ಅನಾವರಣವಾಯ್ತು ಬಹುನಿರೀಕ್ಷಿತ 2021ರ ಸುಜುಕಿ ಹಯಾಬುಸಾ ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ತನ್ನ ಹೊಸ ಹಯಾಬುಸಾ ಸೂಪರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. 2021ರ ಸುಜುಕಿ ಹಯಾಬುಸಾ ಕಾಸ್ಮೆಟಿಕ್ ಬದಲಾವಣೆಗಳ ಜೊತೆ ಹೊಸ ಫೀಚರ್ ಗಳನ್ನು ಪಡೆದುಕೊಂಡಿದೆ.

2021ರ ಸುಜುಕಿ ಹಯಾಬುಸಾ ಬೈಕಿನ ವಿನ್ಯಾಸವನ್ನು ನವೀಕರಿಸಲಾಗಿದೆ, ಆದರೆ ಸೂಪರ್ ಬೈಕಿನ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ತೀಕ್ಷ್ಣವಾದ ಲೈನ್ ಗಳು ಮತ್ತು ಹೊಸ ಫಾಸಿಕವನ್ನು ಹೊಂದಿದೆ. ಈ ಸೂಪರ್ ಬೈಕ್ ಒಟ್ಟಾರೆ ಲುಕ್ ಹೆಚ್ಚು ಸ್ಪೋರ್ಟಿ ಮತ್ತು ಅಗ್ರೇಸಿವ್ ಆಗಿದೆ.

ಹಯಾಬುಸಾ ಸೂಪರ್ ಬೈಕ್ ಎಲ್ಇಡಿ ಲೈಟ್ ಗಳನ್ನು ಹೊಂದಿವೆ. ಇದು ಹೆಡ್ ಲ್ಯಾಂಪ್ ಮತ್ತು ಟೈಲ್ ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿರುವ ಇಂಡಿಕೇಟರ್ ಸ್ಥಾನ ಲೈಟ್ ಗಳೊಂದಿಗೆ ಸಂಯೋಜಿಸಲಾಗಿದೆ, ಮುಂಭಾಗದ ಏರ್ ಟೆಕ್ ಹೊರಭಾಗದಲ್ಲಿ ಇರಿಸಲಾಗುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹಯಾಬುಸಾದಲ್ಲಿ ಬೈಕಿನಲ್ಲಿ ತೀಕ್ಷ್ಣವಾದ ಲೈನ್ ಗಳನ್ನು ನೀಡಲಾಗಿದೆ. ಇದು ಹೆಚ್ಚು ಸ್ಪೋರ್ಟಿ ಮತ್ತು ಆಕರ್ಷಕವಾಗಿದೆ. ಸೂಪರ್‌ಬೈಕ್‌ನ 2021 ಆವೃತ್ತಿಯು ದೊಡ್ಡ ಡ್ಯುಯಲ್ ಕ್ರೋಮ್-ಲೇಪಿತ ಎಕ್ಸಾಸ್ಟ್ ಪೈಪ್ಸ್ ಅನ್ನು ಹೊಂದಿದೆ. ಇದು ಹಯಾಬುಸಾದ ಕಮಾಂಡಿಂಗ್ ಸ್ವರೂಪವನ್ನು ಹೆಚ್ಚಿಸುತ್ತದೆ.

ಇನ್ನು ಈ ಸೂಪರ್ ಬೈಕ್ ಫೀಚರ್ ಗಳ ಬಗ್ಗೆ ಹೇಳುವುದಾದರೆ, ಹಲವಾರು ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇದು ಹೊಸ ಸ್ವಿಚ್‌ಗಿಯರ್ ಜೊತೆಗೆ ರೈಡರಿಗೆ ವಿವಿಧ ರೈಡರ್ ಅಸಿಸ್ಟ್ ಆಯ್ಕೆಗಳ ನಡುವೆ ನ್ಯಾವಿಗೇಟ್ ಅನ್ನು ನೀಡಿದೆ. ಇನ್ನು 2021ರ ಸುಜುಕಿ ಹಯಾಬುಸಾದಲ್ಲಿ ಕೆಲವು ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಏಡ್ಸ್, ಮೂರು ಪವರ್ ಮೋಡ್‌ಗಳು, ಲಾಂಚ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ

ಇದರೊಂದಿಗೆ ಕಾರ್ನರಿಂಗ್ ಎಬಿಎಸ್, ಹಿಲ್-ಹೋಲ್ಡ್ ಕಂಟ್ರೋಲ್, ಹೊಸ ಸಿಕ್ಸ್-ಆಕ್ಸಿಸ್ ಐಎಂಯು ಮತ್ತು ಮೂರು ಹಂತದ ಎಂಜಿನ್ ಬ್ರೇಕಿಂಗ್, ಟ್ರ್ಯಾಕ್ಷನ್ ಕಂಟ್ರೋಲ್ ಆಂಟಿ ವ್ಹೀಲಿ ಕಂಟ್ರೋಲ್ ಹತ್ತು ಹಂತಗಳನ್ನು ಹೊಂದಿದೆ. ಹಯಾಬುಸಾ ಬ್ರಾಂಡ್‌ನ ಎಸ್,ಐ,ಆರ್,ಎಸ್ ತಂತ್ರಜ್ಞಾನವನ್ನು (ಸುಜುಕಿ ಇಂಟೆಲಿಜೆಂಟ್ ರೈಡ್ ಸಿಸ್ಟಂ) ಸಹ ಒಳಗೊಂಡಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಸುಜುಕಿ ಹಯಾಬುಸಾ ಅದೇ ಅಲ್ಯೂಮಿನಿಯಂ ಫ್ರೇಮ್ ಅನ್ನು ಮುಂದಕ್ಕೆ ಸಾಗಿಸುತ್ತದೆ, ಇನ್ನು ಈ ಸೂಪರ್ ಬೈಕ್ ಅದರ ಹಿಂದಿನ ಮಾದರಿಗಳಂತೆಯೇ ಆಯಾಮಗಳನ್ನು ಹೊಂದಿದೆ. ಇನ್ನು ಅದೇ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.

ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಆರು-ವೇಗದ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ ಬೈ-ಡೈರಕ್ಷನಲ್ ಕ್ವಿಕ್-ಶಿಫ್ಟರ್ ಮತ್ತು ರೈಡ್-ಬೈ-ವೈರ್ ತಂತ್ರಜ್ಞಾನಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

2021ರ ಸುಜುಕಿ ಹಯಾಬುಸಾ ಬೈಕ್ 265 ಕೆಕೆ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 20-ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೋಂದಿದೆ. ಇನ್ನು ಈ ಬೈಕ್ 125 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಹೊಸ ಹಯಾಬುಸಾ ಬೈಕ್ ಗ್ಲೋಸ್ ಸ್ಪಾರ್ಕ್ಲಿ ಕಪ್ಪು/ಕ್ಯಾಂಡಿ ಬರ್ನ್ಟ್ ಗೋಲ್ಡ್, ಮೆಟಾಲಿಕ್ ಮ್ಯಾಟ್ ಸ್ವೋರ್ಡ್ ಸಿಲ್ವರ್/ಕ್ಯಾಂಡಿ ಡೇರಿಂಗ್ ರೆಡ್ ಮತ್ತು ಪರ್ಲ್ ಬ್ರಿಲಿಯಂಟ್ ವೈಟ್/ಮೆಟಾಲಿಕ್ ಮ್ಯಾಟ್ ಸ್ಟೆಲ್ಲಾರ್ ಬ್ಲೂ ಎಂಬ ಬಣ್ಣಗಳಲ್ಲಿ ಲಭ್ಯವಿರಲಿದೆ.

ಸುಜುಕಿ ಹಯಾಬುಸಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತು ಭಾರತದಲ್ಲಿ ಅತ್ಯಂತ ಜನಪ್ರಿಯ ಸೂಪರ್‌ಬೈಕ್‌ಗಳಲ್ಲಿ ಒಂದಾಗಿದೆ. 2021ರ ಸೂಪರ್‌ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಸಿಕೆಡಿ ಅಥವಾ ಸಿಬಿಯು ಆಗಿ ತರಲಾಗುತ್ತದೆ.


Click it and Unblock the Notifications








