ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ Triumph Motorcycles ತನ್ನ ಹೊಸ Speed Twin ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ Triumph Speed Twin ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.99 ಲಕ್ಷಗಳಾಗಿದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

2021ರ Triumph Speed Twin ಬೈಕ್ ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. Triumph ಕಂಪನಿಯು Speed Twin ಬೈಕಿನ ಖರೀದಿಗಾಗಿ ಪ್ರಿ-ಬುಕ್ಕಿಂಗ್ ಅನ್ನು ಭಾರತದಲ್ಲಿ ಜೂನ್ ತಿಂಗಳಿನಂದಲೇ ಪ್ರಾರಂಭಿಸಿದ್ದಾರೆ. ಈ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.ಈ ಹೊಸ Triumph Speed Twin ಬೈಕನ್ನು ಯುರೋ5 ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಹೊಸ Triumph Speed Twin ಬೈಕ್ ಇದೀಗ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಹೊಂದಿದೆ. ಜೊತೆಗೆ ಚಾಸಿಸ್ ಮತ್ತು ಎಲೆಕ್ಟ್ರಾನಿಕ್ಸ್ ಸೂಟ್‌ಗೆ ನವೀಕರಣಗಳನ್ನು ಒಳಗೊಂಡಿದೆ. ಇನ್ನು ಈ ಬೈಕ್ ಹೊಸ ಕಾಸ್ಮೆಟಿಕ್ ಬದಲಾವಣೆಗಳಿವೆ, ಇನ್ನು ಈ ಹೊಸ Triumph Speed Twin ಬೈಕಿನಲ್ಲಿ 1,200 ಸಿಸಿ 'ಹೈ ಪವರ್' ಎಂಜಿನ್ ಹೊಂದಿದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಇದರ ಹೊಸ ಬ್ಯಾಲೆನ್ಸರ್ ಶಾಫ್ಟ್, ಹೊಸ ಕ್ಯಾಮ್ ಪ್ರೊಫೈಲ್, ಪರಿಷ್ಕೃತ ಪೋರ್ಟ್ಸ್ ಮತ್ತು ಹೆಚ್ಚಿನ ಕಂಪರೇಷನ್ ಪಿಸ್ಟನ್‌ಗಳು ಈ ನವೀಕರಣಗಳನ್ನು ಪಡೆದುಕೊಂಡಿದೆ. Triumph Speed Twin ಬೈಕಿನಲ್ಲಿ ನೀಡಿರುವ 1,200 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ 7,250 ಆರ್‌ಪಿಎಂನಲ್ಲಿ 99 ಬಿಹೆಚ್‌ಪಿ ಮತ್ತು 4,250 ಆರ್‌ಪಿಎಂನಲ್ಲಿ 112 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಹೊಸ Triumph Speed Twin ಬೈಕಿನ ಒಟ್ಟಾರೆ ಸಿಲೂಯೆಟ್ ಒಂದೇ ಆಗಿರುತ್ತದೆ, ಆದರೆ ಕೆಲವು ವಿಶಿಷ್ಟವಾದ ಬದಲಾವಣೆಗಳಿವೆ, ಹೆಚ್ಚು ಪ್ರೀಮಿಯಂ ಶೈಲಿಯನ್ನು ಮತ್ತು ವಿವರಗಳನ್ನು ನೀಡುತ್ತವೆ. ಈ ಬೈಕ್ 14.5 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಇದು ಹೊಸ ಗ್ರಾಫಿಕ್ಸ್ ಪಡೆಯುತ್ತದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಈ ಬೈಕಿನಲ್ಲಿ ಹೊಸ ಹೆಡ್‌ಲ್ಯಾಂಪ್, ಸೈಲೆನ್ಸರ್‌ಗಳು ಬ್ರಷ್ಡ್ ಅಲ್ಯೂಮಿನಿಯಂ ಫಿನಿಶ್ ಪಡೆಯುತ್ತವೆ, ಇದರೊಂದಿಗೆ ಇತರ ಪ್ರೀಮಿಯಂ ಬಿಟ್‌ಗಳಲ್ಲಿ ಕ್ಲಾಸಿಕ್ ಮೊನ್ಜಾ ಫ್ಯೂಯಲ್ ಕ್ಯಾಪ್ ಮತ್ತು ಆನೊಡೈಸ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಸೇರಿವೆ. ಇನ್ನು ಹೊಸ ಟ್ರಯಂಫ್ ಸ್ಪೀಡ್ ಟ್ವಿನ್‌ ಬೈಕಿನ ಮುಂಭಾಗ ಮತ್ತು ಹಿಂಭಾಗದ ಮಡ್‌ಗಾರ್ಡ್‌ಗಳು ಹೊಸ ಮೌಂಟಡ್ ಗಳನ್ನು ಪಡೆಯುತ್ತವೆ, ಇದರ ಹೀಲ್ ಗಾರ್ಡ್‌ಗಳ ಜೊತೆಗೆ ಅಲ್ಯೂಮಿನಿಯಂ ಫಿನಿಷ್ಡ್ ಬ್ರಷ್ ಮಾಡಿದೆ..

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಈ ಹೊಸ ಬೈಕಿನಲ್ಲಿ ರೈನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ, ಇನ್ನು ಇದರಲ್ಲಿ ಥ್ರೊಟಲ್ ರೆಸ್ಪಾನ್ಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳೆರಡನ್ನೂ ಸವಾರರ ಆದ್ಯತೆಗೆ ಸರಿಹೊಂದಿಸಬಹುದು. ಬೈಕ್ ಚಲಿಸುವಾಗ ರೈಡಿಂಗ್ ಮೋಡ್ ಗಳನ್ನು ಬದಲಾಯಿಸಬಹುದಾಗಿದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಇನ್ನು ಈ ಹೊಸ Triumph Speed Twin ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಾರ್ಟ್ರಿಡ್ಜ್ ಡ್ಯಾಂಪಿಂಗ್‌ನೊಂದಿಗೆ 43 ಎಂಎಂ ಮಾರ್ಜೋಚಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡಡ್ ಟ್ವಿನ್ ಶಾಕ್ ಸಸ್ಪೆಂಕ್ಷನ್ ಯುನಿಟ್ ಅನ್ನು ಒಳಗೊಂಡಿದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಇನ್ನು ಪ್ರಮುಖವಾಗಿ ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಬ್ರೆಂಬೊ ಫೋರ್-ಪಿಸ್ಟನ್ ಎಂ 50 ರೇಡಿಯಲ್ ಮೊನೊಬ್ಲೋಕ್ ಕ್ಯಾಲಿಪರ್‌ಗಳು ಟ್ವಿನ್ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಹೊಂದಿರುವ ನಿಸ್ಸಿನ್ ಎರಡು-ಪಿಸ್ಟನ್ ಕ್ಯಾಲಿಪರ್ ಅನ್ನು ಹೊಂದಿದೆ. ಇದರೊಂದಿಗೆ ಈ ಬೈಕಿನಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅನ್ನು ಹೊಂದಿದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಇದರೊಂದಿಗೆ Triumph Motorcycles ತನ್ನ ಹೊಸ Tiger Sport 660 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ Triumph ಕಂಪನಿಯು ತನ್ನ ಬಹುನಿರೀಕ್ಷಿತ Tiger Sport 660 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ Triumph Tiger Sport 660 ಬೈಕ್ ಮುಂಬರುವ ತಿಂಗಳುಗಳಲ್ಲಿ ಜಾಗತಿಕ ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಆದರೆ ಈ ಹೊಸ Triumph Tiger Sport 660 ಬೈಕ್ ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ Triumph ಬೈಕಿನ ಮೊದಲ ಚಿತ್ರಗಳು ಇದರ ಮೂಲಮಾದರಿಯ ರೂಪದಲ್ಲಿ ಬಹಿರಂಗಪಡಿಸಿವೆ. ಈ ಬೈಕ್ ಸೆಮಿ-ಫೇರಿಂಗ್ ವಿನ್ಯಾಸವನ್ನು ಒಳಗೊಂಡಿರುತ್ತದೆ ಜೊತೆಗೆ ವಿಂಡ್ ಬ್ಲಾಸ್ಟ್ ರಕ್ಷಣೆ ಮತ್ತು ಉತ್ತಮ ಟೂರಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ.

ಭಾರತದಲ್ಲಿ 2021ರ Triumph Speed Twin ಬೈಕ್ ಬಿಡುಗಡೆ: ಬೆಲೆ ರೂ.10.99 ಲಕ್ಷ

ಹೊಸ Triumph Speed Twin ಬೈಕ್ ಬ್ರಷ್ ಮಾಡಿದ ಅಲ್ಯೂಮಿನಿಯಂ ಫಿನಿಶ್ ಅನ್ನು ಪಡೆಯುತ್ತವೆ, ಇತರ ಪ್ರೀಮಿಯಂ ಬಿಟ್‌ಗಳು ಕ್ಲಾಸಿಕ್ ಮೊನ್ಜಾ ಫ್ಯೂಯಲ್ ಕ್ಯಾಪ್ ಮತ್ತು ಕ್ಲಿಯರ್ ಅನೋಡೈಸ್ಡ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಅನ್ನು ಒಳಗೊಂಡಿವೆ. ಒಟ್ಟಿನಲ್ಲಿ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುವ ಬಹುನಿರೀಕ್ಷಿತ riumph Speed Twin ಬೈಕ್ ಆಕರ್ಷಕ ವಿನ್ಯಾಸದೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ.

More from DriveSpark

Article Published On: Tuesday, August 31, 2021, 18:14 [IST]
English summary
2021 triumph speed twin launched in india new updates price engine details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+