ಭಾರತದಲ್ಲಿ 2021ರ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಬೈಕ್ ಬಿಡುಗಡೆ
ಬೆನೆಲ್ಲಿ ಇಂಡಿಯಾ ಕಂಪನಿಯು ತನ್ನ ಹೊಸ ಟಿಆರ್‌ಕೆ 502 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.ಈ ಹೊಸ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕ್ ಕೆಲವು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಈ ಹೊಸ ಅಡ್ವೆಂಚರ್ ಟೂರರ್ ಬೈಕನ್ನು ಎರಡು ರೀತಿಯ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಈ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಬೈಕಿನ ಮೆಟಾಲಿಕ್ ಡಾರ್ಕ್ ಗ್ರೇ ಬಣ್ಣದ ಮಾದರಿಗೆ ರೂ.5.19 ಲಕ್ಷಗಳಾದರೆ, ಪ್ಯೂರ್ ವೈಟ್ ಜೊತೆ ರೆಡ್ ಬಣ್ಣಗಳ ಮಾದರಿಗೆ ರೂ.5.29 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಆಫ್-ರೋಡ್ ಆಧಾರಿತ 2021ರ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಬೈಕನ್ನು ಹಿಂದಿನ ಮಾದರಿಗಿಂತ ರೂ.31,000 ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ.

ಮೊದಲಿಗೆ ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕಿನಲ್ಲಿ 499 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 46.8 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 46 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಜನವರಿ ತಿಂಗಳಲ್ಲಿ ಬೆನೆಲ್ಲಿ ರಸ್ತೆ ಆಧಾರಿತ ಆರ್‌ಕೆ 502 ಬೈಕನ್ನು ಬಿಎಸ್ 6 ಆವೃತ್ತಿಯಾಗಿ ಬಾರತದಲ್ಲಿ ಬಿಡುಗಡೆಗೊಳಿಸಿತ್ತು. ಇನ್ನು ಹೊಸ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಅಡ್ವೆಂಚರ್ ಬೈಕ್ ಬ್ಯಾಕ್‌ಲಿಟ್ ಸ್ವಿಚ್‌ಗಿಯರ್, ಅಲ್ಯೂಮಿನಿಯಂ-ಫ್ರೇಮ್ ನಕಲ್ ಗಾರ್ಡ್‌ಗಳು, ಮರುವಿನ್ಯಾಸಗೊಳಿಸಲಾದ ಮೀರರ್ ಮತ್ತು ಹೊಸ ಹ್ಯಾಂಡಲ್‌ಬಾರ್ ಅನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇದರೊಂದಿಗೆ ಹೆಚ್ಚುವರಿಯಾಗಿ ಈ ಬೈಕಿನಲ್ಲಿ ವಿಭಿನ್ನ ವಿನ್ಯಾಸದ ಎಲ್ಸಿಡಿ ಮತ್ತು ಬಿಳಿ ಬ್ಯಾಕ್ಲಿಟ್ ಅನಲಾಗ್ ಟ್ಯಾಕೋಮೀಟರ್ ನೊಂದಿಗೆ ಪರಿಷ್ಕೃತ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕನ್ಸೋಲ್ ಅನ್ನು ಪಡೆಯುತ್ತದೆ.

ಹೊಸ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಬೈಕಿನ ಮುಂಭಾಗ 19 ಇಂಚಿನ ವ್ಹೀಲ್ ಮತ್ತು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವೀಲ್ ಅನ್ನು ಅಳವಡಿಸಿದೆ. ಇನ್ನು ಈ ಅಡ್ವೆಂಚರ್ ಟೂರರ್ ಬೈಕ್ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಈ ಬೈಕಿನಲ್ಲಿ ದೊಡ್ಡ 20-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಲಾಂಗ್ ರೈಡ್ ತೆರಳುವಾಗ ಇದರಲ್ಲಿ ದೊಡ್ಡ ಪ್ಯೂಯಲ್ ಟ್ಯಾಂಕ್ ನೀಡಿರುವುದು ಉತ್ತಮ ಸಹಕಾರಿಯಾಗಿರುತ್ತದೆ.

ಇನ್ನು ಗಾಳಿಯ ರಕ್ಷಣೆಗೆ ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ಹೊಸ ಅಲ್ಯೂಮಿನಿಯಂ ರೇರ್ ಬಾಕ್ಸ್ ಬ್ರ್ಯಾಕೆಟ್ ಅನ್ನು ನೀಡಿದೆ. ಈ ಹೊಸ ಬೈಕ್ 2,220 ಮಿ.ಮೀ ಉದ್ದ, 915 ಮಿ.ಮೀ ಅಗಲ ಮತ್ತು 1,505 ಮಿ.ಮೀ ವ್ಜೀಲ್ ಬೇಸ್ ಅನ್ನು ಹೊಂದಿದೆ.ಇನ್ನು ಈ ಬೈಕಿನ ಸೀಟ್ 840 ಎಂಎಂ ಎತ್ತರವನ್ನು ಹೊಂದಿದೆ.

ಇನ್ನು ಈ ಹೊಸ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ಡಿಸ್ಕ್ ಅನ್ನು ಪಡೆಯುತ್ತದೆ.

ಆಸಕ್ತ ಖರೀದಿದಾರರು ಟೋಕನ್ ಮೊತ್ತವನ್ನು 10,000 ರೂ. ಪಾವತಿಸಿ 2021 ಬೆನೆಲ್ಲಿ ಟಿಆರ್ಕೆ 502 ಎಕ್ಸ್ ಅನ್ನು ಕಾಯ್ದಿರಿಸಬಹುದು. ಮೋಟಾರ್ಸೈಕಲ್ ಸ್ಟ್ಯಾಂಡರ್ಡ್ ಆಗಿ 3 ವರ್ಷಗಳ ಅನಿಯಮಿತ ಕಿಲೋಮೀಟರ್ ಖಾತರಿಯೊಂದಿಗೆ ಬರುತ್ತದೆ. ಇದು ನೇರವಾಗಿ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ, ಕವಾಸಕಿ ವರ್ಸಿಸ್ 650 ಮತ್ತು ಹೊಸ ಹೋಂಡಾ ಸಿಬಿ 500 ಎಕ್ಸ್ ಅನ್ನು ಪ್ರತಿಸ್ಪರ್ಧಿಸುತ್ತದೆ.

ಈ ಹೊಸ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.10,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

2021ರ ಬೆನೆಲ್ಲಿ ಟಿಆರ್ಕೆ 502ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ, ಕವಾಸಕಿ ವರ್ಸಿಸ್ 650 ಮತ್ತು ಹೊಸ ಹೋಂಡಾ ಸಿಬಿ500ಎಕ್ಸ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಅಡ್ವೆಂಚರ್ ಟೂರರ್ ಬೈಕುಗಳಲ್ಲಿ ಇದು ಕೂಡ ಒಂದಾಗಿದೆ.


Click it and Unblock the Notifications