ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಯಮಹಾ ಕಂಪನಿಯು ತನ್ನ ಜನಪ್ರಿಯ ವೈಝಡ್ಎಫ್-ಆರ್6 ಬೈಕನ್ನು ಸ್ಥಗಿತಗೊಳಿಸಲಾಗಿದೆ. ಯಮಹಾ ವೈಝಡ್ಎಫ್-ಆರ್6 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವು ವರ್ಷಗಳ ಕಾಲ ಸೂಪರ್‌ಸ್ಪೋರ್ಟ್ ವಿಭಾಗದಲ್ಲಿ ಪಾರುಪತ್ಯ ಸಾಧಿಸಿದ ಬೈಕ್ ಇದಾಗಿದೆ.

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಯಮಹಾ ವೈಝಡ್ಎಫ್-ಆರ್6 ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸೂಪರ್‌ಸ್ಪೋರ್ಟ್ ಬೈಕ್ ಆಗಿದೆ. ಹಲವು ವರ್ಷಗಳ ಕಾಲ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಂಚಿದ ಈ ಸೂಪರ್‌ಸ್ಪೋರ್ಟ್ ಬೈಕ್ ಇದೀಗ ಇತಿಹಾಸ ಪುಟ ಸೇರಿದೆ ಇತ್ತೀಚೆಗೆ ಟ್ರಯಂಫ್ ಕೂಡ ಡೇಟೋನಾ 675 ಸೂಪರ್‌ಸ್ಪೋರ್ಟ್ ಬೈಕನ್ನು ಸ್ಥಗಿತಗೊಳಿಸಿತ್ತು. ಇದೀಗ ಯಮಹಾ ಕಂಪನಿಯು ಕೂಡ ವೈಝಡ್ಎಫ್-ಆರ್ ಬೈಕನ್ನು ನವೀಕರಿಸುವುದಿಲ್ಲವೆಂದು ಹೇಳಿದೆ.

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಆದರೆ ಯಮಹಾ ಕಂಪನಿಯು ವೈಝಡ್ಎಫ್-ಆರ್6 ಬೈಕನ್ನು ಟ್ರ್ಯಾಕ್-ಓನ್ಲಿ ಮಾದರಿಯಾಗಿ ಮಾರಾಟ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿಕೊಂಡಿದೆ. ಕಂಪನಿಯ ಪ್ರಕಾರ, ಈ ವೈಝಡ್ಎಫ್-ಆರ್6 ಮಿಡಲ್ ವೇಟ್ ಸೂಪರ್‌ಸ್ಪೋರ್ಟ್ ಅನ್ನು ಅಪ್‌ಗ್ರೇಡ್ ಮಾಡಲು ಸಂಬಂಧಿಸಿದ ವೆಚ್ಚ ತುಂಬಾ ಹೆಚ್ಚಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಈ ವಿಭಾಗದಲ್ಲಿ ಒಟ್ಟಾರೆ ಮಾರಾಟವು ದೊಡ್ಡ ಪ್ರಮಾಣದಲ್ಲಿ ಕುಸಿತವನ್ನು ಕಂಡಿದೆ. ಏಕೆಂದರೆ ಸೂಪರ್‌ಸ್ಪೋರ್ಟ್ ವಿಭಾಗದ ಬೈಕುಗಳು ದುಬಾರಿ ಬೆಲೆಯನ್ನು ಹೊಂದಿದೆ. 600 ಸಿಸಿ ಸೂಪರ್‌ಸ್ಪೋರ್ಟ್‌ಗಳ ಅಭಿವೃದ್ಧಿ ವೆಚ್ಚಗಳು ಅದರ ಲೀಟರ್-ಕ್ಲಾಸ್ ಮಾದರಿಗಳ ವೆಚ್ಚವನ್ನು ಹೋಲುತ್ತವೆ.

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಜಪಾನಿನ ಕಂಪನಿಯು ಟ್ರ್ಯಾಕ್-ಓನ್ಲಿ ಮಾದರಿಗಳನ್ನು ನೀಡುವ ಮೂಲಕ ಈ ಬ್ರ್ಯಾಂಡ್ ಅನ್ನು ಜೀವಂತವಾಗಿರಿಸುತ್ತದೆ. ಟ್ರ್ಯಾಕ್-ಓನ್ಲಿ ಮಾದರಿಗಳು ಮೂಲತಃ ಸ್ಟಾಕ್ ಬೈಕುಗಳು ಆದರೆ ಟ್ರ್ಯಾಕ್ ಉದ್ದೇಶಗಳಿಗಾಗಿ ಮಾರಾಟ ಮಾಡಲಾಗುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಇನ್ನು ಯಮಹಾ ಕಂಪನಿಯು ತನ್ನ ಪ್ರಸಿದ್ಧ ಜಿವೈಟಿಆರ್ ಕಿಟ್ ಅನ್ನು ಸಹ ನೀಡುತ್ತದೆ. ವೈಝಡ್ಎಫ್-ಆರ್6 ಬೈಕ್ ಹೋಂಡಾ ಸಿಬಿಆರ್ 600 ಎಫ್ ಗಿಂತ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿತ್ತು, ಇದರಿಂದ ಈ ಬೈಕಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿತ್ತು.

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಆ ಸಮಯದಲ್ಲಿ ವೈಝ‍‍ಡ್ಎಫ್ ಆರ್6 ಬೈಕ್ ಮಿಡ್ ಸೈಜ್ ಸೂಪರ್‌ಸ್ಪೋರ್ಟ್ ವಿಭಾಗದಲ್ಲಿ ಪಾರುಪತ್ಯವನ್ನು ಸಾಧಿಸಿತ್ತು. ಆದರೆ ನಂತರದಲ್ಲಿ ಸೂಪರ್‌ಸ್ಪೋರ್ಟ್ ಬೈಕುಗಳ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿತ್ತು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಯಮಹಾ ವೈಝಡ್ಎಫ್-ಆರ್6 ಬೈಕ್ ಎರ್ಲೆಕ್ಟ್ರಾನಿಕ್ಸ್ ಪ್ಯಾಕೇಜ್ ರೈಡ್-ಬೈ-ವೈರ್ ಥ್ರೊಟಲ್, ಆರು ಹಂತದ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಈ ಬೈಕ್ ಮೂರು ರೈಡಿಂಗ್ ಮೋಡ್‌ಗಳು ಮತ್ತು ಎಲ್‌ಸಿಡಿ ಇನ್ಸ್ ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಇತಿಹಾಸದ ಪುಟ ಸೇರಿದ ಯಮಹಾ ವೈಝಡ್ಎಫ್-ಆರ್6 ಸೂಪರ್‌ಸ್ಪೋರ್ಟ್ ಬೈಕ್

ಯಮಹಾ ಕಂಪನಿಯು ಯುರೋಪ್ ಮತ್ತು ಯುಎಸ್ಎಗಳಲ್ಲಿ ಉಳಿದಿರುವ ವೈಝಡ್ಎಫ್-ಆರ್6 ಸ್ಟಾಕ್ ಗಳನ್ನು ಖಾಲಿ ಮಾಡುವ ಉದ್ದೇಶದಿಂದ ಸುಮಾರು ಒಂದು ತಿಂಗಳವರೆಗೆ ಮಾರಾಟ ಮಾಡುವುದನ್ನು ಮುಂದುವರಿಸುತ್ತದೆ. ಆದರೆ ಮುಂದಿನ ವರ್ಷದಿಂದ ಈ ಯಮಹಾ ಸೂಪರ್‌ಸ್ಪೋರ್ಟ್ ಬೈಕ್ ಖರೀದಿಗೆ ಲಭ್ಯವಿರುವುದಿಲ್ಲ.

Most Read Articles

Kannada
Read more on ಯಮಹಾ yamaha
English summary
Yamaha YZF-R6 To Be Discontinued. Read In Kannada.
Story first published: Thursday, November 19, 2020, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X