ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ
ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಯಮಹಾ 2020ರ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 60,176 ವಾಹನಗಳನ್ನು ಮಾರಾಟ ಮಾಡಿದೆ.

ಈ ಪ್ರಮಾಣವು 2019ರ ಅಕ್ಟೋಬರ್ ತಿಂಗಳಿಗಿಂತ 31%ನಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಯಮಹಾ ಕಂಪನಿಯು 46,082 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಯಮಹಾ ಕಂಪನಿಯು ಕಳೆದ 4 ತಿಂಗಳಿನಿಂದ ಮಾರಾಟದಲ್ಲಿ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ.

2019ರ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಯಮಹಾ ಕಂಪನಿಯ ಮಾರಾಟವು 4.3%ನಷ್ಟು ಏರಿಕೆಯಾಗಿದೆ. ಆಗಸ್ಟ್ ತಿಂಗಳಿನಲ್ಲಿ 14.8% ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ 17%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಜಾರಿಯಾದ ಲಾಕ್ ಡೌನ್ ನಂತರ ಸುಮಾರು ಎರಡು ತಿಂಗಳ ಕಾಲ ಎಲ್ಲಾ ಕಂಪನಿಯ ಮಾರಾಟ ಸ್ಥಗಿತವಾಗಿತ್ತು. ಲಾಕ್ ಡೌನ್ ನಂತರ ಯಮಹಾ ಕಂಪನಿಯ ಮಾರಾಟವು ಚೇತರಿಕೆಯನ್ನು ಕಾಣುತ್ತಿದೆ.
| ತಿಂಗಳು | 2019 | 2020 | ಬೆಳವಣಿಗೆ (%) |
| ಜುಲೈ | 47918 | 49989 | 4.3 |
| ಆಗಸ್ಟ್ | 52706 | 60505 | 14.8 |
| ಸೆಪ್ಟೆಂಬರ್ | 53727 | 63052 | 17 |
| ಅಕ್ಟೋಬರ್ | 46082 | 60176 | 31 |

ಯಮಹಾ ಕಂಪನಿಯು ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ 2,876 ಯೂನಿಟ್ ವಾಹನಗಳನ್ನು ಕಡಿಮೆ ಮಾರಾಟ ಮಾಡಿದೆ. ಈ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಯಮಹಾ ಕಂಪನಿಯು ತನ್ನ ವಾಹನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಹಣಕಾಸು ಕೊಡುಗೆಗಳಲ್ಲಿ ಕಡಿಮೆ ಇಎಂಐ ಯೋಜನೆ ಸೇರಿದಂತೆ ಹಲವು ವಿಧದ ಪಾವತಿ ಆಯ್ಕೆಗಳಿವೆ. ಈ ಕೊಡುಗೆಗಳು ಡೌನ್ ಪೇಮೆಂಟ್ ಅನ್ನು ಕಡಿಮೆ ಮಾಡುವುದರ ಮೂಲಕ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ನೆರವಾಗುತ್ತವೆ.

ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಈ ವರ್ಷ ಹೆಚ್ಚಿನ ಮಾರಾಟವನ್ನು ದಾಖಲಿಸಿದೆ. ಕಂಪನಿಯು ಹಬ್ಬದ ಅವಧಿಯಲ್ಲಿ ಮಾರಾಟವು ಮತ್ತಷ್ಟು ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಲ್ಲಿದೆ.


Click it and Unblock the Notifications