ಅನಾವರಣವಾಯ್ತು ಹೊಸ ಯಮಹಾ ವೈಝಡ್ಎಫ್-ಆರ್125 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ವೈಝಡ್ಎಫ್-ಆರ್125 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಯಮಹಾ ಕಂಪನಿಯು ನವೀಕರಿಸಿ 2021ರ ವೈಝಡ್ಎಫ್-ಆರ್125 ಬೈಕನ್ನು ಅನಾವರನಗೊಳಿಸಲಾಗಿದೆ.

ಈ ಹೊಸ ಯಮಹಾ ವೈಝಡ್ಎಫ್-ಆರ್125 ಬೈಕನ್ನು ನವೀಕರಣದ ಭಾಗವಾಗಿ, ಸಂಪೂರ್ಣ ಎರಡು ಹೊಸ ಫೇರ್ಡ್ ಬಣ್ಣಗಳನ್ನು ಪಡೆಯುತ್ತದೆ. ಮೊದಲನೆಯದು ರೇಸಿಂಗ್ ಬ್ಲೂ ಬಣ್ಣವಾಗಿದ್ದು, ಮುಂಭಾಗದ ಫೆಂಡರ್ ಟೈಲ್ ವಿಭಾಗದಲ್ಲಿ ಗ್ರೇ ಬಣ್ಣವನ್ನು ಹೊಂದಿರುತ್ತದೆ ಮತ್ತು ಫೇರಿಂಗ್‌ನಲ್ಲಿ ಗ್ರಾಫಿಕ್ಸ್ ಆಗಿದೆ. ಈ ಬಣ್ಣದ ಆಯ್ಕೆಯು ಇದರ ಸಹೋದರರಾದ ವೈಝಡ್ಎಫ್-ಆರ್1 ಮತ್ತು ಝಡ್ಎಫ್-ಆರ್6 ಬೈಕುಗಳಿಂದ ಸ್ಫೂರ್ತಿ ಪಡೆದಿದೆ.

ಇತರ ಬಣ್ಣ ಆಯ್ಕೆಯು ಮುಂಭಾಗದ ಫೇರಿಂಗ್ ಮತ್ತು ಟೈಲ್ ವಿಭಾಗವು ವೈಟ್ ಲೈನ್ ಗಳೊಂದಿಗೆ ಫುಲ್ ಬ್ಲ್ಯಾಕ್ ಬಣ್ಣವನ್ನು ಹೊಂದಿರುತ್ತದೆ. ಯಮಹಾ ಈ ಬಣ್ಣವನ್ನು ಗೋಲ್ಡನ್ ಫೋರ್ಕ್‌ಗಳಿಂದ ಕೂಡಿದೆ, ಇದು ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇದಲ್ಲದೆ 2021ರ ಯಮಹಾ ಆರ್125 ಸಹ ಲಿವರ್ ಗಾರ್ಡ್ ಗಳೊಂದಿಗೆ ಸ್ಟ್ಯಾಂಡರ್ಡ್ ಅಕ್ಸೇಸರೀಸ್ ಗಳೊಂದಿಗೆ ಬರುತ್ತದೆ. 2021ರ ಯಮಹಾ ಆರ್125 ಆಕರ್ಷಕ ಲುಕ್ ಅನ್ನು ಹೊಂದಿದೆ.

ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಯಮಹಾ ವೈಝಡ್ಎಫ್-ಆರ್125 ಬೈಕಿನಲ್ಲಿ 124 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಎಂಜಿನ್ ಅನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್ಡೇಟ್ ಮಾಡಲಾಗಿದೆ. ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್, ಸಸ್ಪೆಂಕ್ಷನ್ ಮತ್ತು ಫೀಚರ್ ಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿದೆ.

2021ರ ಯಮಹಾ ಆರ್125 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‍ಗಳನ್ನು ಹೊಂದಿರುವ ಟೇಲ್ ಲ್ಯಾಂಪ್, ಪೂರ್ಣ ಪ್ರಮಾಣದ ಎಲ್‍ಸಿಡಿ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟುಗಳನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಯಮಹಾ ಆರ್125 ಬೈಕಿನಲ್ಲಿ ಸಸ್ಪೆಂಷನ್‍ಗಳಿಗಾಗಿ ಮುಂಭಾಗದಲ್ಲಿ ಅಪ್ ಸೈಡ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍ಗಳಿವೆ. ಬ್ರೇಕಿಂಗ್‍ಗಳಿಗಾಗಿ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ರೋಟರ್‍ಗಳಿವೆ.

2021ರ ಯಮಹಾ ವೈಝಡ್ಎಫ್-ಆರ್125 ಬೈಕ್ ಈ ವರ್ಷದ ಅಂತ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಯಮಹಾ ವೈಝಡ್ಎಫ್-ಆರ್125 ಬೈಕ್ ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.


Click it and Unblock the Notifications