ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಯಮಹಾ ಕಂಪನಿಯು ಕಳೆದ ವರ್ಷ ಇಂಡೋನೇಷ್ಯಾದಲ್ಲಿ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕನ್ನು ಬಿಡುಗಡೆಗೊಳಿಸಿತ್ತು, ಇಂಡೋನೇಷ್ಯಾದಲ್ಲಿ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ.

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಯಮಹಾ ಡಬ್ಲ್ಯುಆರ್ 155 ಆರ್ ಆಫ್-ರೋಡ್ ಬೈಕಿನಲ್ಲಿ ವಿ3.0 ಎಂಜಿನ್ ಅನ್ನು ಅಳವಡಿಸಲಾಗಿದೆ. ಝೀಗ್‍ವ್ಹೀಲ್ ಪ್ರಕಾರ ಡಬ್ಲ್ಯುಆರ್ 155 ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಯಮಹಾ ಡಬ್ಲ್ಯುಆರ್ 155 ಆರ್ ಬೈಕನ್ನು ಮುಂದಿನ ವರ್ಷ ಬಿಡುಗಡೆಗೊಳಿಸಬಹುದು. ಈ ಬೈಕಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಯಮಹಾ ಡಬ್ಲ್ಯುಆರ್ 155 ಆರ್ ಬೈಕಿನಲ್ಲಿ 155 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 16 ಬಿಹೆಚ್‍ಪಿ ಪವರ್ ಮತ್ತು 14.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಇದರೊಂದಿಗೆ ಈ ಬೈಕಿನಲ್ಲಿ ವಿ3.0 ಎಂಜಿನ್ ಅನ್ನು ಕೂಡ ಹೊಂದಿದೆ. ಈ ಎಂಜಿನ್ 18ಬಿಹೆಚ್‍ಪಿ ಪವರ್ ಮತ್ತು 14.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಯಮಹಾ ಡಬ್ಲ್ಯುಆರ್ 155 ಆರ್ ಬೈಕ್ ಸಂಪೂರ್ಣವಾಗಿ ವಿಭಿನ್ನವಾದ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಬೈಕ್ 18 ಇಂಚಿನ ರೇರ್ ವ್ಹೀಲ್‍ಗಳೊಂದಿಗೆ ಸೆಮಿ-ಡಬಲ್ ಕ್ರೆಡಲ್ ಫ್ರೇಮ್ ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಈ ಬೈಕ್ 41 ಎಂಎಂ ಫ್ರಂಟ್ ಫೋರ್ಕ್ಸ್ ಮತ್ತು ಪ್ರಿಲೋಡ್-ಅಡ್ಜೆಸ್ಟೆಬಲ್ ಗ್ಯಾಸ್-ಚಾರ್ಜ್ಡ್ ರೇರ್ ಮೊನೊ-ಶಾಕ್ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಈ ಬೈಕಿನ 240 ಎಂಎಂ ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ.

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಅಂತರರಾಷ್ಟ್ರೀಯ-ಸ್ಪೆಕ್ ಮಾದರಿಯು ಎಬಿಎಸ್ ಅನ್ನು ಹೊಂದಿಲ್ಲ. ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಬೈಕಿನಲ್ಲಿ ಸಿಂಗಲ್ ಚಾನೆಲ್ ಯುನಿಟ್ ಅನ್ನು ಹೊಂದಿರಲಿದೆ. ಯಮಹಾ ಡಬ್ಲ್ಯೂಆರ್ 155 ಆರ್ 888 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇದು ತುಸು ಅದಿಕ ಎತ್ತರವಾಗಿದೆ. ಈ ಬೈಕಿನಲ್ಲಿ 8.1-ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಈ ಬೈಕ್ 245 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಹೊಂದಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಡಬ್ಲ್ಯೂಆರ್ 155 ಆರ್ ಬೈಕ್ ಬಿಡುಗಡೆಯಾದ ಬಳಿಕ ಹೀರೋ ಎಕ್ಸ್‌ಪಲ್ಸ್ 200 ಮತ್ತು ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಬೈಕಿಗೆ ಪೈಪೋಟಿ ನೀಡಬಹುದು. ಈ ಬೈಕ್ ಹೀರೋ ಎಕ್ಸ್‌ಪಲ್ಸ್ 200 ಬೈಕ್ ಗಿಂತ ಸ್ವಲ್ಪ ಹೆಚ್ಚಿನ ಪವರ್ ಮತ್ತು ಹಿಮಾಲಯನ್ ಬೈಕ್ ಗಿಂತ ತೂಕ ಹೆಚ್ಚಿರುತ್ತದೆ.

ಭಾರತದ ಬಿಡುಗಡೆಯಾಗಲಿದೆ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಆಫ್ ರೋಡ್ ಬೈಕುಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಭಾರತದಲ್ಲಿ ಆಫ್ ರೋಡ್ ಬೈಕ್ ಪ್ರಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯಮಹಾ ಡಬ್ಲ್ಯುಆರ್ 155 ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Most Read Articles

Kannada
Read more on ಯಮಹಾ yamaha
English summary
Yamaha Might Launch The WR 155R Off-Roader In India Next Year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X