್‌ನಿಂದಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆರ್ಥಿಕ ಪರಿಸ್ಥಿತಿಯು ಶೋಚನೀಯ ಸ್ಥಿತಿ ತಲುಪಿದ್ದು, ಆಟೋ ಉತ್ಪಾದನಾ ಕಂಪನಿಗಳು ತಮ್ಮ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆಗೆ ಕೈಜೋಡಿಸುವ ಮೂಲಕ ದೇಣಿಗೆಯ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಸಹ ಒದಗಿಸುತ್ತಿವೆ.

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕರೋನಾ ವಾರಿಯರ್ಸ್‌ಗೆ ಹೊಸ ಆಫರ್ ನೀಡಿದ ಯಮಹಾ

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಚಾಲನೆ ನೀಡುವ ಮೂಲಕ ಸರ್ಕಾರಗಳಿಗೆ ಶಕ್ತಿ ತುಂಬಿವೆ.

Article Published On: Wednesday, June 10, 2020, 19:45 [IST]
English summary
Yamaha Launches Service Offers For Corona Workers. Read in Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+