2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಐಷಾರಾಮಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ತನ್ನ ಹೊಸ 2021ರ ಎಸ್ 1000 ಆರ್ ಬೈಕನ್ನು ಕಳೆದ ವರ್ಷ ಜಾಗತಿಕವಾಗಿ ಪರಿಚಯಿಸಿದ್ದರು. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಇದೇ ತಿಂಗಳ 15 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಈ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ನೇಕೆಡ್ ರೋಡ್‌ಸ್ಟರ್ ಸ್ಟೈಲಿಂಗ್ ಅನ್ನು ಹೊಂದಿದೆ. ಈ ನೇಕೆಡ್ ರೋಡ್‌ಸ್ಟರ್ ಬೈಕ್ ವಿನ್ಯಾಸ ಮಾತ್ರವಲ್ಲದೇ ಇದರ ಪರ್ಫಾಮೆನ್ಸ್ ಮತ್ತು ಉತ್ತಮ ಕಂಟ್ರೋಲ್ ಗಳಿಂದ ಹೆಚ್ಚು ಜನಪ್ರಿಯತೆಯ ಗಳಿಸಿದ ಬೈಕ್ ಆಗಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇದರಲ್ಲಿ ಹೊಸ ಸಿಂಗಲ್-ಪೀಸ್ ಎಲ್ಇಡಿ ಹೆಡ್ ಲ್ಯಾಂಪ್ ಅದರ ಮಧ್ಯ ಎಲ್ಇಡಿ ಡಿಆರ್ಎಲ್ ಗಳನ್ನು ಹೊಂದಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದರೊಂದಿಗೆ ಫ್ಯೂಯಲ್ ಟ್ಯಾಂಕ್ ವಿನ್ಯಾಸ, ಕ್ವಾರ್ಟರ್ ಫೇರಿಂಗ್, ಎಕ್ಸಾಸ್ಟ್ ಮತ್ತು ಟೈಲ್ ವಿಭಾಗದಲ್ಲಿಯು ಸಣ್ಣ ಮಟ್ಟದ ನವೀಕರಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕಿನ ವಿನ್ಯಾಸದಲ್ಲಿನ ಬದಲಾವಣೆಗಳ ಜೊತೆಗೆ ಚಾಸಿಸ್ ಅನ್ನು ಫ್ಲೆಕ್ಸ್ ಫ್ರೇಮ್ ನೊಂದಿಗೆ ನವೀಕರಿಸಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇದು ಈ ಹೊಸ ಬೈಕಿನ ಒಟ್ಟಾರೆ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ, ಹೊಸ ಎಸ್ 1000 ಆರ್ ಬೈಕ್ ಹಿಂದಿನ ಮಾದರಿಗೆ ಹೋಲಿಸಿದರೆ 6.5 ಕೆಜಿ ತೂಕ ಕಡಿಮೆಯಾಗಿದೆ. ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ 199 ಕೆಜೆ ತೂಕವನ್ನು ಹೊಂದಿರಲಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಬಿಎಂಡಬ್ಲ್ಯು ಎಸ್1000ಆರ್ ಬೈಕಿನೊಂದಿಗೆ ಮತ್ತಷ್ಟು 'ಎಂ ಪ್ಯಾಕೇಜ್' ಆಯ್ಕೆ ಮಾಡಿಕೊಳ್ಳಬಹುದು. ತೂಕವನ್ನು ಕಡಿಮೆ ಮಾಡಲಾಗಿದ್ದರೂ, ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹಿಂದಿನ ಮಾದರಿಯ ಎಂಜಿನ್ ಅನ್ನು ಮುಂದೆಸಾಗಿಸಿದೆ. ಆದರೆ ಎಂಜಿನ್ ಅನ್ನು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್ಡೇಟ್ ಮಾಡಲಾಗಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕಿನಲ್ಲಿ 999 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 165 ಬಿಹೆಚ್‍ಪಿ ಪವರ್ ಮತ್ತು 9,250 ಆರ್‌ಪಿಎಂನಲ್ಲಿ 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಬಿಎಂಡಬ್ಲ್ಯು ಕಂಪನಿಯು ಈ ಬೈಕಿನ ಗೇರ್ ಬಾಕ್ಸ್ ಅನ್ನು ನವೀಕರಿಸಿದ್ದಾರೆ. ಇದರಿಂದ ಗೇರ್ ಗಳನ್ನು ಯಾವುದೇ ಲ್ಯಾಗ್ ಗಳಿಲ್ಲದೇ ಮತ್ತಷ್ಟು ಸುಲಭವಾಗಿ ಬದಲಾಯಿಸುವಂತೆ ನವೀಕರಿಸರಿಬಹುದು.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಹೊಸ 6.5-ಇಂಚಿನ ಟಿಎಫ್ಟಿ ಡಿಸ್ ಪ್ಲೇಯನ್ನು ಹೊಂದಿರಲಿದೆ. ಇದು ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಸಹ ಹೊಂದಿದೆ. ಇದರೊಂದಿಗೆ ರೈನ್, ರೋಡ್, ಡೈನಾಮಿಕ್ ಮತ್ತು ಡೈನಾಮಿಕ್ ಪ್ರೊ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ

2021ರ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಹಲವಾರು ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ಝಡ್1000 ಮತ್ತು ಟ್ರಯಂಫ್ ಸ್ಪೀಡ್ ಟ್ರಿಪಲ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Monday, June 14, 2021, 12:39 [IST]
English summary
2021 BMW S1000R India Launch Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+