ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ಬೆನೆಲ್ಲಿ 302ಆರ್ ಬೈಕ್
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಹೊಸ ಎಂಟ್ರಿ-ಲೆವೆಲ್ ಸ್ಪೋರ್ಟ್ಸ್‌ಬೈಕ್ ಆದ ಬೆನೆಲ್ಲಿ 302ಆರ್ ಅನ್ನು ಚೀನಾದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಬೆನೆಲ್ಲಿ 302ಆರ್ ಬೈಕನ್ನು ಸಂಪೂರ್ಣವಾಗಿ ವಿನ್ಯಾಸವನ್ನು ಬದಲಾಯಿಸಿ ಹೊಸ ರೂಪದಲ್ಲಿ ಇದನ್ನು ಪ್ರದರ್ಶಿಸಿದೆ.

2021ರ ಬೆನೆಲ್ಲಿ 302ಆರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಯಾಗಲಿದೆ. ಈ ಹೊಸ ಬೆನೆಲ್ಲಿ ಬೈಕ್ ಈ ವರ್ಷದ ಅಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಬಿಡುಗಡೆಗೊಳಿಸುವಾಗ ಇಲ್ಲಿಯ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಎಂಜಿನ್ ಅನ್ನು ನವೀಕರಿಸಲಾಗುತ್ತದೆ. ಇನ್ನು ಈ ಬೆನೆಲ್ಲಿ 302ಆರ್ ಬೈಕಿನ ವಿನ್ಯಾಸದಲ್ಲಿಯು ಕೂಡ ಪ್ರಮುಖವಾದ ಬದಲಾವಣೆಗಳನ್ನು ಪಡೆದುಕೊಂಡಿದೆ.

ಈ ಹೊಸ ಬೆನೆಲ್ಲಿ 302ಆರ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಪರಿಷ್ಕೃತ ಫೇರಿಂಗ್ ಮತ್ತು ಬೈಕ್‌ನ ಒಟ್ಟಾರೆ ಸಿಲೂಯೆಟ್ ಸಹ ಮೊದಲಿಗಿಂತ ಹೆಚ್ಚು ಅಗ್ರೇಸಿವ್ ಆಗಿ ಕಾಣುತ್ತದೆ. ಎಲ್ಇಡಿ ಟರ್ನ್ ಇಂಡೀಕೆಟರ್ಸ್ ಗಳಿಂದ ಸುತ್ತುವರೆದಿರುವ ಲಂಬವಾಗಿ ಜೋಡಿಸಲಾದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅನ್ನು ಬೈಕ್ ಹೊಂದಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಇನ್ನು ಟೈಲ್ ವಿಭಾಗವನ್ನು ಸಹ ಎಲ್ಇಡಿ ಟೈಲ್‌ಲೈಟ್ ಮತ್ತು ಪಿಲಿಯನ್ ಸೀಟ್ ಅಡಿಯಲ್ಲಿ ಏರ್ ವೆಂಟ್ಸ್‌ನೊಂದಿಗೆ ಬದಲಾಯಿಸಲಾಗಿದೆ. ಒಟ್ಟಾರೆ ಇದರ ಲುಕ್ ಮೊದಲಗಿಂತ ಹೆಚ್ಚು ಆಕರ್ಷಕವಾಗಿ ಮತ್ತು ಅಗ್ರೇಸಿವ್ ಆಗಿದೆ.

2021ರ ಬೆನೆಲ್ಲಿ 302ಆರ್ ಬೈಕಿನಲ್ಲಿ 302ಸಿಸಿ, ಪ್ಯಾರಲಲ್-ಅವಳಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 34.5 ಬಿಹೆಚ್‌ಪಿ ಮತ್ತು 9,000 ಆರ್‌ಪಿಎಂನಲ್ಲಿ 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ನವೀಕರಿಸಿದ ಎಂಜಿನ್ ಬಿಎಸ್ 4 ಆವೃತ್ತಿಗಿಂತ ಸ್ವಲ್ಪ ಕಡಿಮೆ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೇ ಇದರ ತೂಕದಲ್ಲಿ ಕೂಡ ಗಮನರ್ಹವಾದ ವ್ಯತ್ಯಾಸಗಳಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಬರೊಬ್ಬರಿ 22ಕೆಜಿ ತೂಕ ಕಡಿಮೆಯಾಗಿದೆ. ಇನ್ನು ಈ ಬೈಕ್ ಒಟ್ಟು 182 ಕೆಜಿ ತೂಕವನ್ನು ಹೊಂದಿದೆ.

ಈ 2021ರ ಬೆನೆಲ್ಲಿ 302ಆರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಪ್ರಿ-ಲೋಡ್ ಮಾಡಬಹುದಾದ 41ಎಂಎಂ ಅಪ್ ಸೈಡ್ ಡೌನ್ ಫೋರ್ಕ್ ಸಸ್ಪೆಂಕ್ಷನ್ ಸೆಟಪ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ನಾಲ್ಕು-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ.

ಈ 2021ರ ಬೆನೆಲ್ಲಿ 302ಆರ್ ಮೊದಲಿಗಿಂತ ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ಆಗಿ ಕಾಣುತ್ತದೆ, ಹೊಸ ಬಾಡಿ ಗ್ರಾಫಿಕ್ಸ್, ಮಸ್ಕ್ಯುಲರ್ ಟ್ಯಾಂಕ್, ಪರಿಷ್ಕೃತ ವಿಂಡ್‌ಶೀಲ್ಡ್, ನವೀಕರಿಸಿದ ಸ್ವಿಚ್‌ಗಳು ಮತ್ತು ಹೊಸ, ಪೂರ್ಣ-ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ಈ ಬಹುನಿರೀಕ್ಷಿತ 2021ರ ಬೆನೆಲ್ಲಿ 302ಆರ್ ಬೈಕ್ ದೇಶಿಯ ಮಾರುಕಟ್ಟೆಗೆ ಈ ವರ್ಷದ ಅಂತ್ಯಕ್ಕೆ ಲಗ್ಗೆ ಇಡಬಹುದು. ಭಾರತದಲ್ಲಿ ಈ ಬೈಕ್ ಪ್ರಮುಖವಾಗಿ ಕವಾಸಕಿ ನಿಂಜಾ 300, ಟಿವಿಎಸ್ ಅಪಾಚೆ ಆರ್‌ಆರ್ 310 ಮತ್ತು ಕೆಟಿಎಂ ಆರ್ಸಿ 390 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ


Click it and Unblock the Notifications








