ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮೋಟೋ ಗುಜಿ ತನ್ನ ವಿ85 ಟಿಟಿ ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. 2021ರ ಮೋಟೋ ಗುಜಿ ವಿ85 ಟಿಟಿ ಬೈಕ್ ಕೆಲವು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

ಮೋಟೋ ಗುಜಿ ವಿ85 ಟಿಟಿ ಬೈಕ್ ಸ್ಟ್ಯಾಂಡರ್ಡ್ ಮತ್ತು ಟ್ರಾವೆಲ್ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಮೋಟೋ ಗುಜಿ ವಿ85 ಟಿಟಿ ಅಡ್ವೆಂಚರ್ ಬೈಕ್ ಆಗಿದ್ದು, ಇದು ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ. 2021ರ ಮೋಟೋ ಗುಜಿ ವಿ85 ಟಿಟಿ ಬೈಕ್ ಯುರೋ 5 ಮಾನದಂಡಗಳಿಗೆ ಅನುಗುಣವಾದ ನವೀಕರಿಸಿದ ಎಂಜಿನ್ ಅನ್ನು ಪಡೆಯುತ್ತದೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

ಮೋಟೋ ಗುಜಿ ವಿ85 ಟಿಟಿ ಬೈಕ್ ಸ್ಟೀಲ್ ಟ್ಯೂಬ್ಯುಲರ್ ಚಾಸಿಸ್ ಒಳಗೆ ಅದೇ 853 ಸಿಸಿ ವಿ-ಟ್ವಿನ್ ಟ್ರಾನ್ಸ್‌ವರ್ಸ್ ಮೌಂಟೆಡ್ ಎಂಜಿನ್‌ ಅನ್ನು ಹೊಂದಿರುತ್ತದೆ. ಕಂಪನಿಯ ಹೇಳಿಕೆಯ ಪ್ರಕಾರ, ಎಂಜಿನ್‌ನಲ್ಲಿ ಮಾಡಿದ ಬದಲಾವಣೆಗಳು ಈಗ ಕಡಿಮೆ ಮತ್ತು ಮಧ್ಯಮ ಆರ್‌ಪಿಎಂನಲ್ಲಿ ಹೆಚ್ಚಿನ ಟಾರ್ಕ್ ಅನ್ನು ಉತ್ಪಾದಿಸುತ್ತವೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

ಇದರ ಪರಿಣಾಮವಾಗಿ ಎಂಜಿನ್‌ನ ಎಲೆಕ್ಟ್ರಾನಿಕ್ಸ್‌ನ ಹೊಂದಾಣಿಕೆಯು ಹೆಚ್ಚಿನ ಕಾರ್ಯಕ್ಷಮತೆಯನ್ನು ತರಲು ಸಹಾಯ ಮಾಡಿದೆ. ಅದರ ಯುರೋ 4 ಸ್ಪೆಕ್‌ನಲ್ಲಿರುವ ಎಂಜಿನ್ 7,750 ಆರ್‍‍ಪಿಎಂನಲ್ಲಿ 79.1 ಬಿಹೆ‍ಚ್‍‍ಪಿ ಪವರ್ ಮತ್ತು 5,000 ಆರ್‍‍ಪಿಎಂನಲ್ಲಿ 80 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

2021ರ ಮೋಟೋ ಗುಜಿ ವಿ85 ಟಿಟಿ ಬೈಕ್ ಈಗ ನವೀಕರಿಸಿದ ಗ್ರಾಫಿಕ್ಸ್ ಅನ್ನು ಡ್ಯುಯಲ್-ಟೋನ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಬೈಕನ್ನು ನೀರೋ ಎಟ್ನಾ ಬ್ಲ್ಯಾಕ್, ಜಿಯಲ್ಲೊ ಮೊಜಾವೆ ಯೆಲ್ಲೋ ಮತ್ತು ರೊಸ್ಸೊ ಉಲುರು ರೆಡ್ ಎಂಬ ಮೂರು ಬಣ್ಣ ಆಯ್ಕೆಗಳಿಂದ ಗ್ರಾಹಕರು ಆಯ್ಕೆ ಮಾಡಬಹುದು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

2021ರ ಮೋಟೋ ಗುಜಿ ವಿ85 ಟಿಟಿ ಬೈಕಿನ ಪ್ಯಾಕೇಜ್ ಸಹ ಒಂದೆರಡು ನವೀಕರಣಗಳನ್ನು ಪಡೆಯುತ್ತದೆ. ಈ ಹೊಸ ಬೈಕಿನಲ್ಲಿ ಸ್ಟ್ರಾಡಾ (ಸ್ಟ್ರೀಟ್), ಪಿಯೋಗಿಯಾ (ರೈನ್), ಆಫ್-ರೋಡ್, ಸ್ಪೋರ್ಟ್ ಮತ್ತು ಕಸ್ಟಮ್. ಸ್ಪೋರ್ಟ್ ಮತ್ತು ಕಸ್ಟಮ್ ಎಂಬ ಐದು ರೈಡಿಂಗ್ ಮೋಡ್ ಗಳನ್ನು ಹೊಂದಿರಲಿವೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

2021ರ ಮೋಟೋ ಗುಜಿ ವಿ85 ಟಿಟಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಅಪ್‌ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.ಪ್ರೀ ಲೋಡ್ ಮತ್ತು ಡ್ಯಾಂಪಿಂಗ್‌ಗಾಗಿ ಎರಡೂ ತುದಿಗಳಲ್ಲಿ ಪೂರ್ಣ ಹೊಂದಾಣಿಕೆ ನೀಡಲಾಗುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

ಇನ್ನು ಹೊಸವಿ 85 ಟಿಟಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್-ಫ್ಲೋಟಿಂಗ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ರೋಟರ್ ಹೊಂದಿದೆ. ಇನ್ನು ಈ ಬೈಕ್ 1.5 ಕೆಜಿ ಹಗುರವಾದ ಸ್ಪೋಕ್ಡ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಅನಾವರಣವಾಯ್ತು 2021ರ ಮೋಟೋ ಗುಜಿ ವಿ85 ಟಿಟಿ ಬೈಕ್

ಮೋಟೋ ಗುಜಿ ತನ್ನ 2021ರ ವಿ85 ಟಿಟಿ ಬೈಕ್ ಅನ್ನು ನವೀಕರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಳಾಗಿದೆ. ಈ ಹೊಸ ಮೋಟೋ ಗುಜಿ ವಿ85 ಟಿಟಿ ಬೈಕ್ ಭಾರತೀಯ ಮಾರುಕಟ್ಟೆಯನ್ನು ತಲುಪುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Monday, January 18, 2021, 17:34 [IST]
English summary
2021 Moto Guzzi V85 TT Globally Revealed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+