2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ಪೋರ್ಟ್ಫೋಲಿಯೊವನ್ನು ನವೀಕರಿಸಲಾಗುತ್ತಿದೆ. ಇದೀಗ ಕವಾಸಕಿಯು ತನ್ನ 2021ರ ನಿಂಜಾ 250 ಬೈಕನ್ನು ಇಂಡೋನೇಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

ಇನ್ನು 2021ರ ಕವಾಸಕಿ ನಿಂಜಾ 250 ಬೈಕ್ ಪ್ಯಾಶನ್ ರೆಡ್ ಮತ್ತು ಮೆಟಾಲಿಕ್ ಕಾರ್ಬನ್ ಗ್ರೇ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಿದ 2021ರ ಕವಾಸಕಿ ನಿಂಜಾ 250 ಬೈಕಿನ ಬೆಲೆಯನ್ನು ಭಾರತೀಯ ಕರೆನ್ಸಿಗೆ ಅನುವಾದಿಸಿದಾಗ ರೂ.3.32 ಲಕ್ಷಗಳಾಗಿದೆ. ಈ ಹೊಸ ಕವಾಸಕಿ ನಿಂಜಾ 250 ಸೂಪರ ಬೈಕ್ ಅಗ್ರೇಸಿವ್ ಆಗಿ ಆಕರ್ಷಕ ಲುಕ್ ಅನ್ನು ಹೊಂದಿದೆ.

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

2021ರ ಕವಾಸಕಿ ನಿಂಜಾ 250 ಬೈಕ್ ಟ್ವಿನ್-ಪಾಡ್ ಎಲ್ಇಡಿ ಹೈಡ್ ಲೈಟ್, ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಸ್ಕ್ಲರ್ ವಿನ್ಯಾಸ, ಫೇರಿಂಗ್ ಇಂಟಿಗ್ರೇಟೆಡ್ ಫ್ರಂಟ್ ಬ್ಲಿಂಕರ್ಸ್ ಮತ್ತು ಸ್ಪ್ಲಿಟ್-ಸ್ಟೈಲ್ ಸ್ಯಾಡಲ್ ಒಳಗೊಂಡಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

ಇನ್ನು 2021ರ ಕವಾಸಕಿ ನಿಂಜಾ 250 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಪ್ರಿ-ಲೋಡಡ್ ಮಾಡಬಹುದಾದ ಮೊನೊ-ಶಾಕ್ ಅನ್ನು ಒಳಗೊಂಡಿದೆ

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಕವಾಸಕಿ ನಿಂಜಾ 250 ಬೈಕಿನಲ್ಲಿ 310ಎಂಎಂ ಪೆಡಲ್-ಟೈಪ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಡಲ್-ಟೈಪ್ ರೋಟರ್ ಅನ್ನು ಒಳಗೊಂಡಿದೆ. ಇದರೊಂದಿಗೆ ಎಬಿಎಸ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

2021ರ ಕವಾಸಕಿ ನಿಂಜಾ 250 ಬೈಕ್ 249ಸಿಸಿ ಪ್ಯಾರಲಲ್-ಟ್ವಿನ್ ಲಿಕ್ವಿಡ್ ಕೋಲ್ಡ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 12,500 ಆರ್‌ಪಿಎಂನಲ್ಲಿ 38.2 ಬಿಹೆಚ್‌ಪಿ ಪವರ್ ಮತ್ತು 10,000 ಆರ್‌ಪಿಎಂನಲ್ಲಿ 23.5 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

ಈ 249ಸಿಸಿ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಕ್ಲಚ್ ಅನ್ನು ನೀಡಲಾಗಿದೆ. ಇನ್ನು ಈ 2021ರ ಕವಾಸಕಿ ನಿಂಜಾ 250 ಬೈಕ್ ಶೀಘ್ರದಲ್ಲೇ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

ಕವಾಸಕಿ ತನ್ನ ಎಂಟ್ರಿ-ಲೆವೆಲ್ ನಿಂಜಾ 300 ಬೈಕನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಕವಾಸಕಿ ಕಂಪನಿಯು ತನ್ನ ನಿಂಜಾ 300 ಬೈಕನ್ನು ಹೊಸ ನವೀಕರಿರಣಗಳೊಂದಿಗೆ ಬಿಎಸ್-6 ಆವೃತಿಯಾಗಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

2021ರ ಕವಾಸಕಿ ನಿಂಜಾ 250 ಬೈಕ್ ಬಿಡುಗಡೆ

ಕೆಲವು ವರದಿಗಳ ಪ್ರಕಾರ, ಹೊಸ ಕವಾಸಕಿ ನಿಂಜಾ 300 ಬೈಕ್ ಈ ವರ್ಷದ ಮಾರ್ಚ್ ತಿಂಗಳ ಅಂತ್ಯದ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲಿದೆ. ಹೊಸ ಕವಾಸಕಿ ನಿಂಜಾ 300 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Thursday, February 18, 2021, 9:54 [IST]
English summary
2021 Kawasaki Ninja 250 Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+