ದುಬಾರಿಯಾಯ್ತು ಜನಪ್ರಿಯ ಯಮಹಾ ಬೈಕುಗಳು
ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಸರಣಿಯಲ್ಲಿ ಕೆಲವು ಆಯ್ದ ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಯಮಹಾ ಕಂಪನಿಯು ತನ್ನ ವೈಝಡ್ಎಫ್-ಆರ್15, ಎಂಟಿ-15. ಎಫ್‍ಝಡ್ 15 ಮತ್ತು ಎಫ್‍ಝಡ್ಎಸ್ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ.

ಯಮಹಾ ಕಂಪನಿಯು ಈ ಬೈಕುಗಳಹೊಸ ಬೆಲೆಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ`ನೀಡಲಾಗಿದೆ. ಒಂದು ಕರೋನಾ ವೈರಸ್ ನಿಂದಾಗಿ ಬೈಕುಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಇದರ ನಡುವೆ ಯಮಹಾ ತನ್ನ ಜನಪ್ರಿಯ ಮಾದರಿಗಳಿಗೆ ಬೆಲೆಯನ್ನು ಹೆಚ್ಚಿಸಿದೆ. ಯಮಹಾ ತನ್ನ ಆಯ್ದ ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಿರುವುದರ ಹಿಂದಿನ ಕಾರಣವು ತಿಳಿದುಬಂದಿಲ್ಲ.

ಈ ಬೆಲೆಯನ್ನು ಹೆಚ್ಚಿಸಿರುವುದರ ಬಗ್ಗೆ ವಿವರವಾಗಿ ನೋಡುವುದಾದರೆ, ಯಮಹಾ ಆರ್ 15ವಿ 3.0 ಅನ್ನು ಮೂರು ಬಣ್ಣ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ, ಈ ಎಲ್ಲಾ ಆಯ್ಕೆಯ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಟಾಪ್-ವೆರಿಯಂಟ್ ಆರ್ 15 ರೇಸಿಂಗ್ ಬ್ಲೂ ಬಣ್ಣದ ಆಯ್ಕೆಯ ಮಾದರಿಗೆ ರೂ.1,000ಗಳವರೆಗೆ ಬೆಲೆಯನ್ನು ಹೆಚ್ಚಿಸಿದ್ದಾರೆ.
MOST READ: ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಯಮಹಾ ಆರ್ 15ವಿ 3.0 ಮಾದರಿಯಲ್ಲಿ 155 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.3 ಬಿಹೆಚ್‍ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸ್ಲಿಪ್ಪರ್ ಅಸಿಸ್ಟೆಡ್ ಕ್ಲಚ್ನೊಂದಿಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಇನ್ನು ಯಮಹಾ ಎಂಟಿ -15 ಬೈಕ್ ಬ್ರ್ಯಾಂಡ್ ನ ಆರ್ 15 ಮಾದರಿಯನ್ನು ಆಧರಿಸಿದೆ. ಇನ್ನು ಈ ಯಮಹಾಆ ಎಂಟಿ -15 ಬೈಕಿಗೆ ರೂ.500 ರಷ್ಟು ಬೆಲೆಯನ್ನು ಹೆಚ್ಚಿಸಲಾಗಿದೆ. ಕೇವಲ 12 ತಿಂಗಳಲ್ಲಿ ಈ ಯಮಹಾ ಎಂಟಿ-15 ಬೈಕಿನ 25,000 ಯುನಿಟ್ ಗಳು ಮಾರಾಟವಾಗಿವೆ.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಈ ಬೈಕಿನ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ನವೀಕರಿಸಲಾಗಿದೆ. ಈ ಎಂಜಿನ್ 18.5 ಬಿಹೆಚ್‍ಪಿ ಪವರ್ ಮತ್ತು 13.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬೈಕಿನಲ್ಲಿ ಬಿಎಸ್-4 ಎಂಜಿನ್‍ಗಿಂತ 0.8 ಬಿಹೆಚ್‍ಪಿ ಪವರ್ ಅನ್ನು ಇಳಿಸಿದೆ. ಯಮಹಾ ಎಂಟಿ-15 ಬಿಎಸ್-4 ಮಾದರಿಯು 19.3 ಬಿಹೆಚ್‍ಪಿ ಪವರ್ ಮತ್ತು 14.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಯಮಹಾ ಕಂಪನಿಯು ಎಫ್‍ಝಡ್ ಬೈಕಿನ ಬೆಲೆಯನ್ನು ಕೂಡ ಹೆಚ್ಚಿಸಿದೆ. ಎಫ್‍ಝಡ್ ಮತ್ತು ಎಫ್‌ಜೆಡ್ಎಸ್-ಎಫ್‍ಐ ಬೈಕುಗಳ ಬೆಲೆಯನ್ನು ರೂ.500ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಇದರೊಂದಿಗೆ ಯಮಹಾ ಕಂಪನಿಯು ತನ್ನ ಬಹುನೀರಿಕ್ಷಿತ ಹೊಸ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.ಹೊಸ ಯಮಹಾ ಎಫ್‍ಝಡ್ 25 ಮತ್ತು ಎಫ್‍ಝಡ್ಎಸ್ 25 ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಿದೆ.

ಯಮಹಾ ಕಂಪನಿಯು ತನ್ನ ಸರಣಿಯಲ್ಲಿ ಕೆಲವು ಆಯ್ದ ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಇದರೊಂದಿಗೆ ಇನ್ನಿತರ ಜನಪ್ರಿಯ ಕಂಪನಿಗಳು ಕೂಡ ತಮ್ಮ ಸರಣಿಯಲ್ಲಿರುವ ಕೆಲವು ಮಾದರಿಗಳಿಗೆ ಬೆಲೆಯನ್ನು ಹೆಚ್ಚಿಸಿದೆ.


Click it and Unblock the Notifications