ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Moto Guzzi ತನ್ನ V85 TT ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ Moto Guzzi V85 TT ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15.40 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಹೊಸ Moto Guzzi V85 TT ಇತ್ತೀಚಿನ ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಣಗಳನ್ನು ಸಹ ಪಡೆದುಕೊಂಡಿದೆ. ಈ ಬೈಕ್ 853 ಸಿಸಿ, ಏರ್-ಕೂಲ್ಡ್, ಟ್ರಾನ್ಸ್ವರ್ಸ್, 90-ಡಿಗ್ರಿ ವಿ-ಟ್ವಿನ್ ಎಂಜಿನ್ ಒಂದೇ ಆಗಿರುತ್ತದೆ, ಆದರೆ ಬಿಗಿಗೊಳಿಸುವ ಹೊರಸೂಸುವಿಕೆ ನಿಯಮಗಳೊಂದಿಗೆ, ಇದು ಗರಿಷ್ಠ ಪವರ್ ಉತ್ಪಾದನೆಯಲ್ಲಿ ಸಣ್ಣ ಕಡಿತವನ್ನು ಕಂಡಿದೆ. Moto Guzzi V85 TT ಮಿಡ್ ವೈಟ್ ಅಡ್ವೆಂಚರ್ ಬೈಕ್ ಆಗಿದ್ದು, ಟ್ರಯಂಫ್ ಟೈಗರ್ 900 ಬೈಕಿನ ಪ್ರತಿಸ್ಪರ್ಧಿಯಾಗಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಈ ಹೊಸ Moto Guzzi V85 TT ಬೈಕಿನಲ್ಲಿ 853 ಸಿಸಿ, ಟ್ರಾನ್ಸ್‌ವರ್ಸ್ ವಿ-ಟ್ವಿನ್, ಎರಡು ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 75 ಬಿಹೆಚ್‌ಪಿ ಪವರ್ ಮತ್ತು 5,000 ಆರ್‌ಪಿಎಮ್‌ನಲ್ಲಿ 82 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

2021ರ Moto Guzzi V85 TT ಬೈಕಿನ ಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಅಪ್‌ಸೈಡ್-ಡೌನ್ ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಲ್ಯಾಟರಲ್ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ.ಪ್ರೀ ಲೋಡ್ ಮತ್ತು ಡ್ಯಾಂಪಿಂಗ್‌ಗಾಗಿ ಎರಡೂ ತುದಿಗಳಲ್ಲಿ ಪೂರ್ಣ ಹೊಂದಾಣಿಕೆ ನೀಡಲಾಗುತ್ತದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್-ಫ್ಲೋಟಿಂಗ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್ ಅನ್ನು ಕೂಡ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ, ಇನ್ನು ಈ ಬೈಕ್ 1.5 ಕೆಜಿ ಹಗುರವಾದ ಸ್ಪೋಕ್ಡ್ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಈ ಹೊಸ ಬೈಕಿನಲ್ಲಿ 23 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ, ಇನ್ನು ಈ ಬೈಕ್ 230 ಕೆಜಿ ಕರ್ಬ್ ತೂಕವನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಸಹ ಒಂದೆರಡು ನವೀಕರಣಗಳನ್ನು ಪಡೆಯುತ್ತದೆ. ಇದರಲ್ಲಿ ಸ್ಟ್ರಾಡಾ (ಸ್ಟ್ರೀಟ್), ಪಿಯೋಗಿಯಾ (ರೈನ್), ಆಫ್-ರೋಡ್, ಸ್ಪೋರ್ಟ್ ಮತ್ತು ಕಸ್ಟಮ್. ಸ್ಪೋರ್ಟ್ ಮತ್ತು ಕಸ್ಟಮ್ ಎಂಬ ಐದು ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

2021ರ Moto Guzzi V85 TT ಬೈಕ್ ಈಗ ನವೀಕರಿಸಿದ ಗ್ರಾಫಿಕ್ಸ್ ಅನ್ನು ಡ್ಯುಯಲ್-ಟೋನ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಬೈಕನ್ನು ನೀರೋ ಎಟ್ನಾ ಬ್ಲ್ಯಾಕ್, ಜಿಯಲ್ಲೊ ಮೊಜಾವೆ ಯೆಲ್ಲೋ ಮತ್ತು ರೊಸ್ಸೊ ಉಲುರು ರೆಡ್ ಎಂಬ ಬಣ್ಣಗಳಲ್ಲಿ ತಮ್ಮೆ ಮೆಚ್ಚಿನ ಬಣ್ನವನ್ನು ಗ್ರಾಹಕರು ಆಯ್ಕೆ ಮಾಡಬಹುದು.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಈ ಹೊಸ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಕೂಡ ಲಭ್ಯವಿದೆ. ಇನ್ನು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಟ್ರಾಕ್ಷನ್ ಕಂಟ್ರೋಲ್ ಆಯ್ದ ಮೋಡ್ ಅನ್ನು ಆಧರಿಸಿ ವಿವಿಧ ಹಂತದ ಹಸ್ತಕ್ಷೇಪವನ್ನು ಹೊಂದಿವೆ. ಇನ್ನು ಈ ಬೈಕಿನಲ್ಲಿ ಇಂಚಿನ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

Moto Guzzi ಮಾರುಕಟ್ಟೆಯಲ್ಲಿ 100 ವರ್ಷಗಳನ್ನು ಪೂರೈಸಿದೆ. ಈ ಶತಮಾನೋತ್ಸವದ ಸಂಭ್ರಮದಲ್ಲಿ ಮೋಟೋ ಗುಜಿ ವಿ7, ವಿ9 ಮತ್ತು ವಿ85 ಟಿಟಿ ಮಾದರಿಗಳ ಸ್ಪೆಷಲ್ ಎಡಿಷನ್ ಮಾದರಿಗಳನ್ನು ಈ ವರ್ಷದ ಆರಂಭದಲ್ಲಿ ಪರಿಚಯಿಸಿದ್ದರು. ಸ್ಪೆಷಲ್ ಎಡಿಷನ್ ಬೈಕ್‌ಗಳಲ್ಲಿ ಸ್ಯಾಟಿನ್-ಸಿದ್ಧಪಡಿಸಿದ ಫ್ಯೂಯಲ್ ಟ್ಯಾಂಕ್, ಗ್ರೀನ್ ಫೇರಿಂಗ್ ಮತ್ತು ಲೆದರ್ ಸೀಟ್, ಮತ್ತು ಮುಂಭಾಗದ ಮಡ್‌ಗಾರ್ಡ್ ಅನ್ನು ಅಲಂಕರಿಸುವ ಗೋಲ್ಡನ್ ಫಿನಿಶ್‌ನೊಂದಿಗೆ ಮೀಸಲಾದ 100 ವರ್ಷದ ಮೋಟೋ ಗುಜಿ ಲೋಗೊವನ್ನು ಸಹ ಒಳಗೊಂಡಿರುತ್ತದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

Moto Guzzi ಸ್ಪೆಷಲ್ ಎಡಿಷನ್ ಬೈಕ್‌ಗಳ ಬಣ್ಣಗಳು 350 ಬಿಯಾಲ್‌ಬೆರೊವನ್ನು ಸಹ ನಿರೂಪಿಸಿವೆ. ಇದು ಬ್ರ್ಯಾಂಡ್ ಇತಿಹಾಸದಲ್ಲಿ ಅತ್ಯಂತ ವಿಜಯಶಾಲಿ ಬೈಕ್‌ಗಳಲ್ಲಿ ಒಂದಾಗಿದೆ. ಈ 350 ಬಿಯಾಲ್‌ಬೆರೊ ಬೈಕ್ ವಿಶ್ವ ಚಾಂಪಿಯನ್‌ಶಿಪ್ ಜಿಪಿ ಮೋಟಾರ್‌ಸೈಕಲ್ ರೇಸಿಂಗ್‌ನಲ್ಲಿ 1953 ರಿಂದ 1957 ರವರೆಗೆ ಸತತ 9 ವಿಶ್ವ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಅದ್ಭುತ ದಾಖಲೆಯನ್ನು ಹೊಂದಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಇಟಾಲಿಯನ್ ಸಂಸ್ಥೆ Moto Guzzi ಬ್ರ್ಯಾಂಡ್ ಮೈಲಿಗಲ್ಲು ವರ್ಷವನ್ನು ಆಚರಿಸಲು ತನ್ನ ಮ್ಯಾಂಡೆಲ್ಲೊ ಡೆಲ್ ಲಾರಿಯೋ ಕಾರ್ಖಾನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ Moto Guzzi ವರ್ಲ್ಡ್ ಡೇಸ್ ಅನ್ನು ಸಹ ಪುನರುಜ್ಜೀವನಗೊಳಿಸಲಾಗುತ್ತದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

2004ರಿಂದ Moto Guzz ಯುರೋಪಿನ ಅತಿದೊಡ್ಡ ಮೋಟಾರ್‌ಸೈಕಲ್ ತಯಾರಕರಾದ ಪಿಯಾಜಿಯೊ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. Moto Guzzi ಬೈಕುಗಳನ್ನು 90-ಡಿಗ್ರಿ ವಿ-ಟ್ವಿನ್ ಎಂಜಿನ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Moto Guzzi V85 TT ಬೈಕ್ ಬಿಡುಗಡೆ: ಬೆಲೆ ರೂ.15.40 ಲಕ್ಷ

ಇನ್ನು ಈ ಬೈಕಿನಲ್ಲಿ ಎಲ್ಲಾ ಎಲ್ಇಡಿ ಲೈಟಿಂಗ್ ಮತ್ತು 19 ಇಂಚಿನ ಮುಂಭಾಗ ಮತ್ತು 17 ಇಂಚಿನ ಹಿಂಭಾಗದ ವ್ಹೀಲ್ ಸಂಯೋಜನೆಯೊಂದಿಗೆ, ಹೊಸ ಟ್ಯೂಬ್ ಲೆಸ್ ಟೈರುಗಳೊಂದಿಗೆ ಬರುತ್ತದೆ. ಇನ್ನು ಅತ್ಯಾಧುನಿಕ ಫೀಚರ್ಸ್, ತಂತ್ರಜ್ಙಾನ ಮತ್ತು ಆಕರ್ಷಕ ಫೀಚರ್ಸ್ ಹೊಂದಿರುವ ಈ Moto Guzzi V85 TT ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟ್ರಯಂಫ್ ಟೈಗರ್ 900 ಬೈಕಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New moto guzzi v85 tt launched in india price features engine detais
Story first published: Friday, September 3, 2021, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X