ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ಯಮಹಾ ಕಂಪನಿಯು ತನ್ನ ಜನಪ್ರಿಯ ವೈಝ‍‍ಡ್ಎಫ್- ಆರ್3 ಬೈಕನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಆರ್3 ಬೈಕನ್ನು ಸ್ಥಗಿತಗೊಳಿಸಲಾಗಿದೆ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸುವವರೆಗೆ ಈ ವೈಝ‍‍ಡ್ಎಫ್ ಆರ್3 ಬೈಕನ್ನು ಸ್ಥಗಿತಗೊಳಿಸಳಾಗುತ್ತದೆ. ಮಾರ್ಚ್ 31ರವರೆಗೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲು ಗಡುವು ಇದೆ. ಆದರೆ ಯಮಹಾ ವೈಝ‍‍ಡ್ಎಫ್ ಆರ್3 ಬೈಕನ್ನು ಈ ಬಿಎಸ್-6 ನಿಯಮಕ್ಕೆ ತಕ್ಕಂತೆ ನವೀಕರಿಸಲಾಗಿಲ್ಲ. ಇದರಿಂದ ಇನ್ನು ಮುಂದೆ ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಟಕ್ಕೆ ಲಭ್ಯವಿರುವುದಿಲ್ಲ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ವೈ‍ಝಡ್ಎಫ್‍ - ಆರ್3 ಬೈಕಿನಲ್ಲಿ 321 ಸಿಸಿ ಇನ್ ಲೈನ್ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 40.8 ಬಿ‍ಹೆಚ್‍ಪಿ ಪವರ್ ಮತ್ತು 29.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ಈಗಾಗಲೇ ನವೀಕರಿಸಲಾದ ವೈ‍ಝಡ್ಎಫ್‍ - ಆರ್3 ಬೈಕ್ ಹಲವು ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತದೆ ಎಂದು ನಿರೀಕ್ಷಿಸುತ್ತೇವೆ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ವೈ‍ಝಡ್ಎಫ್‍ - ಆರ್3 ಬೈಕಿನಲ್ಲಿ ಡ್ಯುಯಲ್ ಎಲ್‍ಇ‍ಡಿ ಹೆಡ್‍ಲ್ಯಾಂಪ್ ಫ್ರಂಟ್ ಫೇರಿಂಗ್ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸದಿಂದ ಏರೋಡ್ಯಾನಿಮಿಕ್ ಡ್ರ್ಯಾಂಗ್ ಶೇ.7 ಕಡಿಮೆ ಮಾಡುತ್ತದೆ. ಮಸ್‍ಕ್ಯೂಲರ್ ಫ್ಯೂಲ್ ಟ್ಯಾಂಕ್, ಕ್ಲಿಪ್ - ಆನ್ ಹ್ಯಾಂಡಲ್‍‍ಬಾರ್ ಅನ್ನು ಹೊಂದಿದೆ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ಈ ಬೈಕ್‍‍ನಲ್ಲಿ ಡಿಜಿಟಲ್ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಸ್ಪೀಡೋಮೀಟರ್, ಒಡಿಒ ಜೊತೆ ಗೇರ್ ಇಂಡಿಕೇಟರ್ ಹಾಗೂ ಟ್ರಿಪ್ ಇಂಡಿಕೇಟರ್‍‍ಗಳೂ ಇರಲಿವೆ. ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಲ್ಲಿರುವ ಕ್ಲೀನ್ ಲೇಔ‍‍ಟ್‍‍ನಿಂದ ಬೈಕ್ ಸವಾರನು ಸುಲಭವಾಗಿ ಮಾಹಿತಿಯನ್ನು ತಿಳಿಯಬಹುದಾಗಿದೆ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ಯಮಹಾ ವೈಝಡ್ಎಫ್-ಆರ್3 ಮುಂಭಾಗದಲ್ಲಿ ಕೆವೈಬಿ ಮೂಲದ ಟೆಲಿಸ್ಕೋಪಿಕ್ ಫೋರ್ಕ್‍‍ಗಳನ್ನು ಹೊಂದಿದೆ ಮತ್ತು ಹಿಂಭಾಗದಲ್ಲಿ ಪ್ರೀ-ಲೋಡ್ ಹೋಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಅನ್ನು ಹೊಂದಿದೆ. ಇದರಿಂದ ಬೈಕ್ ಉತ್ತಮವಾದ ಕಂಟ್ರೋಲ್ ಅನ್ನು ಹೊಂದಿರುತ್ತದೆ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ಯಮಹಾ ವೈಝಡ್ಎಫ್-ಆರ್3 ಬೈಕಿನಲ್ಲಿ ಸವಾರನ ಸುರಕ್ಷತೆಗಾಗಿ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಸ್ಥಗಿತವಾಯ್ತು ಯಮಹಾ ವೈ‍ಝಡ್ಎಫ್‍‍‍-ಆರ್3 ಬೈಕ್

ಮುಂದಿನ ದಿನಗಳಲ್ಲಿ ವೈಝ‍‍ಡ್ಎಫ್ ಆರ್೩ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸುವವರೆಗೆ ಈ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha R3 Discontinued From April 1 Until BS6 Model Introduced In India. Read in Kannada.
Story first published: Saturday, March 21, 2020, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X